ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯನ ಪಕ್ಕ ಭೂಮಿಯ ಅವಳಿ ಗ್ರಹ ಪತ್ತೆ: ನಾಸಾ

By Mahesh
|
Google Oneindia Kannada News

NASA discovered Second Earth
ಲಂಡನ್, ಡಿ.6: ಮಂಗಳ ಗ್ರಹದಲ್ಲಿ ನೀರುಂಟಾ? ಚಂದ್ರ ಗ್ರಹದಲ್ಲಿ ಜೀವಿಸಲು ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲೇ ಸೂರ್ಯನ ಸುತ್ತಾ ಭೂಮಿಯ ಅವಳಿ ಗ್ರಹವೊಂದು ಪತ್ತೆಯಾಗಿದೆ ಎಂದು ನಾಸಾ ಸಂಸ್ಥೆ ಪ್ರಕಟಿಸಿದೆ.

ನಾವು ವಾಸಿಸುತ್ತಿರುವ ಭೂ ಗ್ರಹದಂತೆ ಮತ್ತೊಂದು ಗ್ರಹ ಸೂರ್ಯ ಸುತ್ತಾ ಸುತ್ತುತ್ತಿದ್ದು, ವಾಸಿಸಲು ಯೋಗ್ಯವಾದ ವಾತಾವರಣ ಇರುವ ಆಶಯ ವ್ಯಕ್ತವಾಗಿದೆ.

ಸದ್ಯಕ್ಕೆ ಈ ಹೊಸ ಗ್ರಹಕ್ಕೆ ಕೆಪ್ಲೆರ್-22ಬಿ ಎಂದು ಹೆಸರಿಡಲಾಗಿದೆ. ಸೂರ್ಯನಿಂದ ಸುಮಾರು 600 ಜ್ಯೋತಿರ್ ವರ್ಷ ದೂರವಿರುವ ಈ ಗ್ರಹದಲ್ಲಿ ನೀರಿನ ಆಗರಗಳು ಕಂಡು ಬಂದಿದೆಯಂತೆ.

ನಮ್ಮ ವಿಶ್ವದ ಅವಳಿ ಗ್ರಹ ಕೆಪ್ಲೆರ್ 22ಬಿಯನ್ನು ನಾಸಾ ತಂಡ ಕೆಪ್ಲೆರ್ ಖಗೋಳ ಟೆಲಿಸ್ಕೋಪ್ ಮೂಲಕ ಕಂಡು ಹಿಡಿಯಲಾಗಿದೆ. ಹೊಸ ಜಗತ್ತನ್ನು ಹುಡುಕಾಟ ಕಾರ್ಯವನ್ನು 2009ರ ಮಾರ್ಚ್ 7ರಂದು ಆರಂಭಿಸಿದ ನಾಸಾ ತಂಡ ಈ ಹೊಸ ಆವಿಷ್ಕಾರವನ್ನು ಪ್ರಕಟಿಸಿದೆ.

ಒಟ್ಟು 3.5 ವರ್ಷಗಳ ಈ ಹುಡುಕಾಟದ ಯೋಜನೆಯಿಂದ ಹತ್ತಿರದ ಗೆಲ್ಯಾಕ್ಸಿಯಲ್ಲೇ ಭೂ ಗ್ರಹದಂತೆ ಸಾವಿರಾರು ಗ್ರಹಗಳು ಗೋಚರಿಸಿದೆ ಎನ್ನಲಾಗಿದೆ.

ಭೂಮಿಗಿಂತ 2.4 ಗಾತ್ರದಷ್ಟು ದೊಡ್ಡದಿರುವ ಕೆಪ್ಲೆರ್ 22ಬಿಯಲ್ಲಿ ಸಮಶಿತೋಷ್ಣ ವಾತಾವರಣ ಇದೆ ಎಂದು ನಂಬಲಾಗಿದೆ. ಗರಿಷ್ಠ ತಾಪಮಾನ ಸುಮಾರು 70 ಡಿಗ್ರಿ ಫೆ(21 ಡಿಗ್ರಿ ಸೆ) ಇರಬಹುದು ಎಂದು ವಿಜ್ಞಾನಿ ವಿಲಿಯಂ ಬೊರುಕ್ಕಿ ಹೇಳುತ್ತಾರೆ.

ನಮ್ಮ ಭೂಮಿಯ ಅವಳಿ ಆವಿಷ್ಕಾರದಲ್ಲಿ ಇದೊಂದು ಮಹತ್ತ್ವದ ಮೈಲಿಗಲ್ಲು ಎಂದು ಭಾವಿಸಲಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

English summary
The National Aeronautics and Space Administration (NASA) declared that they have discovered a most Earth-like planet close enough to the sun which might be suitable for living. The Planet called Kepler-22b, was found 600 light-years away in the "habitable zone" - the region around a star where liquid water could persist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X