ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಣ2: ಫೇಸ್ ಬುಕ್, ಆರ್ಕುಟ್ ಕನ್ನಡ ಮಯವಾಗಲಿ

By Mahesh
|
Google Oneindia Kannada News

Facebook kannada
ಇಂದು ನಾವು ಕನ್ನಡದಲ್ಲೇ ಕಂಪ್ಯೂಟರ್ ಮೂಲಕ ವ್ಯವಹರಿಸುವುದು ಸಾಧ್ಯವಿದೆ. ದೈನಂದಿನ ಕಾರ್ಯಚಟುವಟಿಕೆಗಳಲ್ಲಿ, ಇಂಟರ್ನೆಟ್ ಮೂಲಕ ಹರಟುವಾಗ, ಪತ್ರವ್ಯವಹಾರ ನೆಡೆಸುವಾಗ, ವಾಣಿಜ್ಯ, ಸರ್ಕಾರಿ ಹಾಗೂ ಇತರೆ ಕಾರ್ಯಚಟುವಟಿಕೆಗಳಲ್ಲಿ ಕನ್ನಡದ ಬಳಕೆ ಆಗುತ್ತಿದೆ.

ಅನೇಕ ತಂತ್ರಾಂಶಗಳು ಕನ್ನಡಕ್ಕೆ ಲಿಪ್ಯಂತರವಾಗಿವೆ. ಫೈರ್‌ಫಾಕ್ಸ್, ಗೂಗಲ್ ಕ್ರೋಮ್, ಲಿಬ್ರೆ ಆಫೀಸ್, ಲಿನಕ್ಸ್ ನ ಕೆಲವು ತಂತ್ರಾಂಶಗಳು ಇತ್ಯಾದಿ ಕನ್ನಡದಲ್ಲಿ ಲಭ್ಯವಿವೆ. (translatation). ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬರೆಯಲು ಹತ್ತು ಹಲವಾರು ಸಾಧನಗಳು ಮತ್ತು ವಿಧಾನಗಳು ಪ್ರಸ್ತುತ.

ಕನ್ನಡ ಮುದ್ರಣ ರಂಗದಲ್ಲಿ ಬೆಳದು ಬಂದ ದಾರಿ, ನಂತರ ಅದು ಕಂಪ್ಯೂಟರ್ ಅನ್ನು ಹೊಕ್ಕು ತನ್ನದೇ ಕೀಬೋರ್ಡ್ ಲೇಔಟ್ ಇತ್ಯಾದಿಗಳನ್ನು ಕೆ.ಪಿ ರಾವ್ ಅವರಿಂದ ಮೊದಲುಗೊಂಡು ಬಹುವಾಗಿ ಬೆಳದಿದೆ.

ಕಂಪ್ಯೂಟರ್ ಅನ್ನು ಚಾಲೂ ಮಾಡಿದ ತಕ್ಷಣವೇ ಕನ್ನಡದಲ್ಲಿ ಪ್ರವೇಶ ಪದ ಕೇಳುವ ಸುಂದರ ಪರದೆ ನಿಮ್ಮ ಮುಂದೆ ಬರುತ್ತದೆ. ಕನ್ನಡದಲ್ಲಿ ಸಾವಿರಾರು ಬ್ಲಾಗುಗಳಿವೆ.

ಗಂಗಾವತಿಗೆ ಬರುವ ಮುಂಚೆಯೇ ಇಲ್ಲಿ ನೆಡೆದಿರುವ ತಯಾರಿ ಇತ್ಯಾದಿಗಳನ್ನು ಕನ್ನಡದಲ್ಲಿ ಚಿತ್ರ ಸಮೇತ ಗಂಗಾವತಿಯ ಕನ್ನಡಿಗರೇ ಜಗತ್ತಿಗೆ ರವಾನಿಸಿದ್ದಾರೆ.

ಕನ್ನಡ ವಿಕಿಪೀಡಿಯಾದಲ್ಲಿ ಕನ್ನಡಿಗರು ಕನ್ನಡಿಗರಿಗಾಗಿ 11 ಸಾವಿರಕ್ಕೂ ಹೆಚ್ಚಿನ ಲೇಖನಗಳನ್ನು ಸಂಪಾದಿಸಿದ್ದಾರೆ. ಜನರೇ ಸಂಪಾದಿಸಿದ ಪದಕೋಶ 1 ಲಕ್ಷ 50 ಸಾವಿರ ಪದಗಳನ್ನು ಹೊಂದಿದ್ದು ವಿಕಿಪೀಡಿಯಾದ ವಿಕ್ಷನರಿಯಲ್ಲಿ ಲಭ್ಯವಿದೆ.

