ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಪಾಯಿ ದಾಖಲೆ ಕುಸಿತ, ಪ್ರತಿ ಡಾ.ಗೆ 52.77 ರು.

By Prasad
|
Google Oneindia Kannada News

Rupee hits record low against dollar
ಮುಂಬೈ, ಡಿ. 12 : ಡಾಲರ್ ಗೆ ಪ್ರತಿಯಾಗಿ ರುಪಾಯಿ ಬೆಲೆ ಭಾರೀ ಕುಸಿತ ಕಂಡಿದ್ದು, ಸೋಮವಾರ ಸಂಜೆಯ ಹೊತ್ತಿಗೆ ಪ್ರತಿ ಡಾಲರ್‌ಗೆ ರು.52.77 ತಲುಪಿದೆ. ಡಾಲರ್ ಕೊಳ್ಳಲು ಹೂಡಿಕೆದಾರರು ಆಸಕ್ತಿ ತೋರಿದ್ದು ರುಪಾಯಿಗೆ ಹೊಡೆತ ನೀಡಿದೆ.

ಕಳೆದ ಶುಕ್ರವಾರ ಪ್ರತಿ ಡಾಲರ್‌ರೆ 52.02 ಇದ್ದ ರುಪಾಯಿ ಬೆಲೆ ಇಂದು ಶೇ.1.5ರಷ್ಟು ಕುಸಿದು ಹೂಡಿಕೆದಾರರಿಗೆ ಭಾರಿ ಕಳವಳ ತಂದಿದೆ. ಭಾರತದ ದುರ್ಬಲ ಆರ್ಥಿಕ ಸ್ಥಿತಿ ರುಪಾಯಿಗೆ ಭಾರೀ ಘಾಸಿ ಮಾಡಿದೆ. ನವೆಂಬರ್ 22ರಂದು ರುಪಾಯಿ ಪ್ರತಿ ಡಾಲರ್ ಗೆ 52.73 ತಲುಪಿತ್ತು.

ಯುರೋಪಿನಲ್ಲಿ ಆರ್ಥಿಕ ಬಿಕ್ಕಟ್ಟನ್ನು ಹದ್ದುಬಸ್ತಿನಲ್ಲಿಡಲು ಯುರೋಪಿಯನ್ ಯೂನಿಯನ್ ವಿಫಲವಾಗಿದ್ದು ಭಾರತದ ರುಪಾಯಿಯ ಮೇಲೆ ಹೊಡೆತ ನೀಡಿತು. ಡಾಲರ್‌ಗೆ ಪ್ರತಿಯಾಗಿ ಯುರೋ ಕೂಡ ದುರ್ಬಲವಾಗಿದೆ.

English summary
Indian rupee has hit record low of 52.77 against dollar on Monday, December 12, 2011. Signs of slowdown prompted the investors to buy dollars. This led to the slide of rupee. Also weak Euro added to the pressure of Indian currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X