ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲೇಹ್ ಜಾಯೇಂಗೆ’ ಬಗ್ಗೆ ಅನಂತಮೂರ್ತಿ ಉಲ್ಲೇಖಾರ್ಹ ಮಾತುಗಳೇನು?

By Srinath
|
Google Oneindia Kannada News

ura-review-on-satyamurthy-anandur-leh-jayenge
ಬೆಂಗಳೂರು, ಡಿ.14: ಈ ಪುಸ್ತಕ ಓದಿದ ಯಾರೂ ಈ ವಿವರವನ್ನು ಮರೆಯುವುದಿಲ್ಲ. ಸತ್ಯಮೂರ್ತಿ ನಮ್ಮ ಈ ಕಾಲದ ಚಿಂತನಾ ಕ್ರಮವನ್ನೆಲ್ಲ ಮೈಗೂಡಿಸಿಕೊಂಡವರು. ಹಿಡಿಂಬಾದೇವಿಯ ಬಗ್ಗೆ ಅವರು ಹೇಳುವ ಈ ಮಾತನ್ನು ನೋಡಿ: (Page No: 62)

ಭೀಮನನ್ನು ನಾವು ಉತ್ತಮರ ಪಟ್ಟಿಯಲ್ಲಿ ನೋಡುವುದಾದರೆ ಹಿಡಿಂಬೆಯನ್ನು ಯಾಕೆ ನಾವು ಅದೇ ಸ್ಥಾನದಲ್ಲಿ ನೋಡಬಾರದು? ದ್ರೌಪದಿಗಿರುವಷ್ಟೇ ಮಾನ್ಯತೆ ಅವಳಿಗೂ ಇಅರಬೇಕಲ್ಲವೆ? ಪಾಂಡವರನ್ನು ಮದುವೆಯಾದ ಹೆಂಗಸರಷ್ಟೇ ಈಕೆಯೂ ಪ್ರಮುಖಳಲ್ಲವೆ? ನಮ್ಮಲ್ಲಿ ಸಂಸ್ಕ್ರೃತೀಕರಣದ ಪ್ರಭಾವವದಿಂದ ಎಷ್ಟೊಂದು ಗ್ರಾಮದೇವತೆಗಳೆಲ್ಲಾ ನಾಶವಾದವು? ಗಿರಿಜನ ಬುಡಕಟ್ಟು ಜನಾಂಗಗಳ ನಂಬಿಕೆಗನ್ನೇ ಅಳಿಸಿ, ನಾವು ಎಂಥ ಭೀಕರವಾದ ಬೌದ್ಧಿಕ ಅತ್ಯಾಚಾರ ಎಸಗುತ್ತಿದ್ದೇವೆ ಅನ್ನಿಸಿತು. ಎಷ್ಟೋ ಸಾವಿರ ವರ್ಷಗಳಿಂದ ಆಚರಣೆಯ ರೂಪದಲ್ಲಿ ನಡೆದು ಬಂದ ಪದ್ಧತಿಗಳು ನಮ್ಮ ಸಾಂಸ್ಕೃತಿಕ ಆಡಂಬರದಲ್ಲಿ ಹೇಳ ಹೆಸರಿಲ್ಲದಂತೆ ನಾಮಾವಶೇಷವಾದವು.

ಸತ್ಯಮೂರ್ತಿಗೆ ಕಣ್ಣೂ ಇದೆ, ಒಳಗಣ್ಣೂ ಇದೆ. ಮನಾಲಿಯ ಗಾಳಿ ಇನ್ನೂ ಬೀಸದ 'ನಗ್ಗರ್" ಎಂಬ ಪೇಟೆಯ ವರ್ಣನೆಯನ್ನು ನೋಡಿ. Page no: 66

ಒಂದು ಪಾರ್ಶ್ವದಲ್ಲಿ, ಅದನ್ನು ಇನ್ನೂ ಎತ್ತರಗೊಳಿಸುವ ಉದ್ದದ ದೇವದಾರು ಮರ, ಇನ್ನೊಂದು ಪಾರ್ಶ್ವದಲ್ಲಿ ಕೆಳಗೆ, ಸುಮಾರು ನೂರಿನ್ನೂರು ಮೀಟರುಗಳ ಚದುರಿದಂತೆ ಮನೆಗಳು, ಇಡೀ ಭಾರತದ ಮನೆಗಳಿಗೆ ಒಂದು ಪದ್ಧತಿ ಇದ್ದರೆ, ಇಲ್ಲಿನ ಮನೆಗಳದೇ ಒಂದು ಶೈಲಿ. ಮೇಲಿನಿಂದ ನೋಡಿದರೆ ಮನೆಗಳ ಛಾವಣಿಗೆ ಹೊದಿಸಿದ ಹೆಂಚು ಕಲ್ಲಿನದು. ಕಲ್ಲಿನ ಛಾವಣಿ, ಕಲ್ಲಿನ ಗೋಡೆ! ಅದಕ್ಕೆ ಆಧಾರವಾಗಿ ಮರದ ದಿಮ್ಮಿಗಳು. ಮುಖ್ಯ ಮನಾಲಿ ಬಿಟ್ಟರೆ ಇಡೀ ಪ್ರಾಂತ್ಯದಲ್ಲಿ ಇದೇ ಶೈಲಿ.

