ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ರಾಜೀನಾಮೆ?

By Mahesh
|
Google Oneindia Kannada News

BK Srinivas a file photo
ಭದ್ರಾವತಿ, ಡಿ.12: ಸ್ಥಳೀಯ ವಿವಾದಿತ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ರಾಜಕೀಯ ಒಳಜಗಳದಿಂದ ಬೇಸತ್ತಿರುವ ಸಂಗಮೇಶ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

'ಕಷ್ಟದ ಪರಿಸ್ಥಿತಿಯಲ್ಲಿರುವಾಗ ನೆರವಿಗೆ ಬಾರದ ಹಿರಿಯ ನಾಯಕರ ಧೋರಣೆಯಿಂದ ಸಾಕಷ್ಟು ನೊಂದಿದ್ದೇನೆ. ವೃಥಾ ಆರೋಪಗಳಿಂದ ಬೇಸತ್ತಿದ್ದೇನೆ. ರಾಜಕೀಯದಿಂದ ಬೇಸರಗೊಂಡು ನಿವೃತ್ತಿ ಬಯಸಿದ್ದೇನೆ' ಎಂದು ಸಂಗಮೇಶ್ ಅವರು ತಮ್ಮ ರಾಜೀನಾಮೆಗೆ ಕಾರಣ ಕೊಟ್ಟಿದ್ದಾರೆ.

ಭದ್ರಾವತಿಯ ವಿವಾದಿತ ಶಾಸಕ ಕಾಂಗ್ರೆಸ್ಸಿನ ಬಿ.ಕೆ. ಸಂಗಮೇಶ್ ಅವರು ಕರ್ತವ್ಯ ನಿರತ ಇನ್ಸ್‌ಪೆಕ್ಟರ್ ಪರುಶುರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸಿದ್ದರು. ಐಪಿಸಿ ಸೆಕ್ಷನ್ 143, 504, 353 ಹಾಗೂ 186ರ ಅಡಿ ಶಾಸಕ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆದರೆ, ಭದ್ರಾವತಿಯ ಜೆಎಫ್ ಎಂಸಿ ಕೋರ್ಟ್ ಶಾಸಕ ಸಂಗಮೇಶ್ ಅವರಿಗೆ ಜಾಮೀನು ನೀಡಿತ್ತು.

English summary
Bhadravathi congress MLA B.K. Sangamesh reportedly submitted resignation letter to his MLA post today(Dec.12). According to local News Channel Sangamesh has sent resignation letter to Speaker Bopaiah and Siddaramaiah. Sangamesh was granted bail from local JMFC court recently, who was charge sheeted after he allegedly obstructed and had verbal clash with police officer Parashuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X