ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಆಡಳಿತ ಗೊತ್ತು, ಎಂ ಆಡಳಿತ ಅಂದರೇನು ?

By Mahesh
|
Google Oneindia Kannada News

Nanendra Modi
ಅಹಮದಾಬಾದ್, ಡಿ.15: ಇತರೆ ರಾಜ್ಯಗಳು ಇನ್ನೂ ತಮ್ಮ ಕಚೇರಿಗಳಲ್ಲಿ ಕಂಪ್ಯೂಟರ್ ಅಳವಡಿಸಿಕೊಳ್ಳಲು ಹೆಣಗುತ್ತಿರುವಾಗ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇ ಆಡಳಿತದ ಮುಂದಿನ ಹೆಜ್ಜೆ ಇಟ್ಟಿದ್ದು, ಮೊಬೈಲ್ ಬ್ಯಾಂಕಿಂಗ್ ಜಾಲ ವಿಸ್ತರಣೆಗೆ ಕರೆ ನೀಡಿದ್ದಾರೆ.

ಗಾಂಧಿನಗರದ ಮಹಾತ್ಮ ಮಂದಿರ್ ನಲ್ಲಿ ನಡೆಯುತ್ತಿರುವ ಮೂರು ದಿನಗಳ 'ಇ ಇಂಡಿಯಾ' ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಮೊಬೈಲ್ ಫೋನ್ ಸದ್ಬಳಕೆ ಬಗ್ಗೆ ಹೆಚ್ಚಿನ ವಿವರ ನೀಡಿದರು.

ಜನಸಾಮಾನ್ಯರ ದಿನನಿತ್ಯದ ಸಂಗಾತಿಯಾಗಿರುವ ಮೊಬೈಲ್ ಫೋನ್ ಅನ್ನು ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಇ ಆಡಳಿತದ ಪರಿಧಿಗೆ ಸೇರಿಸಿಕೊಳ್ಳುವ ನಮ್ಮ ಇರಾದೆ ಸಫಲವಾಗುತ್ತಿದೆ.

ಮೊಬೈಲ್ ಫೋನ್ ಬಳಕೆ ಸುಲಭವಾಗಿರುವುದರಿಂದ ಹೆಚ್ಚೆಚ್ಚು ಅಪ್ಲಿಕೇಷನ್ ಗಳನ್ನು ಬಳಸಿ ಜನಸಾಮಾನ್ಯರ ದೈನಂದಿನ ಚಟುವಟಿಕೆಯ ಕಾರ್ಯ ಕ್ಷಮತೆ ಹೆಚ್ಚಿಸಬೇಕಿದೆ.

ಕೈಗಾರಿಕಾ ಕ್ರಾಂತಿ ಆದ ಸಂದರ್ಭದಲ್ಲಿ ಭಾರತ ದಾಸ್ಯದ ಸಂಕೋಲೆ ತೊಟ್ಟು ಕೂತಿತ್ತು. ಆದರೆ, ಈಗ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಸಾಧಿಸಿ 'ಹಾವು ಹಿಡಿಯುವವರ' ದೇಶದಿಂದ 'ಮೌಸ್ ಹಿಡಿಯುವವರ' ದೇಶವಾಗಿ ರೂಪುಗೊಂಡಿದೆ.

ಇ ಗುಜರಾತ್ : ಭೂ ಮತ್ತು ಕಂದಾಯ ಇಲಾಖೆಯನ್ನು ಗಣಕೀರಣಗೊಳಿಸುವ ಮಹತ್ವದ ಯೋಜನೆ 'ಇ ಧಾರಾ' ಮುಂಚೂಣಿಯಲ್ಲಿದೆ. 18,000 ಗ್ರಾಮಗಳಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗಿದೆ.

ಸಾರ್ವಜನಿಕ ಸಂಪರ್ಕಕ್ಕಾಗಿ 'ಸ್ವಾಗತ್', ದೂರ ಕಲಿಕಾ ವಿಧಾನದ 'ಇ ಕಲಿಕಾ' ಕಾರ್ಯಕ್ರಮ ಯಶಸ್ವಿಯಾಗಿದೆ. 'e' ಅಕ್ಷರ ದಿಂದ easy, economic and effective ಆಡಳಿತ ನೀಡುವುದು ನಮ್ಮ ಗುರಿ ಎಂದು ಮೋದಿ ಹೇಳಿದರು.

English summary
Narendra Modi on Wednesday, Dec 14 suggested a new way for better governance to solve people's problems in a three day conference of e-INDIA at Mahatma Mandir at Gandhinagar. Modi said his desire that Indians use IT with much ease as they handled mobile phones efficiently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X