ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರಿ ಪ್ರತ್ಯೇಕತಾವಾದಿ ಭೇಟಿ ಮಾಡಿದ ಸಚಿವರು ಯಾರು?

By Mahesh
|
Google Oneindia Kannada News

Ghulam Nabi Fai
ವಾಷಿಂಗ್ಟನ್, ಡಿ.13: ಕಾಶ್ಮೀರಿ ಪ್ರತ್ಯೇಕತಾವಾದಿ ಗುಲಾಂ ನಬಿ ಫಾಯ್ ಎರಡು ದಶಕಗಳ ಅವಧಿಯಲ್ಲಿ ಹಲವು ಭಾರತೀಯ ಕ್ಯಾಬಿನೆಟ್ ದರ್ಜೆ ಸಚಿವರನ್ನು ಭೇಟಿಯಾಗಿದ್ದೆ ಎಂದು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಈಡಾಗಿದೆ.

62ರ ಹರೆಯದ ಫಾಯ್ ರನ್ನು ಐಎಸ್ ಐ ಏಜೆಂಟ್ ಎಂದು ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್(ಎಫ್‌ಬಿಐ)ಆರೋಪಿಸಿದೆ. ಇತ್ತೀಚೆಗೆ ಕೋರ್ಟ್ ವೊಂದರಲ್ಲಿ ಕಾಶ್ಮೀರದ ಬಗ್ಗೆ ಉತ್ತರಿಸಿದ ಫಾಯ್, ಭಾರತದ ಕ್ಯಾಬಿನೆಟ್ ಸಚಿವರನ್ನು ಭೇಟಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ, ಸಚಿವರುಗಳ ಹೆಸರು ಹೇಳಲು ನಿರಾಕರಿಸಿದ್ದಾನೆ.

"ಕಳೆದ ಇಪ್ಪತ್ತು ವರ್ಷಗಳ ಚಟುವಟಿಕೆಯ ಸಂದರ್ಭದಲ್ಲಿ ನಾನು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿಗೆ ಹಿರಿಯ ಸಲಹೆಗಾರರಾಗಿದ್ದ ಯೂಸುಫ್ ಬುಕ್ ಹಾಗೂ ವರ್ಲ್ಡ್ ಕಾಶ್ಮೀರ್ ಫ್ರೀಡಂ ಮೂವ್‌ಮೆಂಟ್‌ನ ಅಧ್ಯಕ್ಷರಾಗಿದ್ದ ಆಯೂಬ್ ಥುಕೆರ್ ಜೊತೆಗೆ ಭಾರತದ ಪ್ರಧಾನಿಗಳಾಗಿದ್ದ ಚಂದ್ರಶೇಖರ್, ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಸಂಪುಟದ ಹಲವು ಸಚಿವರನ್ನು ಭೇಟಿಯಾಗಿದ್ದೆ" ಎಂದು ಫಾಯ್ ವಿವರಿಸಿದ್ದಾನೆ.

ಭಾರತೀಯ ದೂತಾವಾಸದ ಜೊತೆಗೆ ಸದಾ ಸಂವಹನ ಮಾರ್ಗವೊಂದನ್ನು ಕಾಯ್ದುಕೊಳ್ಳುವುದು ನನಗೆ ಅಭ್ಯಾಸವಾಗಿದೆ ಎಂದು ಫಾಯ್ ಹೇಳಿದ್ದಾನೆ.

ಕಾಶ್ಮೀರಿ ಅಮೆರಿಕನ್ ಕೌನ್ಸಿಲ್ ನ ಮುಖ್ಯಸ್ಥನಾಗಿರುವ ಫಾಯ್ ಗೆ ಐಎಸ್ ಐ ಮೂಲಕ ಗುಪ್ತವಾಗಿ ಹಣ ರವಾನೆಯಾಗಿರುವ ಮಾಹಿತಿ ಕೂಡಾ ಸ್ಪಷ್ಟವಾಗಿದೆ. ಅಮೆರಿಕ ಸರ್ಕಾರಕ್ಕೆ ಸುಮಾರು 200,000 ರಿಂದ 400,000 ಯುಎಸ್ ಡಾಲರ್ ನಷ್ಟವಾಗಿದೆ ಎನ್ನಲಾಗಿದೆ.

English summary
US-based Kashmiri separatist Ghulam Nabi Fai has claimed that he met several Indian ministers on a regular basis during last two decades of his activities in Washington and had 'a channel of communication' opened with the Indian embassy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X