ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಅಷ್ಟು ಸುಲಭವಾಗಿ ಪ್ರಧಾನಿ ಆಗಲಾರ: ಅಣ್ಣಾ

By Srinath
|
Google Oneindia Kannada News

hut-stay-wont-take-rahul-near-pm-post-anna
ನವದೆಹಲಿ, ಡಿ. 12: ಕೇವಲ ಒಂದೆರಡು ದಿನ ಗುಡಿಸಲುಗಳಲ್ಲಿ ತಂಗುವ ಮೂಲಕ ಕಾಂಗ್ರೆಸ್ಸಿನ ಅಧಿನಾಯಕ ರಾಹುಲ್ ಗಾಂಧಿಗೆ ಪ್ರಧಾನಿಪಟ್ಟಕ್ಕೆ ಏರಲಾಗದು ಎಂದು ಜಾಗತಿಕ ಚಿಂತಕ, ಭ್ರಷ್ಟಾಚಾರ ವಿರೋಧಿ ಹಿರಿಯಣ್ಣ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಕಟುವಾಗಿ ಟೀಕಿಸಿರುವ ಅಣ್ಣಾ ಹಜಾರೆ 'ಆತನ ಬಗ್ಗೆ ವೈಯಕ್ತಿವಾಗಿ ನನಗೇನೂ ಕೆಟ್ಟ ಭಾವ ಇಲ್ಲ. ಆದರೆ ಪಕ್ಷ ಆತನನ್ನು ಭವಿಷ್ಯದ ಪ್ರಧಾನಿಯನ್ನಾಗಿ ಬಿಂಬಿಸುತ್ತಿದೆ. ಆದರೆ ಅಷ್ಟುಸುಲಭವಾಗಿ ಆತನಿಗೆ ಆ ಪಟ್ಟ ದಕ್ಕುವುದಿಲ್ಲ. ಅದಕ್ಕಾಗಿ ಆತ ಬಹಳಷ್ಟು ಶ್ರಮ ಹಾಕಬೇಕಿದೆ' ಎಂದು ಸ್ಪಷ್ಟವಾಗಿ ಹೇಳಿದರು.

ಗ್ರಾಮೀಣ ಭಾಗಗಳಿಗೆ ಭೇಟಿ ಕೊಟ್ಟಾಗ ಯುವ ರಾಜಕುಮಾರ ಗ್ರಾಮಸ್ಥರ ಮನೆಗಳಲ್ಲಿ ಒಂದೊಎರಡೋ ರಾತ್ರಿಗಳನ್ನು ಕಳೆಯುತ್ತಾರೆ. ಆದರೆ ಅಷ್ಟಕ್ಕೇ ಆತ ದೊಡ್ಡ ಹುದ್ದೆಯ ಕನಸು ಕಾಣುವುದು ತರವಲ್ಲ. ಜನ ಲೋಕಪಾಲ ಮಸೂದೆ ಹೊಳೆಯಲ್ಲಿ ಹುಳಿ ಹಿಂಡಿದ ಹಾಗಿದೆ. ಇದಕ್ಕೆ ರಾಹುಲ್ ಗಾಂಧಿಯೇ ಕಾರಣ. ಪ್ರಧಾನಿಯೇ ಲಿಖಿತ ರೂಪದಲ್ಲಿ ಭರವಸೆ ನೀಡಿರುವಾಗ ಅದನ್ನು ನಿಷ್ಫಲಗೊಳಿಸಲು ಬೇರೆ ಯಾರಿಂದ ತಾನೆ ಸಾಧ್ಯ? ಅದಕ್ಕೆ ಗಾಂಧಿಯೇ ಕಾರಣ ಎಂದು ಅಣ್ಣಾ ಗರಂ ಆಗಿದ್ದಾರೆ.

English summary
Congress General Secretary Rahul Gandhi can't become PM by spending one day in a hut. He has to sacrifice a lot to reach there, said Anna Hazare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X