ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾ ಮೇಲ್ದಂಡೆ ಯೋಜನೆ: ಯಡಿಯೂರಪ್ಪಗೆ ಕ್ಲೀನ್ ಚಿಟ್

By Srinath
|
Google Oneindia Kannada News

bhadra-upper-project-clean-chit-for-bsy
ಬೆಂಗಳೂರು, ಡಿ. 8: ಭದ್ರಾ ಮೇಲ್ದಂಡೆ ಯೋಜನೆ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಲೋಕಾಯುಕ್ತ ಮೂಲಗಳ ಪ್ರಕಾರ 'ತಜ್ಞರ ಸಮಿತಿ ನೀಡಿದ್ದ ಸಲಹೆಗೆ ಅನುಗುಣವಾಗಿ ಅಂದಿನ ಮುಖ್ಯಮಂತ್ರಿ, ಕರ್ನಾಟಕ ನೀರಾವರಿ ನಿಗಮದ ಅಧ್ಯಕ್ಷ ಯಡಿಯೂರಪ್ಪ ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದ ಕಂಪನಿಗೆ ಅನುಮೋದನೆ ನೀಡಿದ್ದಾರೆ, ಅಷ್ಟೇ' ಎಂಬುದು ತನಿಖೆಯಿಂದ ಸಾಬೀತಾಗಿದೆ.

ತನಿಖಾ ವರದಿಯ ಪ್ರಕಾರ, ಗಮನಾರ್ಹ ಸಂಗತಿಯೆಂದರೆ ಯಡಿಯೂರಪ್ಪ ಅವರು ಟೆಂಡರ್ ಪ್ರಕ್ರಿಯೆ ಚಿತ್ರಣದಲ್ಲಿ ಕಾಣಿಸಿಕೊಂಡಿರುವುದು ಕೊನೆಯ ಘಟ್ಟದಲ್ಲಿ! ಲೋಕಾಯುಕ್ತ ಕೋರ್ಟಿನಲ್ಲಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಮೊದಲ ಬಾರಿಗೆ ಸಮಾಧಾನ ತರುವಂತಹ ತನಿಖಾ ವರದಿ ಇದಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದ ಕಂಪನಿಗೆ (RNS Infrastructure) ಟೆಂಡರ್ ಅನುಮೋದಿಸುವ ಮುನ್ನ ಆ ಕಂಪನಿಯಿಂದ ಯಡಿಯೂರಪ್ಪ ಕುಟುಂಬದವರ ಕಂಪನಿಗೆ (Dhavalgiri Properties and Sahyadri Healthcare) ಲಂಚ ಸಮದಾಯವಾಗಿದೆ ಎಂಬುದು ಪ್ರಕರಣದ ಪ್ರಮುಖ ದೂರಾಗಿದೆ.

ಆದರೆ ತಜ್ಞತರ ಸಮಿತಿ ನೀಡಿದ ಸಲಹೆಯಂತೆ ಯಡಿಯೂರಪ್ಪ ಟೆಂಡರ್ ಗೆ ಅಂಕಿತ ಹಾಕಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ ಎಂದು ಲೋಕಾಯುಕ್ತ ಮೂಲಗಳು ದೃಢಪಡಿಸಿವೆ.

ಲೋಕಾಯುಕ್ತ ಪೊಲೀಸರು ಪ್ರಕರಣದ ಸಂಬಂಧ ಡಿಸೆಂಬರ್ 19ರ ವೇಳೆಗೆ ಕೋರ್ಟಿಗೆ ವರದಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದು, ಇಡೀ ಟೆಂಡರ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

English summary
In Bhadra Upper Project case Karnataka ex Chief Minister B.S. Yeddyurappa has got a clean chit of sorts from the Lokayukta police over his role in the Upper Bhadra Irrigation Project tender process. Lokayukta sources say the Karnataka Neeravari Nigam, headed by then CM Yeddyurappa, favoured the highest bidder on expert panel’s recommendation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X