ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡೆಗೂ ಸರಕಾರದ ನೋಟೀಸಿಗೆ ಉತ್ತರಿಸಿದ ಮಂದಾ

By Prasad
|
Google Oneindia Kannada News

Belgaum mayor Manda Balekundri
ಬೆಳಗಾವಿ, ಡಿ. 9 : ಕನ್ನಡ ರಾಜ್ಯೋತ್ಸವದಂದು ಕರಾಳದಿನ ಆಚರಿಸಿಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಏಕೆ ಮಾಡಬಾರದು ಎಂದು ಸರಕಾರ ಕಳಿಸಿದ್ದ ನೋಟೀಸಿಗೆ ಬೆದರಿರುವ ಬೆಳಗಾವಿ ಮೇಯರ್ ಮಂದಾ ಬಾಳೆಕುಂದ್ರಿ ಕಡೆಗೂ ಉತ್ತರ ನೀಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಅಗತ್ಯವಿಲ್ಲ. ಕನ್ನಡ ನಾಡು ಮತ್ತು ನುಡಿಗೆ ಅಗೌರವ ತೋರಿಲ್ಲ. ಕಾನೂನುಬದ್ಧವಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ. ಪೂರ್ಣಾವಧಿಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೋರಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಲ್ಕು ಪುಟಗಳ ಪತ್ರವನ್ನು ಬಾಳೆಕುಂದ್ರಿ ಬರೆದಿದ್ದಾರೆ.

ಬೆಳಗಾವಿ ಜಿಲ್ಲೆಯವರಾದ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದಾಯವಾದಾಗ ಅವರಿಗೆ ಸನ್ಮಾನ ಮಾಡಬೇಕೆಂಬ ಪ್ರಸ್ತಾವನೆಯನ್ನು ತಿರಸ್ಕರಿಸಿ ಕನ್ನಡದ ಹೆಮ್ಮೆಯ ಸಾಹಿತಿಗೆ ಅಧಿಕಾರದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಅವಮಾನ ಮಾಡಿತ್ತು.

ಸರಕಾರ ನೀಡಿದ ನೋಟೀಸಿಗೆ ಉತ್ತರಿಸದೆ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ನಂತರ ಎಲ್ಲ ಸದಸ್ಯರೂ ರಾಜೀನಾಮೆ ನೀಡುವುದಾಗಿಯೂ ಬೆದರಿಕೆ ಹಾಕಿದ್ದರು. ಮೇಯರ್ ಮಂದಾ ಮತ್ತು ಉಪಮೇಯರ್ ರೇಣು ಕಿಲ್ಲೇಕರ್ ಅವರಂಥ ನಾಡದ್ರೋಹಿಗಳನ್ನು ಬಂಧಿಸಿ, ನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕೆಂದು ಕನ್ನಡ ಸಂಘಟನೆಗಳಿಂದ ಸರಕಾರದ ಮೇಲೆ ಒತ್ತಡ ಬಂದಿತ್ತು.

English summary
Belgaum mayor Manda Balekundri has sent a reply to Karnataka govt not to supersede the Belgaum corportation and allow to complete the tenure. Karnataka govt had issued notice to the mayor asking why the corporation should not be superseded for insulting the Kannada and Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X