• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀರಾಮುಲುಗೆ ಗೆಲುವು ತಂದು ಕೊಟ್ಟ ಜಮೀರ ಅಹ್ಮದ್

By Mahesh
|

ಬಳ್ಳಾರಿ, ಡಿ.4: ಈ ಗೆಲುವು ನನ್ನದಲ್ಲ. ರಾಜ್ಯದ ಜನರ ಗೆಲುವಾಗಿದೆ ಎನ್ನುತ್ತಾ ಬಂದಿರುವ ಶ್ರೀರಾಮುಲು ಮತ್ತೆ ಜನನಾಯಕನಾಗಿ ಮೆರೆದಿದ್ದಾರೆ. ಬಿಸಿಲಲ್ಲಿ ಬೆಂದಿರುವ ಬಳ್ಳಾರಿ ಜನತೆ ಕಮಲ, ಕೈ ನೆರವಿಗಿಂತ ಫ್ಯಾನ್ ಗಾಳಿಗೆ ಬೇಕು ಎಂದಿರುವುದರಲ್ಲಿ ಅಚ್ಚರಿಯೇನಿಲ್ಲ.

ಆದರೆ, ಶ್ರೀರಾಮುಲು ಅವರಿಗೆ ಭಾರಿ ಅಂತರದ ಗೆಲುವು ದೊರಕಿಸಿಕೊಡುವಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹಮದ್ ಮಹತ್ವದ ಪಾತ್ರ ವಹಿಸಿದ್ದಾರೆ. ಬಳ್ಳಾರಿ ಮತ ಸಮರದಲ್ಲಿ ಕೊನೆ ಗಳಿಗೆಯಲ್ಲಿ ಕಾಣಿಸಿಕೊಂಡ ಜಮೀರ್, ಶ್ರೀರಾಮುಲು ಅವರಿಗೆ ಹೆಚ್ಚಿನ ಮುಸ್ಲಿಮ್ ಮತಗಳು ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡದೆ ಕಡೆಗಾಣಿಸಿದ ಬಿಜೆಪಿ ಸರ್ಕಾರ ತಕ್ಕ ಬೆಲೆ ತೆತ್ತಿದೆ.

ಫ್ಯಾನ್ ಕೈ ಹಿಡಿದ ಮತದಾರ: ಬಳ್ಳಾರಿಯಲ್ಲಿ ಹಿಂದುಳಿದ ವರ್ಗದ ಮತಗಳೇ ನಿರ್ಣಯಕ ಎಂಬ ಸತ್ಯ ಗೊತ್ತಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು, ಶ್ರೀರಾಮುಲುಗೆ ಬೀಳಬಹುದಾದ ಮತಗಳನ್ನು ವಿಭಜನೆ ಮಾಡುವ ತಂತ್ರ ಮಾಡಲು ಹೋಗಿ ಸೋಲು ಕಾಣಬೇಕಾಯಿತು.

ಲಿಂಗಾಯತ, ಬಲಿಜ, ಬಂಜಾರ, ಬೇಡ, ಮುಸ್ಲೀಮ್ ಮತ ಸೆಳೆಯಲು ಬಿಜೆಪಿ ಹವಣಿಸಿತು, ಯಡಿಯೂರಪ್ಪ ಅವರನ್ನು ಕರೆತಂದು ಲಿಂಗಾಯತ ಮತಗಳನ್ನು ಪಕ್ಕದಲ್ಲಿ ಈಶ್ವರಪ್ಪ ಅವರನ್ನು ನಿಲ್ಲಿಸಿ ಕುಂಬಾರರ ಮತಗಳನ್ನು ಪಡೆಗಳನ್ನು ಹಾಗೂ ಉಳಿದ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಲು ಬಿಜೆಪಿ ಯತ್ನಿಸಿತ್ತು. ಆದರೆ, ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿ ಬಳಿ ನಾಯಕರೇ ಇರಲಿಲ್ಲ.

ಈ ಅಂಶವನ್ನು ಗಮನಿಸಿದ ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಕೊನೆ ಗಳಿಗೆಯಲ್ಲಿ ಅಪ್ತ ಜಮೀರ್ ಅವರನ್ನು ಕಳುಹಿಸಿ, ಕೌಲ್ ಬಜಾರ್ ಕ್ಷೇತ್ರದಲ್ಲಿ ಹರಕು ಮುರುಕು ಕನ್ನಡದಲ್ಲಿ ಜಮೀರ್ ಕೈಲಿ ಭಾಷಣ ಮಾಡಿಸಿ, ಶ್ರೀರಾಮುಲುಗೆ ಬೆಂಬಲ ವ್ಯಕ್ತ ಪಡಿಸಿದ್ದು ನಿರ್ಣಾಯಕವಾಗಿಬಿಟ್ಟಿತು. ಶ್ರೀರಾಮುಲುಗೆ ಮುಸ್ಲಿಂ ಮತಗಳು ಭರ್ಜರಿ ಜಯ ತಂದು ಕೊಟ್ಟಿದೆ.

English summary
Bellary By Election Result 2011: JDS MLA Zameer Ahmed played a vital role in independent candidate B Sriramulu's big victory in Bellary. BJP's plan of splitting Muslim votes become reverse and Sriramulu got more votes in Muslim dominant constituency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X