ಪ್ರಕೃತಿಗೂ ಮನುಷ್ಯ ಸೃಷ್ಟಿಗೂ ಇರುವ ಸಂಬಂಧಗಳು ತೀರ್ಥಹಳ್ಳಿ ಕಡೆಯಿಂದ ಹುಟ್ಟಿ ಬಂದ ಸತ್ಯಮೂರ್ತಿಗೆ ಇದೆ ಎಂಬುದು ನನಗೆ ಅಭಿಮಾನದ ವಿಷಯ. Page no: 69
'ಇಲ್ಲಿನ ಮನೆಗಳ ಚೆಲುವಿಗೆ ಎಂಥವರೂ ಮಾರುಹೋಗಬೇಕು. ಬಿಯಾಸ್ ನದಿಯ ಬಗ್ಗೆ ಈ ಹಿಂದೆ ಹೇಳಲಾಗಿದೆ. ಈ ಪ್ರದೇಶವೆಲ್ಲ ಬಳಪದ ಕಲ್ಲಿನದರುಗಳಿಂದ ನಿರ್ಮಿತವಾಗಿರುವುದರಿಂದ ಪ್ರಕೃತಿಯಿಂದ ಮನುಷ್ಯನಿಗೆ ಸಿಗುವ ಪ್ರಮುಖ ಕಚ್ಚಾವ ಸ್ತುವೇ ಈ ಕಲ್ಲು. ಅದನ್ನು ಬಿಟ್ಟರೆ ಆಗಸವನ್ನು ಚುಂಬಿಸುವ ದೇವದಾರು ಮರಗ. ಹಾಗಾಗಿ ಇಲ್ಲಿನ ಮನೆಗಳಿಗೆ ಪ್ರಮುಖ ವಸ್ತುವೇ ಶಿಲೆ ಮತ್ತು ಕಾಷ್ಠ. ಇವೆರಡನ್ನೊ ಬಳಸಿ ಮಾಡಿದ ಅಪೂರ್ವ ಶಿಲ್ಪದಂತಿರುವ ಈ ಮನೆಗಳು ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲ, ಪ್ರಕೃತಿಯ ಅತಿರೇಖಗಳಿಗೂ ಮೈಯೊಡ್ಡಿ ನಿಲ್ಲುವಷ್ಟು ಶಕ್ತಿಶಾಲಿಗಳಾಗಿವೆ. ಒಂದು ಸಾಲು ಕಲ್ಲು, ಇನ್ನೊಂದು ಸಾಲುಗಟ್ಟಿ ಮರದ ಉದ್ದ ತುಂಡಿನ ಆಧಾರ - ಹೇಗೆ ನಿರ್ಮಿಸಲಾದ ಗೋಡೆ. ಕಟಾಂಜನವೆಲ್ಲ ಪೂರ್ತಿ ಮರದ್ದೇ. ಮನೆಯ ಹೆಬ್ಬಾಗಿಲು ಮಲೆನಾಡ ಮನೆಗಳಲ್ಲಿರುವಂತೆ ತೀರಾ ಚಿಕ್ಕವು. ಬಾಗಿ ಒಳ ಹೋಗಬೇಕು. ಉಪ್ಪರಿಗೆಗೂ ಮರದ ಮೆಟ್ಟಿಲ ಮೂಲಕ ಹೋಗಬೇಕು. ಉಪ್ಪರಿಗೆಯ ಗೋಡೆಗಳಿಗೆ ಮಾತ್ರ ಪೂರ್ತಿ ಮರವನ್ನೇ ಉಪಯೋಗಿಸುತ್ತಾರೆ. ಹಾಗೆ ನೋಡಿದರೆ ಉಪ್ಪರಿಗೆಗಳಿಲ್ಲದ ಮನೆಗಳೇ ಕಡಿಮೆ. ಛಾವಣಿಯ ಮೇಲೆ ಬಳಪದ ಕಲ್ಲಿನ ತೆಳ್ಳಗಿನ ಪದರವೊಂದನ್ನು ಮೈಸೂರು ಪಾಕಿನ ರೀತಿಯಲ್ಲಿ ಕತ್ತರಿಸಿ, ಚೌಕಾಕಾರದ ತುಂಡುಗಳಿಂದ ಮುಚ್ಚಲ್ಪಟ್ಟಿದೆ. ಇವು ಎಷ್ಟು ಕರಾರುವಾಕ್ಕಾಗಿ ಜೋಡಣೆಯಾಗಿರುತ್ತದೆಂದರೆ ಎಂಥ ಬಿರುಗಾಳಿಗೂ ಜಗ್ಗುವುದಿಲ್ಲ.

