ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ತೊರೆಯುವುದಿಲ್ಲ; ಕರುಣಾಕರ ರೆಡ್ಡಿ ಸ್ಪಷ್ಟೀಕರಣ

By Srinath
|
Google Oneindia Kannada News

i-wont-quit-bjp-karunakara-reddy-in-davangere
ದಾವಣಗೆರೆ, ಡಿ.7: ರೆಡ್ಡಿ ಸೋದರರ ರಾಜಕೀಯ ಬಂಟ ಶ್ರೀರಾಮುಲು ಬಳ್ಳಾರಿಯಲ್ಲಿ ಸಾಧಿಸಿದ ಘನಂದಾರಿ ಗೆಲುವು ಸೋದರರ ಮಧ್ಯೆ ವಿಷಬೀಜ ಬಿತ್ತುತ್ತಿದೆಯೇ!? ಇನ್ನೆಂದಿಗೂ ಬಿಜೆಪಿಯತ್ತ ಮುಖ ಮಾಡೊಲ್ಲ ಎಂದು ಶ್ರೀರಾಮುಲು ಚುನಾವಣೆ ಇಂಚುಮುಂಚು ಸಾವಿರ ಸಲ ಹೇಳಿದ್ದರೆ ಅಜ್ಞಾತವಾಸ ಮುಗಿಸಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಗಾಲಿ ಕರುಣಾಕರ ರೆಡ್ಡಿ ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ; ಬಳ್ಳಾರಿಯ ರೆಡ್ಡಿ ಕುಟುಂಬ ಪಕ್ಷಕ್ಕೇ ಅಂಕಿತ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಕ್ಷೇತ್ರವಾದ ದಾವಣಗೆರೆಯ ಹರಪನಹಳ್ಳಿಯಲ್ಲಿ ಇಂದು ಪ್ರತ್ಯಕ್ಷವಾದ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ಅವರು 45 ದಿನಗಳಿಂದ ಎಲ್ಲಿದ್ದೆ ಎಂಬುದು ವೈಯಕ್ತಿಕ ವಿಚಾರ ಎಂದು ಹೇಳಿಕೊಂಡಿದ್ದು, ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರು ತಮಗೆ ಜವಾಬ್ದಾರಿ ವಹಿಸಿದರೆ ರೆಡ್ಡಿಗಳು ಬಿಜೆಪಿಯಲ್ಲೇ ಉಳಿಯುವ ಪ್ರಯತ್ನಗಳನ್ನು ಕೈಗೊಳ್ಳುವೆ ಎಂದಿದ್ದಾರೆ.

ಸ್ವಾಭಿಮಾನಿ ಶ್ರೀರಾಮುಲು ಬಿಜೆಪಿ ತೊರೆದು ಚುನಾವಣಾ ಅಖಾಡಕ್ಕೆ ಇಳಿದಾಗ ಸೌಮ್ಯ ಸ್ವಭಾವದ ಕರುಣಾಕರ ರೆಡ್ಡಿ ತಮ್ಮ ಹಿರಿಯಣ್ಣ ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ರಾಮುಲು ಪರವಾಗಿ ಚುನಾವಣೆ ಪ್ರಚಾರಕ್ಕೆ ಅಪ್ಪಿತಪ್ಪಿಯೂ ಹೋಗಿರಲಿಲ್ಲ. ಪ್ರಚಾರದಿಂದ ದೂರವಾಗಿ ರಾಮುಲು ಅವರಿಂದ ವಿಮುಖಗೊಂಡಿದ್ದಾರೆ ಎಂಬ ಮಾತುಗಳು ಆಗಲೇ ಕೇಳಿಬಂದಿತ್ತು. ಇದೀಗ ಬಿಜೆಪಿಯಲ್ಲೇ ಉಳಿಯುವೆ ಎಂದು ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

English summary
The Former Karnataka Revenue Minister G. Karunakara Reddy has clarfied a short while ago in Harapanahalli, Davanagere that he wony quit BJP. Instead he will try to bridge the gap between BJP and Reddy brothers, given a chance by BJP leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X