ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ, ಬಾಟಲಿಯಲ್ಲಿ ಎಚ್ಐವಿ ಸೋಂಕಾಣು: ಪೆಪ್ಸಿ ಕುಡಿಯಬೇಡಿ

By Srinath
|
Google Oneindia Kannada News

pepsi-products-hiv-tainted-take-care-sms
ಬೆಂಗಳೂರು, ಡಿ. 5: ಹೌದು, ಇತ್ತೀಚೆಗೆ ಇಂತಹ ಎಸ್ಎಂಎಸ್ ಎಲ್ಲರ ಮೊಬೈಲುಗಳಲ್ಲಿಯೂ ಸರಸರನೆ ಹರಿದಾಡುತ್ತಿದೆ. 'ಪೆಪ್ಸಿ ಬಾಟಲಿಯಲ್ಲಿ ಎಚ್ಐವಿ ಸೋಂಕಿನ ರಕ್ತವನ್ನು ಬೆರೆಸಲಾಗಿದೆ. ಆದ್ದರಿಂದ ಪಾನೀಯವನ್ನು ಕುಡಿಯಬೇಡಿ' ಎಂಬ ಆತಂಕಕಾರಿ ಸಂದೇಶ ಒಂದೇ ಸಮನೆ ರವಾನೆಯಾಗುತ್ತಿದೆ.

ಕಂಪನಿಯ ಉದ್ಯೋಗಿಯೊಬ್ಬ ಎಚ್ಐವಿ ಪೀಡಿತನಾಗಿದ್ದು pepsi, tropicana juice, slice, 7up , coca cola ಮುಂತಾದ ಪಾನೀಯಗಳಲ್ಲಿ ತನ್ನ ಎಚ್ಐವಿ ಸೋಂಕಾಣು ಬೆರಸಿದ್ದಾನೆ. ಆದ್ದರಿಂದ ಎಚ್ಚರ, ಬಾಟಲಿಯಲ್ಲಿ ಎಚ್ಐವಿ ಸೋಂಕಾಣು ಇರುತ್ತದೆ. ಪೆಪ್ಸಿ ಕುಡಿಯಬೇಡಿ. ಹೆಚ್ಚಿನ ಮಾಹಿತಿಗಾಗಿ NDtv ವೀಕ್ಷಿಸಿ ಎಂಬುದು ಸಂದೇಶದ ಸಾರ.

ಆದರೆ ಪೆಪ್ಸಿ ಮಾರಾಟ ಕಂಪನಿ ಇಂತಹ ಆತಂಕವನ್ನು ದೂರ ಮಾಡಿದ್ದು, ನಿರ್ಭೀತಿಯಿಂದ ಪೆಪ್ಸಿ ಆಸ್ವಾದಿಸಿ ಎಂದು ಸ್ಪಷ್ಟನೆ ನೀಡಿದೆ. ಇಂತಹ ಹುಸಿ ಸಂದೇಶಗಳನ್ನು ನಂಬಬೇಡಿ. ಒಂದೆರಡು ತಿಂಗಳಿಂದ ಇಂತಹ ಸಂದೇಶ ಹರಿದಾಡುತ್ತಿದೆ. ಹಾಗಂತ, ಪೆಪ್ಸಿ ಕುಡಿಯುವುದನ್ನು ನಿಲ್ಲಿಸಬೇಡಿ ಎಂದು ಕಂಪನಿಯ ಮಾರುಕಟ್ಟೆ ಉಪಾಧ್ಯಕ್ಷೆ ಹೇಮಲತಾ ರಾಘವನ್ ತಿಳಿಸಿದ್ದಾರೆ.

ಅಷ್ಟಕ್ಕೂ ಆಹಾರ, ಕುಡಿಯುವ ನೀರಿನ ಮೂಲಕ ಎಚ್ಐವಿ ಸೋಂಕಾಣು ರವಾನಿಸಲು ಸಾಧ್ಯವೇ? ಈ ರೀತಿ ಸಂದೇಶವನ್ನು ಕಳಿಸುವವರಿಗೆ ವೈಜ್ಞಾನಿಕವಾಗಿ ಇಷ್ಟು ಮಾತ್ರದ ತಿಳಿವಳಿಕೆ ಬೇಡವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಪೆಪ್ಸಿ ಪಾನೀಯದ ಉತ್ಪಾದನೆ ಮತ್ತು ಮಾರುಕಟ್ಟೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪಾನೀಯ ಸೇವನೆಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಕಲಿ ಎಸ್ಎಂಎಸ್ ನಲ್ಲಿ ಹುರುಳಿಲ್ಲ' ಎಂದು ಹೇಮಲತಾ ಹೇಳಿದ್ದಾರೆ.

ಎಸ್ಎಂಎಸ್ ಸಂದೇಶ ಹೀಗಿದೆ: "for d next few days, do not drink any product from pepsi company like pepsi, tropicana juice, slice, 7up , coca cola, etc,,as a worker from the company has added his blood contaminated with HIV. watch NDtv ...please 4ward this 2 every 1 u care about.....ok. Please note seriously."

English summary
An SMS saying that Pepsi products are contaminated with HIV has been circulating. But marketing vice-president Hemalatha Ragavan has said that there was no truth to it and urged people not to believe such claims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X