ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಗಟ್ಟಲೆ ಸರ್ಕಾರಿ ಕಚೇರಿಗೆ ಇನ್ನು ಅಲೆಯಬೇಕಿಲ್ಲ

By Prasad
|
Google Oneindia Kannada News

S Suresh Kumar
ಬೆಂಗಳೂರು, ಡಿ. 15 : ಸರಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮತ್ತು ಕರ್ತವ್ಯಪ್ರಜ್ಞೆ ಮರೆಯುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಉದ್ದೇಶದಿಂದ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ 2011 ಅನ್ನು ಸರಕಾರ ಅಂಗೀಕಾರ ಮಾಡಿತು.

ಈ ಮಸೂದೆಯನ್ನು ಸದನದಲ್ಲಿ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು, ಆಡಳಿತದಲ್ಲಿ ಹೊಣೆಗಾರಿಕೆ ತರುತ್ತದೆ ಮತ್ತು ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದವರನ್ನು ಶಿಕ್ಷಿಸಬಹುದಾಗಿದೆ ಎಂದು ವಿವರಿಸಿದರು.

ಈ ಕಾನೂನಿನಿಂದಾಗಿ ನಾಗರಿಕರು ವರ್ಷಾನುಗಟ್ಟಲೆ ಫೈಲ್ ಹಿಡಿದುಕೊಂಡು ಸರಕಾರಿ ಕಚೇರಿಗೆ ಎಡತಾಕಬೇಕಾಗಿಲ್ಲ. ನಿಗದಿತ ಸಮಯದಲ್ಲಿಯೇ ಅಧಿಕಾರಿ ಮತ್ತು ಅವರ ಕೆಳಗಿನವರು ಕೆಲಸ ಮಾಡಿ ಕೊಡಬೇಕಾಗುತ್ತದೆ ಮತ್ತು ಅದನ್ನು ನೋಟೀಸ್ ಬೋರ್ಡ್ ಮೇಲೆ ಅಂಟಿಸಬೇಕಾಗುತ್ತದೆ ಎಂದು ಸುರೇಶ್ ನುಡಿದರು.

ಸದ್ಯಕ್ಕೆ 11 ಇಲಾಖೆಗಳಲ್ಲಿ 157 ಸೇವೆಗಳು ಈ ಮಸೂದೆಯ ವ್ಯಾಪ್ತಿಯಲ್ಲಿ ಬರುತ್ತವೆ. ಉಳಿದ ಸೇವೆಗಳನ್ನು ಮತ್ತು ಎಲ್ಲಾ ಇಲಾಖೆಗಳನ್ನು ಇದರಡಿಯಲ್ಲಿ ತರಲಾಗುವುದು ಎಂದರು. ಕರ್ತವ್ಯಚ್ಯುತಿ ಮಾಡಿದವರ ಹೆಸರನ್ನು ದಾಖಲಿಸಿಕೊಳ್ಳಲಾಗುವುದು ಮತ್ತು ಅವರ ಬಡ್ತಿಯನ್ನು ಹಿಡಿದಿಟ್ಟುಕೊಳ್ಳಲಾಗುವುದು ಎಂದು ಅವರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

English summary
Karnataka assembly has passed The Karnataka Guarantee of Services To Citizens Bill 2011 on Wednesday, December 14. Law and parliamentary minister S Suresh Kumar said the legislation enables accountability and punishment for employees who fail to discharge their duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X