ಕನ್ನಡ ಪತ್ರಿಕೆಗಳು, ವಿದ್ವಾಂಸರು, ಸಿನಿಮಾ ನಟ/ನಟಿಯರು, ರಾಜಕಾರಣಿಗಳು, ಇಂಟರ್ನೆಟ್ ನಲ್ಲಿ ಸೋಶಿಯಲ್ ಮೀಡಿಯಾ ಬಳಸುವ ಇತರ ಕನ್ನಡಿಗರೊಂದಿಗೆ ಸೇರಿಕೊಂಡಿದ್ದು, ಕನ್ನಡವನ್ನು ಕನ್ನಡಿಗ ತಾನಿರುವಲ್ಲಿಯೇ ಅನುಭವಿಸುವಂತೆ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣ ಕನ್ನಡ ಮಯವಾಗಲಿ: ಫೇಸ್‌ಬುಕ್, ಅರ್ಕುಟ್ , ಗೂಗಲ್ ಹೀಗೇ ಯಾವುದೇ ಪುಟವಿರಲಿ ಅವುಗಳನ್ನೆಲ್ಲ ಕನ್ನಡಕ್ಕೆ ತರಲೇ ಬೇಕು ಎಂದೆಣಿಸಿ ಕನ್ನಡದ ಕಂಪನ್ನು ಪಸರಿಸುವ ಬಳಗಗಳೂ ನಿಮಗೆ ಇಲ್ಲಿ ಸಿಗಬಹುದು.

ಆದರೆ, ಭಾಷೆ ಬೆಳೆದಂತೆ ತಂತ್ರಜ್ಞಾನದ ಬೆಳವಣಿಗೆ ಭಾಷೆಯ ಜೊತೆ ಬೆಳದಿಲ್ಲ ಎಂಬುದನ್ನು ಎರಡನೆಯ ಕತೆ ನಿಮ್ಮ ಮುಂದಿಡುತ್ತದೆ. ಸರ್ಕಾರಿ ನೌಕರನೊಬ್ಬ, ತನ್ನ ಕಚೇರಿಯಲ್ಲಿ ಸಹವರ್ತಿಗಳು ಪಡುತ್ತಿದ್ದ ಕಷ್ಟವನ್ನು ನಿವಾರಿಸಲು ತಾನೇ ಖುದ್ದಾಗಿ ಉತ್ತರ ಹುಡುಕಲು ಹೊರಟಿದ್ದೇಕೆ?

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ, ಅದರ ಸುತ್ತಲಿನ ಸಮುದಾಯ ಇವೆಲ್ಲ ಏಕೆ? ಸರ್ಕಾರ ಇದರತ್ತ ಕಣ್ಣು ಹಾಯಿಸಿಲ್ಲವೇ? ಕನ್ನಡಕ್ಕೆ ಇಂತದೊಂದು ಬಹುಮುಖ್ಯ ತಂತ್ರಜ್ಞಾನ ಇಲ್ಲದಿರಲು ಕಾರಣವಾದರೂ ಏನು? ಇದನ್ನು ಅಭಿವೃದ್ಧಿ ಪಡಿಸಬಲ್ಲ ಯಾವುದೇ ಕಂಪೆನಿ, ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿಯೂ ಇಲ್ಲವೇ? ಸಮುದಾಯಕ್ಕೆ ಸಂಬಂಧಪಟ್ಟ ಯೋಜನೆಗಳಿಗೆ ಯಾರ ಮನವೊಲಿಸಬೇಕಾಗಿದೆ? ಭಾಷೆಯ ಬೆಳವಣಿಗೆಗೆ ಅದರ ಸುತ್ತಲಿನ ಪರಿಸರ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ತಂತ್ರಜ್ಞಾನದ ಬೆಳವಣಿಗೆಯೂ ಆಗಬೇಕಲ್ಲ?

ವರ್ಷವರ್ಷ ಅದೆಷ್ಟೋ ಜನ ಇಂಜಿನಿಯರ್‌ಗಳನ್ನು ದೇಶಕ್ಕೆ ನೀಡುತ್ತಿರುವ ಕಾಲೇಜುಗಳಲ್ಲಿ ಇಂತದ್ದೊಂದು ಸಂಶೋದನೆಯನ್ನು ನಡೆಸುವ ಸಣ್ಣ ಯೋಚನೆ ಬರಲಿಲ್ಲವೇಕೆ? ಕನ್ನಡವನ್ನು ಕಂಪ್ಯೂಟರಿನಲ್ಲಿ ಓದಲು, ಬರೆಯಲು ಕಲಿತ ನಂತರ ನಿಮಗೂ ಇಂತಹ ಅನೇಕ ಸವಾಲುಗಳು ಕಾಡಬಹುದು ಮತ್ತು ಕಾಡಬೇಕು.

ಆದರೆ, ಅವುಗಳ ಅಭಿವೃದ್ಧಿಯ ಹಾದಿ, ಸಧ್ಯದ ಪರಿಸ್ಥಿತಿಯನ್ನು ಕಂಡರೆ ಹೆದರಿ ಓಡುವವರೇ ಜಾಸ್ತಿ. ಇಲ್ಲವಾದಲ್ಲಿ, ಅದನ್ನು ಮತ್ತೊಂದು ಪ್ರಯೋಗ ಶಾಲೆಯ ಶಿಶುವಾಗಿ, ಹಣ ಚೆಲ್ಲುವ ಕುದುರೆಯನ್ನಾಗಿ ಮಾಡುವವರೇ. ಮುಂದುವರೆದಿದೆ....ಕನ್ನಡ ತಂತ್ರಾಂಶ ಹಿಂದುಳಿದಿದೆ, ತಂತ್ರಜ್ಞರು ಮುಂದಿದ್ದಾರೆ?

English summary
78th Kannada Sahitya Sammelna, Gangavati: Seminar speech by Software techie OmShivaprakash on Information and technology with Kannada software future. Speech copy highlights on the day to day basis use of Kannada softwares and developments. Role of Wikipedia Kannada and making social network sites like facebook and orkut in local languages is important.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X