ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕೆ ಹೊಸ ಫಾಂಟುಗಳು ಗುಬ್ಬಿ ಮತ್ತು ನವಿಲು

By * ಓಂಶಿವಪ್ರಕಾಶ್, ಬೆಂಗಳೂರು
|
Google Oneindia Kannada News

Kannada fonts
ಕಂಪ್ಯೂಟರ್‌ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಅನೇಕ ಫಾಂಟುಗಳಿವೆ. ಆದರೆ ನಮಗೆಲ್ಲಾ ಈಗಾಗಲೇ ಅರಿವಿಗೆ ಬಂದಿರುವಂತೆ, ಎಲ್ಲರೂ ನಾವು ಟೈಪಿಸಿದ ಪದಗಳನ್ನು ಓದಲು ಯುನಿಕೋಡ್ ಶಿಷ್ಟತೆಯನ್ನು ಬಳಸಿರಬೇಕು. ಆಗಲೇ ಎಲ್ಲರನ್ನು ಸುಲಭವಾಗಿ ತಲುಪಲು ಸಾಧ್ಯ. ಇಲ್ಲವಾದಲ್ಲಿ. ನಿಮ್ಮ ಲೇಖನವನ್ನು ಓದುವ ಪ್ರತಿಯೊಬ್ಬರೂ ನೀವು ಬಳಸಿದ ಫಾಂಟನ್ನು ತಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡಿರಬೇಕಾಗುತ್ತದೆ.

ಕನ್ನಡದ ಮೊದಲ ಕೆಲವು ಫಾಂಟುಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ವಹಿಸಿಕೊಂಡಿತ್ತು. ಇದರ ಫಲಿತಾಂಶವಾಗಿ ನಮಗೆ ಕೇದಗೆ ಮತ್ತು ಮಲ್ಲಿಗೆ ನಮಗೆ ಜಿ.ಪಿ.ಎಲ್ ಲೈಸೆನ್ಸಿನಡಿ ದೊರೆತವು.

ಈ ಫಾಂಟುಗಳ ಕಥೆಯನ್ನು ಕೆದಕಿದರೆ ದೊಡ್ಡ ಕಥೆಯನ್ನೇ ಬರೆಯಬಹುದು. ಇದರ ಜೊತೆಗೆ ರೆಡ್‌ಹ್ಯಾಟ್ ಲೋಹಿತ್ ಪರಿವಾರಕ್ಕೆ ಸೇರಿದ ಫಾಂಟುಗಳನ್ನು ಭಾರತೀಯ ಭಾಷೆಗಳಿಗೆ ನೀಡಿತು. ಲೋಹಿತ್ ಕನ್ನಡ – ಇದರಲ್ಲಿನ ಕನ್ನಡ ಫಾಂಟು.

ರೆಡ್‌ಹ್ಯಾಟ್ ಇದನ್ನು ಇಂದಿಗೂ ಪಾಲನೆ ಪೋಷಣೆ ಮಾಡಿಕೊಂಡು ಬಂದಿದೆ. ಅತಿ ಕಡಿಮೆ ತಾಂತ್ರಿಕ ದೋಷಗಳನ್ನು ಹೊಂದಿರುವ ಈ ಫಾಂಟು, ಲಿನಕ್ಸ್ ಬಳಸುವ ನಮ್ಮಲ್ಲನೇಕರಿಗೆ ಅದರ ಮುಖಛರ್ಯೆ ಇಂದಾಗಿಯೋ ಏನೋ, ಅಷ್ಟು ಇಷ್ಟವಾಗಿಲ್ಲ. ಸಾಮಾನ್ಯವಾಗಿ ನಾವು ಬಳಸುವ ಫಾಂಟು ಕೇದಗೆ.

ಈ ಎಲ್ಲ ಫಾಂಟುಗಳ ಮೂಲ ತಾಂತ್ರಿಕ ತೊಂದರೆಗಳು ನಮಗೆ ಕಾಣಸಿಗುವುದು ಅದನ್ನು ನಾವು ಸಂಪೂರ್ಣವಾಗಿ ಬಳಸಿದಾಗ ಮಾತ್ರ. ಸಂಚಯ ತಂಡ ಅರಿವಿನ ಅಲೆಗಳನ್ನು ಹೊರ ತರುವಾಗ, ಈ ಫಾಂಟುಗಳ ಮತ್ತಷ್ಟು ತೊಂದರೆಗಳು ನಮ್ಮ ಗಮನಕ್ಕೆ ಬಂದವು ಕೂಡ.

