ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಪ್ಪರ್‌ಮಿಂಟ್ ಬೇಡಪ್ಪ ಪಾರ್ಲಿಮೆಂಟ್ ತೋರಿಸು!

By Prasad
|
Google Oneindia Kannada News

10th anniversary of Parliament attack
ಮಕ್ಕಳಂದ್ರೇನೇ ಹಾಗೆ. ಮರಳಲಿ ಮಾಡಿದ ಗುಬ್ಬಿ ಮನೆ, ಗಿಡದಲ್ಲಿ ಕಟ್ಟಿದ ಗುಬ್ಬಿಯ ಗೂಡು, ಚಿತ್ತಾರ ಬಿಡಿಸಿದ ಮೋಡಗಳನ್ನು ನೋಡಿ ನಲಿಯುವುದನ್ನು ದೊಡ್ಡವರು ನೋಡಿ ಕಲಿಯಬೇಕು. ಹಾಗೆಯೆ ಕಬ್ಬನ್ ಪಾರ್ಕ್, ವಿಧಾನಸೌಧ, ಅಶೋಕ ಹೊಟೇಲ್, ಯುಟಿಲಿಟಿ ಬಿಲ್ಡಿಂಗ್ ನೋಡಬೇಕೆಂಬ ಸಣ್ಣಪುಟ್ಟ ಆಸೆಯನ್ನೂ ಇಟ್ಟುಕೊಂಡಿರುತ್ತವೆ.

ಎಲ್ಲ ಮಕ್ಕಳಂತೆಯೇ ಈ ಮಕ್ಕಳೂ ಕೂಡ. ಆದರೆ, ಅವರ ಆಸೆ ಮಾತ್ರ ಸ್ವಲ್ಪ ವಿಭಿನ್ನ. ಅವರ ಆಸೆಯೊಂದೆ. ಅದು ಸಂಸತ್ ಭವನವನ್ನು ಜೀವಮಾನದಲ್ಲಿ ಒಂದು ಬಾರಿಯಾದರೂ ನೋಡಬೇಕೆಂಬುದು. ಇದರಲ್ಲೇನು ವಿಶೇಷ ಅನ್ನಬೇಡಿ. ಈ ಮಕ್ಕಳು ತಮ್ಮ ತಂದೆ ಸಾಹಸ ತೋರಿ ಭ್ರಷ್ಟರಿಂದ ಕಾಪಾಡಿದ ಸಂಸತ್ ಭವನವನ್ನು ನೋಡಲು ಇಷ್ಟಪಟ್ಟಿರುವುದು ವಿಶೇಷವಲ್ಲವೆ?

ಹೌದು, ಸರಿಯಾಗಿ ಹತ್ತು ವರ್ಷಗಳ ಹಿಂದೆ ಡಿಸೆಂಬರ್ 13ರಂದು ಪಾರ್ಲಿಮೆಂಟಿನ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಕೆಚ್ಚೆದೆಯೊಂದಿಗೆ ಕಾದಾಡಿ ಶತ್ರುಗಳನ್ನು ನಿರ್ನಾಮ ಮಾಡಿದ ಸಾಹಸಿಗಳ ಮಕ್ಕಳ ಈ ಪುಟ್ಟ ಕನಸು ಹತ್ತು ವರ್ಷವಾದರೂ ಇನ್ನೂ ಈಡೇರಿಕೆಯಾಗಿಲ್ಲ. ಇದು ಸತ್ಯ ಮತ್ತು ವಿಪರ್ಯಾಸದ ಸಂಗತಿ ಕೂಡ.

ಅಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಐವರು ಹತ್ಯೆಯಾಗಿದ್ದರು. ಜೊತೆಗೆ ನಾಲ್ವರು ದೆಹಲಿ ಪೊಲೀಸ್ ಅಧಿಕಾರಿಗಳು, ಇಬ್ಬರು ಸಿಆರ್ಪಿಎಫ್ ಜವಾನರು, ಸಂಸತ್ ಭವನದ ಕಾವಲುಗಾರ, ಮತ್ತೊಬ್ಬ ಸಿಬ್ಬಂದಿಯನ್ನು ಹತ್ಯೆ ಮಾಡಿ ಆ ಚಳಿಗಾಲದಲ್ಲಿ ಬಿಸಿ ನೆತ್ತರು ಹರಿಸಿದ್ದರು.

ಅಂದು ಮೆರೆದ ಸಾಹಸಕ್ಕಾಗಿ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಿಆರ್ಪಿಎಫ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ವೈಬಿ ಥಾಪಾ, ಆ ದಾಳಿಯಲ್ಲಿ ಹತ್ಯೆಯಾದ ಮಹಿಳೆ ಕಮಲೇಶ್ ಕುಮಾರಿ ಮಕ್ಕಳೆಲ್ಲ ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಸಂಸತ್ ಭವನವನ್ನು ನೋಡಬೇಕೆಂಬ ಅಭಿಲಾಶೆ ಹೊತ್ತು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.

ಸಮಯ ಸಿಕ್ಕಾಗಲೆಲ್ಲ ಪೆಪ್ಪರ್ ಮಿಂಟ್ ಕೇಳುವ ಬದಲು 'ಅಪ್ಪ, ಪಾರ್ಲಿಮೆಂಟ್ ತೋರಿಸು' ಎಂದು ದುಂಬಾಲು ಬೀಳುತ್ತಾರೆ. ಆದರೇನು ಮಾಡುವುದು, ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅಪ್ಪಂದಿರು ನಿರಾಶೆ ವ್ಯಕ್ತಪಡಿಸುತ್ತಾರೆ. ಈ ಮಕ್ಕಳ ಆ ಪುಟ್ಟ ಆಸೆಯನ್ನು ಸರಕಾರ ಈಡೇರಿಸುವುದೆ?

English summary
Ten years ago they kept their vow to the country by securing Parliament from heavily-armed terrorists, but these security personnel are yet to keep a personal promise they made to their families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X