ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿಗೆ ಬಂತು, ಯಾರಿಗೆ ಬಂತು ನಿಲೇಕಣಿ ಆಧಾರ ಕಾರ್ಡು?

By Srinath
|
Google Oneindia Kannada News

nilekani-adhar-number-delay-why
ಬೆಂಗಳೂರು, ಡಿ.9: ಇರುವ ಹತ್ತಾರು ನಂಬರುಗಳ ಮಧ್ಯೆ ಇದ್ಯಾವುದು ಆಧಾರ್ ನಂಬರ್ ಎಂದು ಜನ ಕೇಳಿದ್ದರು. ಅದೆಲ್ಲ ನಂಬರುಗಳನ್ನು ನೆನಪಿಟ್ಟುಕೊಳ್ಳುವುದು ಬೇಡ. ಆಧಾರ್ ಒಂದಿದ್ದರೆ ಸಾಕು ಅಂದಿದ್ದರು ನಿಲೇಕಣಿ. ಇದನ್ನು ನಂಬಿ ಜನ ಮರುಳೋ ಜಾತ್ರೆ ಮರುಳೋ ಎಂದು ಜನ ಕೆಲಸಕಾರ್ಯ ಬಿಟ್ಟು ತಮ್ಮ ಅಮೂಲ್ಯ ಸಮಯವನ್ನು ವ್ಯಯ ಮಾಡುತ್ತಾ ಆಧಾರ್ ನಂಬರ್ ಗಾಗಿ ಸರದಿಯಲ್ಲಿ ನಿಂತರು.

ಆದರೆ ಇದುವರೆಗೂ ಆಧಾರ್ ನಂಬರ್ ಕಾರ್ಡ್ ಜನರ ಮನೆ ಬಾಗಿಲಿಗೆ ಬಂದಿಲ್ಲ. ಆಗ್ಲೋ, ಈಗ್ಲೋ ಬರುತ್ತೆ ಅಂತ ಬೂಸಿ ಬಿಟ್ಟಿದ್ದೇ ಬಂತು. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಆಧಾರ್ ನಂಬರ್ ಬೆನ್ನುಹತ್ತಿದಾಗ 'ನಿಮ್ಮದೇ ಕಂಪ್ಯೂಟರಿನಲ್ಲಿ ನೋಡಿಕೊಂಡು ಆನಂದ ಪಡಿ. ನಿಮ್ಮ ಆಧಾರ್ ನಂಬರ್ ಸ್ಥಿತಿಗತಿ ಯಾವ ಹಂತದಲ್ಲಿ ಎಂಬವುದು ತಿಳಿಯುತ್ತೆ' ಅಂದರು ದೊಡ್ಡವರು.

ಎಷ್ಟು ಜನರ ಬಳಿ ಕಂಪ್ಯೂಟರು, ಇಂಟರ್ನೆಟ್ಟು ಇರುತ್ತೆ ಎಂದು ಕೇಳುವ ಮನಸಾಯಿತಾದರೂ ನಮ್ಮದೂ ಸ್ವಲ್ಪ ಸಾಮಾಜಿಕ ಜವಾಬ್ದಾರಿ ಇರಲಿ ಎಂಬ ಕಳಕಳಿಯೊಂದಿಗೆ ತೆಪ್ಪಗೆ ಕಂಪ್ಯೂಟರ್ ಆನ್ ಮಾಡಿದ್ದಾಯ್ತು. Uid status ಗೆ ಹೋಗಿ ನೋಡಿದಾಗ ಏನಿದೆ ಅಲ್ಲಿ? ಮೂರ್ನಾಲ್ಕು ಪ್ರಕ್ರಿಯೆಗಳ ಕಾಲಘಟ್ಟವನ್ನು ದಾಖಲಿಸಿ, ಕೈತೊಳೆದುಕೊಂಡಿದ್ದಾರೆ ಆಧಾರ್ ಮಂದಿ (ಪಕ್ಕದ ಚಿತ್ರ ನೋಡಿ). ಅಷ್ಟಕ್ಕೇ ಆಟ ನಿಲ್ಲಿಸಿರುವುದಾದರೂ ಏಕೆ ಎಂದು ವಿಚಾರಿಸಿದಾಗ...

English summary
Setback for Nandan Nilekani's UID scheme. Nilekani Adhar number being delayed why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X