ಅವುಗಳನ್ನು ತಕ್ಷಣವೇ ಫಾಂಟ್ ಫೋರ್ಜ್ ಮೂಲಕ ತಿದ್ದಿದ್ದೂ ಆಯ್ತು. ಆದರೆ ಇವುಗಳನ್ನು ಮೂಲ ತಂತ್ರಜ್ಞರಿಗೆ ತಲುಪಿಸಲು ಸಾಧ್ತ್ಯವಿರಲಿಲ್ಲ. ಯಾಕೆಂದರೆ ಸಧ್ಯ ಈ ಫಾಂಟುಗಳನ್ನು (ಕೇದಗೆ, ಸಂಪಿಗೆ ಮತ್ತು ಮಲ್ಲಿಗೆ) ಯಾರೂ ನೋಡಿಕೊಳ್ಳುತ್ತಿಲ್ಲ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಹುವಾಗಿ ಬಳಸುವ ನಮ್ಮಲ್ಲಿ ಫಾಂಟುಗಳ ಮೇಲೆ ತುಂಬು ಪ್ರೀತಿ ಹುಟ್ಟಿದ್ದು ನಮ್ಮ ಹಳ್ಳಿ ಮನೆ ಅರವಿಂದನಿಗೆ. ಕೇದಗೆ ಮತ್ತು ಮಲ್ಲಿಗೆ ಫಾಂಟುಗಳ ಅನೇಕ ತೊಂದರೆಗಳನ್ನು ನಿವಾರಿಸಿ ಅವುಗಳನ್ನು ಇಂದು ನಿಮ್ಮ ಮುಂದೆ ಇಟ್ಟಿದ್ದಾನೆ.

ಫಾಂಟುಗಳ ತೊಂದರೆಯನ್ನು ನಿವಾರಿಸಲು, ಅದರ ಮೂಲ ನಿರ್ವಾಹಕರು ಜವಾಬ್ದಾರಿವಹಿಸಿಕೊಳ್ಳಬೇಕು. ಆದರೆ, ಅವರ ಅನುಪಸ್ಥಿತಿಯಲ್ಲಿ ನಾವುಗಳು ಹೊಸ ಪರಿಹಾರಗಳನ್ನು ಫಾಂಟುಗಳಿಗೆ ಹೊಂದಿಸಿ ಅದೇ ಹೆಸರಿನಲ್ಲಿ ನಿಮ್ಮೆಲ್ಲರಿಗೂ ದೊರೆಯುವಂತೆ ಮಾಡಲಾಗುವುದಿಲ್ಲ.

ಆದ್ದರಿಂದಲೇ ಅವುಗಳನ್ನು ಮೂಲ ಫಾಂಟುಗಳಿಂದ ಫೋರ್ಕ್ ಮಾಡಿ ಹೊಸ ಹೆಸರುಗಳನ್ನೂ ನೀಡಿದ್ದಾನೆ. ಕೇದಗೆ – ಗುಬ್ಬಿಯಾಗಿಗೂ, ಮಲ್ಲಿಗೆ – ನವಿಲಾಗಿಯೂ ಓಪನ್ ಫಾಂಟ್ ಲೈಸೆನ್ಸ್ (Open Font License 1.1 (OFL)) ನಡಿ ಲಭ್ಯವಾಗುವಂತೆ ಮಾಡಲಾಗಿದೆ. ಇವು ಈ ಕೆಳಗೆ ಕೊಟ್ಟಿರುವ ಗಿಟ್ ಹಬ್‌ನ ಕೊಂಡಿಗಳಲ್ಲಿ ಲಭ್ಯವಿವೆ.

[1] http://github.com/aravindavk/Gubbi
[2] http://github.com/aravindavk/Navilu

ಗುಬ್ಬಿ – ಹಳೆಯ ಕೇದಗೆ ಫಾಂಟುಗಳ ತೊಂದರೆಗಳನ್ನು ಮತ್ತು ರೆಂಡರಿಂಗ್ ತೊಂದರೆಗಳನ್ನು ನಿವಾರಿಸಲಾಗಿದೆ.
ನವಿಲು – ಹಳೆಯ ಮಲ್ಲಿಗೆ ಫಾಂಟುಗಳ ತೊಂದರೆಗಳನ್ನು ಮತ್ತು ರೆಂಡರಿಂಗ್ ತೊಂದರೆಗಳನ್ನು ನಿವಾರಿಸಲಾಗಿದೆ.

English summary
Gubbi and Navilu two new unicode Kannada fonts available for free for public under Open Font License 1.1 (OFL). Fonts are developed by Arvind. These fonts are updated version of Kedige and Mallige. Open source community to make Kannada language usage in computers more and more user friendly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X