ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾ ಆಸ್ಪತ್ರೆ ಬೆಂಕಿ ದುರಂತ, 89 ಮಂದಿ ಸಾವು

By Mahesh
|
Google Oneindia Kannada News

AMRI Hospital fire, Kolkata
ಕೋಲ್ಕತ್ತಾ, ಡಿ.9: ಇಲ್ಲಿನ ಎಎಂಆರ್ ಐ ಅಸ್ಪತ್ರೆಯಲ್ಲಿ ಮುಂಜಾನೆ ಕಾಣಿಸಿಕೊಂಡ ಬೆಂಕಿ ಇನ್ನೂ ಆರಿಲ್ಲ. ಸುಮಾರು ಮೂರು ಅಂತಸ್ತಿಗೆ ಬೆಂಕಿ ಆವರಿಸಿದ್ದು, 89 ಜನ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನೂ ಅನೇಕ ಜನ ಒಳಗಡೆ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಶಂಕೆ ವ್ಯಕ್ತವಾಗಿದೆ.

ನಿರ್ದೇಶಕರ ಬಂಧನ : ಈ ಘಟನೆಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿಗಳಾದ ಎಸ್ ಕೆ ಟೋಡಿ, ಆರ್ ಎಸ್ ಗೋಯೆಂಕಾ ಸೇರಿದಂತೆ 6 ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ನಾನಾ ಸೆಕ್ಷನ್ ಅಡಿಯಲ್ಲಿ ಅವರ ಮೇಲೆ ಕೇಸನ್ನು ಹಾಕಲಾಗಿದೆ.

ಮುಂಜಾನೆ 3.30ರ ಸುಮಾರಿಗೆ ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನಿಧಾನವಾಗಿ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಈ ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತ ದೇಹಗಳನ್ನು ಎಸ್ ಎಸ್ ಕೆಎಂ ಆಸ್ಪತೆಯಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಖಾತೆ ಸಚಿವ ಸುದೀಪ್ ಬಂಧೋಪಾಧ್ಯಾಯ್ ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆಗಳು: 98312 25067, 99322 15296, 98312 25067

ಸುಮಾರು 24ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಬೇಸ್ಮೆಂಟ್ ನಲ್ಲಿ ಆಮ್ಲಜನಕದ ಸಿಲೆಂಡರ್ ಗಳನ್ನು ಶೇಖರಿಸಿ ಇಡಲಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ವಿಳಂಬವಾಗುತ್ತಿದೆ ಎಂದು ಅಗ್ನಿ ಶಾಮಕದಳದ ಸಿಬ್ಬಂದಿ ಹೇಳಿದ್ದಾರೆ.

ಅಗ್ನಿಶಾಮಕದಳ ಹಾಗೂ ವಿಪತ್ತು ನಿರ್ವಹಣಾ ದಳದವರು ಆಸ್ಪತ್ರೆ ಕಿಟಕಿಗಳ ಮೂಲಕ ಒಳ ಪ್ರವೇಶಿಸಿ, ಐಸಿಯು, ಐಸಿಸಿಯು, ಐಟಿಯು ಮುಂತಾದ ತುರ್ತು ನಿಗಾ ಘಟಕದಲ್ಲಿರುವ ರೋಗಿಗಳನ್ನು ಉಳಿಸಿ, ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

English summary
Massive fire broke out at AMRI hospital, South Kolkata in the morning at 3.30 am, said police. Several people have been injured, while many patients are feared trapped inside the hospital. Reports reveal that 89 people are killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X