ಸತ್ಯಮೂರ್ತಿ ನನ್ನ ಪಾಲಿಗೆ ನಮ್ಮ ಊರಿನ ಒಬ್ಬ ಹುಡುಗ. ನನಗತ್ಯಂತ ಪ್ರಿಯರಾಗಿ ನನ್ನ ಬಾಲ್ಯಕಾಲದ ಸಖನಾಗಿದ್ದ ಪುರುಷೋತ್ತಮ ಎಂಬ ಅಪರೂರದ ಪ್ರತಿಭೆಯ ಮತ್ತು ಜೀವನ ಸಂತೋಷದ ವ್ಯಕ್ತಿಯೊಬ್ಬನ ಹತ್ತಿರದ ಬಂಧು. ನನಗೆ ಇವರು ತುಂಬಾ ಪ್ರಿಯರಾದದ್ದು ಕೀ ರಂ ನಾಗರಾಜರ ಮನೆಯಲ್ಲಿ. ಬಹಳ ಹಿಂದೆ ನಾನು ಸತ್ಯಮೂರ್ತಿಯನ್ನು ಒಬ್ಬ ಒಳ್ಳೆಯ ಲೇಖಕನಾಗಬಲ್ಲನೆಂದು ಗುರುತಿಸಿದ್ದು ಒಂದು ಸಣ್ಣ ವಿವರದಲ್ಲಿ.

ಲಂಕೇಶ್ ಪತ್ರಿಕೆಗೆ ಬರೆದ ಲೇಖನದಲ್ಲಿ ಸತ್ಯಮೂರ್ತಿ, ಮಲೆನಾಡಿನಲ್ಲಿ ಬೆಳೆಯತೊಡಗಿದ್ದ ಉದ್ದವಾಗಿ, ನೆಟ್ಟಗೆ ಎಲ್ಲೆಲ್ಲೂ ದಾರಿಯುದ್ದಕ್ಕೂ ಕಣ್ಣಿಗೆ ಬೀಳುವ ನೀಲಗಿರಿ ಮರದ ಬಗ್ಗೆ ಬರೆದಿದ್ದರು. ಎಷ್ಟು ಅಪಾಯಕಾರಿಯಾದದ್ದು ಸುಂದರವಾಗಿದೆ ಎಂದು ತನಗೆ ಅನ್ನಿಸಿದ್ದ ಕ್ಷಣವನ್ನು ನೆನಪು ಮಾಡಿಕೊಡಿದ್ದರು. ನೋಡಿ ಇವತ್ತಿಗೂ ನಾನು ಇದನ್ನು ಮರೆತಿಲ್ಲ. ನಾನು ನಿರೀಕ್ಷಿಸಿದ್ದಂತೆ, ಆಶಿಸಿದ್ದಂತೆ ಸಾವಿರಾರು ಮರೆತು ಹೋಗುವ ಮಾತುಗಳನ್ನು ಜೀವನೋಪಾಯಕ್ಕಾಗಿ ಬರೆಯುತ್ತಿರುವ ಹೊತ್ತಿನಲ್ಲೂ ತನ್ನ ಆತ್ಮ ಶಕ್ತಿಯನ್ನು ಈತ ಉಳಿಸಿಕೊಂಡಿದ್ದಾನೆ ಎಂಬುದು ನನಗೆ ತುಂಬ ಅಭಿಮಾನದ ವಿಷಯ. ಇಂತಹ ಪುಸ್ತಕಗಳಿಗೆ ಪ್ರೆಸ್ ಕ್ಲಬ್ ಪ್ರಕಾಶನದಲ್ಲಿ ಪ್ರಕಟಣೆಗೆ ಅವಕಾಶವಿರುವುದನ್ನು ನಾನು ಅಭಿನಂಧಿಸುತ್ತೇನೆ.
- ಯು.ಆರ್.ಅನಂತಮೂರ್ತಿ (18.12.2011)

English summary
UR Ananthamurthy review on Satyamurthy Anandur's book Leh Jayenge. A Traveler's Story by Senior journalist Satyamurthy Anandur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X