ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲೇಕಣಿಗೆ ಮುಖಭಂಗ; ಆಧಾರ್ ಪುನಾರಚನೆ?

By Srinath
|
Google Oneindia Kannada News

setback-for-nandan-nilekani-uid-scheme
ನವದೆಹಲಿ, ಡಿ.9: ನಂದನ್ ನಿಲೇಕಣಿ ನೇತೃತ್ವದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UID) ಭವಿಷ್ಯ ತೂಗುಯ್ಯಾಲೆಯಲ್ಲಿದ್ದು, ರಾಷ್ಟ್ರೀಯ ಗುರುತು ಚೀಟಿ ಮಸೂದೆಯಲ್ಲಿ ಅನೇಕ ನ್ಯೂನತೆಗಳಿವೆ ಎಂದು ಹಣಕಾಸು ವಿಷಯದ ಸಂಸದೀಯ ಸ್ಥಾಯಿ ಸಮಿತಿ ತಿರಸ್ಕರಿಸಿದೆ. ಇದರಿಂದ, ಮಸೂದೆಯನ್ನು ಪುನಃ ರೂಪಿಸುವುದು ಇಲ್ಲವೆ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸುವುದು ಈಗ ಸರ್ಕಾರದ ಮುಂದಿರುವ ಆಯ್ಕೆಯಾಗಿದೆ.

ಸಾರ್ವಜನಿಕರ ಖಾಸಗಿ ಮಾಹಿತಿ ರಕ್ಷಣೆ ಕಾಯಿದೆ ಇಲ್ಲದಿರುವುದು, ಈ ಮಾಹಿತಿ ಜತೆಗೆ ಭದ್ರತಾ ಲಕ್ಷಣಗಳನ್ನು ಖಾಸಗಿ ಎಜೆನ್ಸಿಗಳು ಬಳಕೆ ಮಾಡಿಕೊಳ್ಳುವುದು ಸೇರಿದಂತೆ ಮಸೂದೆಯಲ್ಲಿ ಅನೇಕ ನ್ಯೂನತೆಗಳಿರುವುದರಿಂದ ತಿರಸ್ಕರಿಸಿರುವುದಾಗಿ ಸ್ಥಾಯಿ ಸಮಿತಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಬೊಕ್ಕಸದಿಂದ ಅಪಾರ ಪ್ರಮಾಣದಲ್ಲಿ ಹಣ ವ್ಯಯ ಮಾಡಿ, ನಂಬಲು ಸಾಧ್ಯವಿಲ್ಲದ ತಾಂತ್ರಿಕತೆ ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ನೋಂದಣಿ ಮಾಡಿಕೊಳ್ಳುವ ಈ ಮಸೂದೆ ಖಾಸಗಿ ವ್ಯಕ್ತಿಗಳ ಮಾಹಿತಿ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದೂ ಕಾರಣ ನೀಡಲಾಗಿದೆ.

ಮಸೂದೆಯನ್ನು ಈಗಿರುವ ಸ್ವರೂಪದಲ್ಲಿಯೇ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಬಿಜೆಪಿಯ ಯಶವಂತ ಸಿನ್ಹ ಅವರ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ. ಜತೆಗೆ ಮಸೂದೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುವಂತೆಯೂ ಶಿಫಾರಸು ಮಾಡಿ, ಸಂಸತ್‌ಗೆ ಹಿಂತಿರುಗಿಸಿದೆ.

English summary
In another blow to the UPA today, a parliamentary committee has rejected the bill which creates the Unique ID card or aadhar scheme that's being orchestrated by former Infosys head, Nandan Nilekani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X