ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ಮಂದಿ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಟಾಟಾ?

|
Google Oneindia Kannada News

Malikayya Guttedar
ಬೆಂಗಳೂರು, ಡಿ 14: ಮಹತ್ವದ ಬೆಳವಣಿಗೆಯೊಂದರಲ್ಲಿ ಈಗಾಗಲೇ ಒಡೆದ ಮನೆಯಾಗಿರುವ ರಾಜ್ಯ ಕಾಂಗ್ರೆಸ್ ಮತ್ತೊಮ್ಮೆ ಹೋಳಾಗುವತ್ತ ಸಾಗಿದೆ. ನಾನಾ ಕಾರಣಗಳಿಂದಾಗಿ ಪಕ್ಷದ ವಿರುದ್ದ ಮುನಿಸಿಕೊಂಡಿರುವ ಕೆಲ ಶಾಸಕರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತೊರೆದು ಶರದ್ ಪವಾರ ನೇತೃತ್ವದ NCP ಜೊತೆ ಕೈಜೋಡಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಟಿವಿ9 ವಾಹಿನಿ ಬುಧವಾರ (ಡಿ 14 ) ಪ್ರಸಾರ ಮಾಡಿದ ಫ್ಲ್ಯಾಶ್ ನ್ಯೂಸ್ ಪ್ರಕಾರ, ಅಫ್ಜಲ್ ಪುರ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಸುಮಾರು ಹತ್ತು ಮಂದಿ ಶಾಸಕರು ರಾಜ್ಯದಲ್ಲಿ ಎನ್ ಸಿ ಪಿ ಪಕ್ಷ ಸ್ಥಾಪಿಸುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಸಕ್ತ ಅಸೆಂಬ್ಲಿ ಅಧಿವೇಶನದ ಮುಗಿದ ನಂತರ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮುಂದಿನ ಕಾರ್ಯತಂತ್ರ ರೂಪಿಸಲು ಅತೃಪ್ತ ಶಾಸಕರು ಮುಂದಾಗಲಿದ್ದಾರೆ. ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಶಾಸಕರು ಇದಕ್ಕೆ ಒಲವು ತೋರಿಸಿದ್ದಾರೆಂದು ವಾಹಿನಿ ವರದಿ ಮಾಡಿದೆ. ಭಾರೀ ಕುತೂಹಲ ಮೂಡಿಸಿರುವ ಈ ಬೆಳವಣಿಗೆ ಮುಂದಿನ ದಿನದಲ್ಲಿ ಯಾವ ರೀತಿಯಲ್ಲಿ ತಿರುವು ಪಡೆಯಲಿದೆ ಎನ್ನುವುದು ಕಾದು ನೋಡಬೇಕಷ್ಟೆ.

English summary
Couple of Karnataka Congress MLAs reported flirting with NCP. According to local TV channel Afzalpur MLA Malikayya Guttedar is leading the herd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X