ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಮುಂಬೈ ನಗರವನ್ನು ಕನ್ನಡಿಗರಿಗೆ ಕೊಡಿ

By Shami
|
Google Oneindia Kannada News

Vatal Nagaraj
ಬೆಂಗಳೂರು, ಡಿ 5: ಮುಂಬೈ ಮಹಾನಗರದಲ್ಲಿ 20 ಲಕ್ಷ ಜನ ಕನ್ನಡಿಗರಿದ್ದಾರೆ. ಮುಂಬೈ ನಗರವಾಸಿಗಳು ಊಟ ತಿಂಡಿಗೆ ನಂಬಿ ಕೊಂಡಿರುವುದು ಕನ್ನಡಿಗರನ್ನಾ. ಬಾಳ್ ಠಾಕ್ರೆ, ಶಿವಸೇನೆ, ಎಂಇಎಸ್ ಪುಂಡಪೋಕರಿಗಳ ದುಂಡಾವರ್ತನೆ ಇದೆ ರೀತಿ ಮುಂದುವರಿದರೆ ಮುಂಬೈ ಮಹಾನಗರದ ಅರ್ಧ ಭಾಗವನ್ನು ಕರ್ನಾಟಕಕ್ಕೇ ನೀಡಬೇಕೆಂದು ಹೋರಾಟ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ.

ಟಿವಿ9 ವಾಹಿನಿಯ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವಾಟಾಳ್, ಆ ಬಾಳ್ ಠಾಕ್ರೆ ಅನ್ನೋ ಮುದಿಗೂಬೆ ಮುಂಬೈ ನಲ್ಲಿ ಕೂತು ಹೇಳಿಕೆ ನೀಡಿದರೆ ಏನು ಪ್ರಯೋಜನ? ಕನ್ನಡಿಗರ ಸೊಂಟ ಮುರಿಯುವ ಠಾಕ್ರೆ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಬೀದಿಯಲ್ಲಿ ಹೋಗುವ ನಾಯಿ ಬೊಗಳಿದರೆ ದೇವಲೋಕಕ್ಕೆ ಏನು ತೊಂದರೆ ಏನು ವಾಟಾಳ್ ವ್ಯಂಗ್ಯವಾಡಿದ್ದಾರೆ.

ಪುಣೆ, ಕೊಲಾಪುರ, ಮೀರಜ್, ಸಾಂಗ್ಲಿ ಮುಂತಾದ ಭಾಗಗಳಲ್ಲಿ ಕನ್ನಡಿಗರೂ ಮರಾಠಿಗರಷ್ಟೇ ಇದ್ದಾರೆ. ನಾವು ಆ ಭಾಗವನ್ನು ಕರ್ನಾಟಕಕ್ಕೇ ಸೇರಿಸಬೇಕೆಂದು ಎಂದಾದರೂ ಹೋರಾಟ ನಡೆಸಿದ್ದೀವಾ? ಆ ಠಾಕ್ರೆ ಬುದ್ದಿಗೆ ಏನಾಗಿದೆ? ಬೋನಿನಲ್ಲಿ ಕೂತು ಘರ್ಜಿಸಿದರೆ ಕನ್ನಡಿಗರ ಒಂದು ಕೂದಲು ಅಲ್ಲಾಡಿಸಲು ಮುದಿ ಠಾಕ್ರೆಯಿಂದ ಸಾಧ್ಯವಿಲ್ಲ ಎಂದು ಒಂಟಿಸಲಗ ಎಂದು ತನ್ನನ್ನು ತಾನೇ ಕರೆಸಿ ಕೊಳ್ಳುವ ವಾಟಾಳ್ ನಾಗಾರಾಜ್ ವಾಹಿನಿ ಮುಂದೆ ಘರ್ಜಿಸಿದ್ದಾರೆ.

ಈ ವಾಟಾಳ್ ಬಯಸಿದರೆ ಎಂದೋ ಮುಖ್ಯಮಂತ್ರಿ ಆಗುತ್ತಿದೆ. ನನಗೆ ಅದರ ಆಸೆಯಿಲ್ಲ. ಕನ್ನಡಕ್ಕಾಗಿ ನನ್ನ ಜೀವವನ್ನು ಮುಡಿಪಾಗಿಟ್ಟಿದ್ದೇನೆ, ಸದ್ಯದಲ್ಲೇ ಎಲ್ಲಾ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ರಾಜಭವನ ಚಲೋ ನಡೆಸಿ ಬೆಳಗಾವಿ ಪಾಲಿಗೆ ವಿಸರ್ಜಿಸಲು ಮತ್ತು ಎಂಇಎಸ್ ನಿಷೇಧಿಸಲು ಆಗ್ರಹಿಸಲಿದ್ದೇವೆ ಎಂದು ವಾಟಾಳ್ ಹೇಳಿಕೆ ನೀಡಿದ್ದಾರೆ.

English summary
Kannada activist Vatal Nagaraj demands half of Mumbai territory for inclusion in Karnataka State. More than 20 Lakh Kannada people live in the Financial Capital of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X