ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಯ್ಯ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರು

By Mahesh
|
Google Oneindia Kannada News

Krishnaiah Shetty
ಬೆಂಗಳೂರು, ಡಿ.8: ಭೂ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಸಾಥ್ ನೀಡಿದ್ದ ಮಾಲೂರು ಶಾಸಕ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ಮತ್ತೆ ನಿರಾಳವಾಗಿದ್ದಾರೆ. ಸಿರಾಜಿನ್ ಬಾಷಾ ಸಲ್ಲಿಸಿದ್ದ 2ನೇ ದೂರನ್ನು ಹೈಕೋರ್ಟ್ ಏಕ ಸದಸ್ಯಪೀಠ ತಿರಸ್ಕರಿಸಿದೆ.

ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರ ವಿರುದ್ಧ ಸಿರಾಜಿನ್ ಬಾಷಾ ಸಲ್ಲಿಸಿದ್ದ 2ನೇ ದೂರಿನ ಅರ್ಜಿ ತಿರಸ್ಕಾರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ(ಡಿ.8)ವಿಚಾರಣೆ ನಡೆಸಿದ ನ್ಯಾ.ಎಚ್ ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ, ಕೃಷ್ಣಯ್ಯ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

2 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ. ಕೋರ್ಟ್ ಅನುಮತಿ ಇಲ್ಲದೆ ವಿದೇಶಕ್ಕೆ ಹಾರುವಂತಿಲ್ಲ ಎಂದು ಹೈಕೋರ್ಟ್ ಪೀಠ ಸೂಚಿಸಿದೆ.

ಕೃಷ್ಣಯ್ಯ ಶೆಟ್ಟಿ ಅವರು ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದು, ಶುಕ್ರವಾರ ಮತ್ತೆ ಜೈಲಿಗೆ ಹೋಗಲಿದ್ದಾರೆ. ಆದರೆ ಈ ಬಾರಿ ಅಲ್ಲಿ ಕೈದಿಗಳಿಗೆ ಹಾಸಿಗೆ ಹೊದಿಕೆ ಮತ್ತು ಸೀರೆ ವಿತರಿಸಿದ್ದರು. ರಾಜಕೀಯ ಮುಖಂಡರಿಗೆ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ರವಾನೆಯಾಗಿತ್ತು. ಈಗ ಯಾರಿಗೆ ಯಾವ ಪ್ರಸಾದ ಸಿಗಲಿದೆ ಕಾದು ನೋಡಬೇಕಿದೆ.

English summary
Karnataka high Court judge HC Beliyappa today(Dec.8) rejected Sirajin Basha's 2nd plea and granted anticipatory bail to Malur Krishnaiah Shetty. Former CM Yeddyurappa and Krishnaiah Shetty co accused in land denotification case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X