ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಕೋಟಿ ಐಟಿ ರಫ್ತು ನಿರೀಕ್ಷೆಯಲ್ಲಿ ಕರ್ನಾಟಕ

By Mahesh
|
Google Oneindia Kannada News

MN Vidyashankar IAS
ಬೆಂಗಳೂರು, ಡಿ.12: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಮಾಹಿತಿ ತಂತ್ರಜ್ಞಾನ ರಫ್ತು ಮೌಲ್ಯ 1 ಲಕ್ಷ ಕೋಟಿ ರು ದಾಟುವ ನಿರೀಕ್ಷೆಯಿದೆ ಎಂದು ರಾಜ್ಯ ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂಎನ್ ವಿದ್ಯಾಶಂಕರ್ ಅವರು ಹೇಳಿದ್ದಾರೆ.

2010-11 ಆರ್ಥಿಕ ವರ್ಷದಲ್ಲಿ ಸುಮಾರು 85,000 ಐಟಿ ರಫ್ತು ಸಾಧಿಸಿದ ಕರ್ನಾಟಕ ಈ ಬಾರಿ ಶೇ.22ರಷ್ಟು ಏಳಿಗೆ ಕಂಡಿದ್ದು, 100,000 ಕೋಟಿ ರು ದಾಟುವ ನಿರೀಕ್ಷೆಯಿದೆ

ಐಟಿಐಆರ್ ಯೋಜನೆ: ರಾಜ್ಯದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಗತಿ ಏಳಿಗೆ ಕಂಡಿದೆ. 8 ಲಕ್ಷ ಮಂದಿ ನೇರವಾಗಿ ನೇಮಕಾತಿಯಾಗಿದ್ದಾರೆ. ವರ್ಷಾಂತ್ಯಕ್ಕೆ 9 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದರು.

ಮಾಹಿತಿ ತಂತ್ರಜ್ಞಾನ ಬಂಡವಾಳ ಪ್ರದೇಶ(ITIR) ನಿರ್ಮಾಣ ಹಾಗೂ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಹೊಸ ಐಟಿ ಸಿಟಿ ನಿರ್ಮಾಣವಾಗಲಿದೆ ಎಂದು ವಿದ್ಯಾಶಂಕರ್ ಹೇಳಿದರು.

ಸುಮಾರು 40 ಚ.ಕೀ ವಿಸ್ತೀರ್ಣದ ಈ ಐಟಿ ಸಿಟಿ ಎರಡು ಹಂತಗಳಲ್ಲಿ ರೂಪುಗೊಳ್ಳಲಿದೆ. ಮೊದಲ ಹಂತದಲ್ಲಿ 2,000 ಎಕರೆ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳಲಾಗುವುದು. ಐಟಿಐಆರ್ ಯೋಜನೆಯಿಂದ ಸುಮಾರು 1 ಲಕ್ಷ ರೂ ಬಂಡವಾಳ ನಿರೀಕ್ಷಿಸಲಾಗಿದೆ. ಸುಮಾರು 3 ಮಿಲಿಯನ್ ಮಂದಿಗೆ ಉದ್ಯೋಗ ಸಿಗುವ ಭರವಸೆ ಇದೆ ಎಂದು ವಿದ್ಯಾಶಂಕರ್ ವಿವರಿಸಿದರು.

ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಉತ್ತರ ಬಂದಿಲ್ಲ. ಕರ್ನಾಟಕ ಸರ್ಕಾರ ಸುಮಾರು 50 ಎಕರೆ ಭೂಮಿಯನ್ನು ಐಐಟಿಗಾಗಿ ಕಾಯ್ದಿರಿಸಿದೆ ಎಂದು ವಿದ್ಯಾಶಂಕರ್ ಹೇಳಿದರು.

English summary
Karnataka expects IT exports to touch Rs 1 lakh crore in Financial Year 2012, said IT Department Principal Secretary M N Vidyashankar. The Information Technology Investment Region (ITIR), an integrated IT city in an area of about 40 sq km, is proposed to be developed near Bangalore International Airport, Devanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X