ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ನೌಕರರಿಗೆ ವಾರಪೂರ್ತಿ ಕೆಲಸವಾಯಿತು

By Mahesh
|
Google Oneindia Kannada News

No breaks for Infosys employees
ಬೆಂಗಳೂರು, ಡಿ.13: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆಯನ್ನು ಪ್ರೀತಿಯಿಂದ ಇನ್ಫಿ ಸ್ಕೂಲ್ ಎಂದು ಎಲ್ಲರೂ ಕರೆಯುವುದಿದೆ. ಈಗ ಸಕಲ ಸೌಲಭ್ಯವುಳ್ಳ ಇನ್ಫಿ ಶಾಲೆಯಲ್ಲಿ ಉದ್ಯೋಗಿಗಳು 'ಬ್ರೇಕ್' ತೆಗೆದುಕೊಳ್ಳುವಂತಿಲ್ಲ.

ಇನ್ಫೋಸಿಸ್ ನ 1.5 ಲಕ್ಷ ಉದ್ಯೋಗಿಗಳ ಮೇಲೆ ಅಧಿಕ ಕೆಲಸದ ಹೊರೆ ಬಿದ್ದಿದೆ. ಪ್ರಸಕ್ತ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದ ಗುರಿಯನ್ನು ತಲುಪಲು ಆಗದೆ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯನ್ನು ಮೇಲೆತ್ತಲು ಉದ್ಯೋಗಿಗಳು ಸಹಕರಿಸಬೇಕು ಎಂದು ಇನ್ಫಿ ಸುತ್ತೋಲೆ ಕಳಿಸಿದೆ.

ಹೀಗಾಗಿ ಟೆಕ್ಕಿಗಳ ವೀಕೆಂಡ್ ಮಸ್ತಿಗೆ ಕಡಿವಾಣ ಬಿದ್ದಿದೆ. ಕಳೆದ ನ.19 ಹಾಗೂ ಡಿ.10 ರಂದು ಇನ್ಫೋಸಿಸ್ ನ ಬಹುತೇಕ ಎಲ್ಲಾ ವಿಭಾಗದ ಉದ್ಯೋಗಿಗಳು ಕೆಲಸಕ್ಕೆ ಹಾಜರಿದ್ದರು. ಶನಿವಾರ ಕೂಡಾ ಕರ್ತವ್ಯ ನಿರ್ವಹಿಸಿದ್ದರಿಂದ ಶೇ.1.3ರಷ್ಟು ಆದಾಯ ಹೆಚ್ಚಳ ಕಂಡಿದೆ ಎಂದು ಜೆಪಿ ಮಾರ್ಗನ್ ನ ವಿಶ್ಲೇಷಕ ವಿಜು ಕೆ ಜಾರ್ಜ್ ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಇನ್ಫೋಸಿಸ್ ಕಳೆದ ಎರಡು ವಾರಗಳಿಂದ ನಿರಾಶವಾದಿಯಂತೆ ವರ್ತಿಸುತ್ತಿದೆ. ಹೀಗಾದರೆ, ಡಿಸೆಂಬರ್ ಮಾಸದ ಟಾರ್ಗೆಟ್ ಶೇ.3 ರಿಂದ 5 ಮಾರಾಟ ಪ್ರಗತಿ ಸಾಧಿಸಲು ಕಷ್ಟ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.17 ರಿಂದ 19.1 ರಷ್ಟು ಅಥವಾ 7.08 ರಿಂದ 7.2 ಬಿಲಿಯನ್ ಡಾಲರ್ ನಷ್ಟು ಪ್ರಗತಿ ಕಾಣಬೇಕಾಗಿದೆ ಎಂದು ಸಿಎಫ್ ಒ ಬಾಲಕೃಷ್ಣನ್ ಹೇಳಿದ್ದಾರೆ.

ವೀಕೆಂಡ್ ಕೂಡಾ ಕೆಲಸಕ್ಕೆ ಬರುವಂತೆ ಉದ್ಯೋಗಿಗಳಿಗೆ ಸೂಚಿಸುವ ಮೂಲಕ ಇನ್ಫೋಸಿಸ್ ದೊಡ್ಡ ರಿಸ್ಕ್ ತೆಗೆದುಕೊಂಡಿದೆ. ಈಗಾಗಲೇ ಇನ್ಫೋಸಿಸ್ ಕಾರ್ಯ ವೈಖರಿ ಬಗ್ಗೆ ಉದ್ಯೋಗಿಗಳಲ್ಲಿ ಅಪಸ್ವರ ಎದ್ದಿದೆ. ಇನ್ಫೋಸಿಸ್ ನಿಯಮ ಅಳವಡಿಕೆ ನಂತರ ವಿಪ್ರೋ, ಕಾಂಗ್ನಿಜೆಂಟ್ ಕೂಡಾ ತನ್ನ ಉದ್ಯೋಗಿಗಳ ಮೇಲೆ ಒತ್ತಡ ಹೇರುವ ಎಲ್ಲಾ ಲಕ್ಷಣಗಳಿವೆ ಎಂದು ಜಾರ್ಜ್ ಹೇಳಿದ್ದಾರೆ.

English summary
In order to achieve the revenue target India's second largest software company Infosys decided to cut employees breaks. This makes nearly 1.5 lakh employees work extra hard in this last quarter by shortening two weekend breaks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X