ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಕರುಣಾಕರ ರೆಡ್ಡಿ ಅಜ್ಞಾತವಾಸ ಅಂತ್ಯ

By Srinath
|
Google Oneindia Kannada News

karunakara-reddy-to-appear-in-public-davangere
ದಾವಣಗೆರೆ, ಡಿ.7: ಸೆಪ್ಟೆಂಬರ್ 5ರಿಂದ (ಸಿಬಿಐನಿಂದ ಜನಾರ್ದನ ರೆಡ್ಡಿ ಬಂಧನವಾದ ದಿನ) ನಿಗೂಢವಾಗಿ ಮಾಯವಾಗಿದ್ದ ದಾವಣಗೆರೆಯ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರ where abouts ಪತ್ತೆಯಾಗಿದ್ದು, ಶೀಘ್ರವೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸೂಚನೆಗಳಿವೆ.

ರೆಡ್ಡಿ ಸೋದರರ ರಾಜಕೀಯ ಬಂಟ ಶ್ರೀರಾಮುಲು ಅವರು ಈ ವಿಷಯ ತಿಳಿಸಿದ್ದಾರೆ. ಅಣ್ಣಾ ಕರುಣಾಕರ ರೆಡ್ಡಿ ಅವರು ಈ ಎರಡು-ಮೂರು ತಿಂಗಳಲ್ಲಿ ಎರಡು ಬಾರಿ ಹೊರ ದೇಶಗಳಿಗೆ ಹೋಗಿದ್ದರು. ಅದು ಬಿಟ್ಟರೆ ಅನಂತಪುರದಲ್ಲಿ ಪೂಜೆಯಲ್ಲಿ ತೊಡಗಿದ್ದರು ಎಂದು ರಾಮುಲು ಹೇಳಿದ್ದಾರೆ. ಇದನ್ನು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಸಹ ಪುಷ್ಠೀಕರಿಸಿದ್ದು, ಹಿರಿಯಣ್ಣ ಜನಾರ್ದನ ರೆಡ್ಡಿಗೆ ಕಷ್ಟದ ದಿನಗಳು ಎದುರಾಗಿದ್ದರಿಂದ ಕರುಣಾಕರ ರೆಡ್ಡಿ ದೇವರ ಮೊರೆ ಹೋಗಿದ್ದರು ಎಂದಿದ್ದಾರೆ.

ಈ ಮಧ್ಯೆ, ಮಾಜಿ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಅಜ್ಞಾತವಾಸ ಸದ್ಯದಲ್ಲೇ ಅಂತ್ಯ ಕಾಣಲಿದ್ದು, ಡಿ. 7 ಮತ್ತು 8ರಂದು ಹರಪನಹಳ್ಳಿಯಲ್ಲಿ ಅವರು ಕ್ಷೇತ್ರ ಸಂಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಖಲಾರ್ಹ ಸಂಗತಿಯೆಂದರೆ ಅ. 8ರಂದು ಇಲ್ಲಿ ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಕರುಣಾಕರ ರೆಡ್ಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

English summary
According to sources the Former Karnataka Revenue Minister G. Karunakara Reddy will appear in public in Davangere constituency after a gap around 3 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X