ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೋನಿಗೆ ಉಗ್ರರ ಭೀತಿ, ಭಾರಿ ಭದ್ರತಾ ವ್ಯವಸ್ಥೆ

By Mahesh
|
Google Oneindia Kannada News

MS Dhoni
ರಾಂಚಿ, ಡಿ.7: ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರ ಮೇಲೆ ಸಂಭವನೀಯ ಉಗ್ರರು ದಾಳಿಯ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹೊರ ಹಾಕಿದೆ.

ಲಷ್ಕರ್ ಇ ತೋಯ್ಬಾ ಹಾಗು ಜೈ ಎ ಮಹಮ್ಮದ್ ಉಗ್ರ ಸಂಘಟನೆಗಳ ಹಿಟ್ ಲಿಸ್ಟ್ ನಲ್ಲಿ ಧೋನಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಸಂಸ್ಥೆ ಹೇಳಿದೆ.

ಉಗ್ರರ ಭೀತಿ ಹಿನ್ನೆಲೆಯಲ್ಲಿ ಧೋನಿ ಅವರಿಗೆ ಬಿಗಿ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ.

ಧೋನಿ ಸುತ್ತಾ ಮುತ್ತಾ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಸಿವಿಲ್ ಡ್ರೆಸ್ ನಲ್ಲಿ ಧೋನಿ ಅವರನ್ನು ಕಾವಲು ಕಾಯಲು ಒಂದು ಪ್ರತ್ಯೇಕ ಪಡೆಯನ್ನು ನಿಯೋಜಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಧೋನಿಯನ್ನು ಸುತ್ತುವರಿದ ಪೊಲೀಸ್ ಪಡೆ ಪ್ರತ್ಯೇಕ ಜೀಪ್ ನಲ್ಲಿ ಹರ್ಮು ಹೌಸಿಂಗ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಕರೆದುಕೊಂಡು ಬಿಟ್ಟು ಬಂದಿದ್ದಾರೆ. ಅವರ ಮನೆಯ ಸುತ್ತ ಮುತ್ತ ಪೊಲೀಸರು ಗಸ್ತು ತಿರುಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಉಗ್ರರ ಬಳಿ ಧೋನಿ ಅವರ ಅನೇಕ ಭಾವಚಿತ್ರಗಳು, ದೈನಂದಿನ ಮಾಹಿತಿ ವಿವರಗಳಿವೆ. ಜೊತೆಗೆ ರಾಜಕಾರಣಿಗಳು ಹಾಗೂ ಗಣ್ಯರ ಪಟ್ಟಿ ಕೂಡಾ ಸಿಕ್ಕಿದೆ. ಸೆಲೆಬ್ರಿಟಿಗಳ ಮೇಲೆ ಉಗ್ರರ ಕರಿನೆರಳು ಬಿದ್ದಿರುವುದರಿಂದ ಸುಮ್ಮನೆ ಕೂರಲು ಆಗುವುದಿಲ್ಲ. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರಾಂಚಿ ಪೊಲೀಸರು ಹೇಳಿದ್ದಾರೆ.

English summary
If cricket is a religion in India, Indian skipper MS Dhoni is considered a demi-god here. But looks like Dhoni's life is under threat according to a revelation made by the Intelligence Bureau. As per alert, Dhoni's name figures in the list of high profile names who are under the terror radar from outfits like Lashkar-e-Taiba and Jaish-e-Muhammad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X