• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಎಂಎಸ್ ಗೆ ಈಗ 19ರ ಹರೆಯ gz!

By Mahesh
|

ಲಂಡನ್, ಡಿ.4: ಎಸ್ಎಂಎಸ್ ಯಾರಿಗೆ ಗೊತ್ತಿಲ್ಲ. ಹದಿಹರೆಯದವರ ಅಪ್ತ ಸಂಭಾಷಣಾ ಸಂವಹಕ SMSಗೆ ಈಗ 19 ವರ್ಷದ ಸಂಭ್ರಮ.

ವಿಕಿಪೀಡಿಯಾದ ಮಾಹಿತಿಯಂತೆ 1992ರಲ್ಲಿ ಮೊದಲ ವಾಣಿಜ್ಯ ಎಸ್ಎಂಎಸ್ ಸಂದೇಶವನ್ನು ನೀಲ್ ಪಾಪ್ವರ್ಥ್ ಎಂಬುವರು ರಿಚರ್ಡ್ ಜಾರ್ವಿಸ್ ಅವರಿಗೆ ರ್ವೋಡಾಫೋನ್ ಜಿಎಸ್ ಎಂ ನೆಟ್ವರ್ಕ್ ಮೂಲಕ ಮೆರಿ ಕ್ರಿಸ್ ಮಸ್ ಸಂದೇಶ ಕಳುಹಿಸಿದ್ದರಂತೆ.

ಅಂದು 'Merry Christmas' ಎಂದು ವ್ಯಾಕರಣಬದ್ಧವಾಗಿ ಬರೆದ ಸಂದೇಶ ಇಂದಾಗಿದ್ದರೆ "omg m3rry xma5!" ಎಂದು ವಿಶೇಷಣಾ ಸಹಿತ ಹೊರಹೊಮ್ಮುತ್ತಿತ್ತು. ಇದೇ ರೀತಿ ಶೀರ್ಷಿಕೆಯಲ್ಲಿ ಬಳಸಿರುವ 'gz' ಅಕ್ಷರಗಳು ಕೂಡಾ 'congratulations' ನ ಸಂಕ್ಷಿಪ್ತ ರೂಪವಾಗಿದೆ.

ಫ್ರೀಡ್ ಹೆಲ್ಮ್ ಹಿಲ್ಲೆಬ್ರ್ಯಾಂಡ್ ಹಾಗೂ ಬರ್ನಡ್ ಗಿಲ್ಬರ್ಟ್ ಅವರು 1984ರಲ್ಲೇ ಎಸ್ ಎಂಎಸ್ ತಂತ್ರಜ್ಞಾನ ಬೆಳವಣಿಗೆಗೆ ಪ್ರಯತ್ನಪಟ್ಟಿದ್ದರು. ಜರ್ಮನಿಯ ಫ್ರಾಂಕೋ ಜರ್ಮನ್ ಜಿಎಸ್ ಎಂ ಕಾರ್ಪೋರೇಷನ್ ನಲ್ಲಿ ಎಸ್ ಎಂಎಸ್ ಬಳಕೆ ಚಾಲನೆಯಲ್ಲಿತ್ತು.

ಇದಾದ ಎಂಟೂ ವರ್ಷಗಳ ನಂತರ ಮೊದಲ ಎಸ್ ಎಂಎಸ್ ರವಾನೆಯಾಗಿ ಹೊಸ ಸಂವಹನ ಸಾಧ್ಯತೆಗೆ ನಾಂದಿ ಹಾಡಲಾಯಿತು. 2010ರಲ್ಲಿ ಎಸ್ ಎಂಎಸ್ ವಾಹಕದಿಂದ ಸುಮಾರು 114.6 ಬಿಲಿಯನ್ ಡಾಲರ್ ನಷ್ಟು ಆದಾಯ ಸೃಷ್ಟಿಯಾಗಿದೆಯಂತೆ. ಮೊಬಿಥಿಂಕಿಂಗ್.ಕಾಂ ಸಮೀಕ್ಷೆ ಪ್ರಕಾರ 2011ರಲ್ಲಿ ಸುಮಾರು 8 ಟ್ರಿಲಿಯನ್ ಎಸ್ ಎಂಎಸ್ ಗಳು ಹರಿದಾಡುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A many many happy returns of the day to the Text Message, as you are 19 years old today. According to Wikipedia, the first commercial SMS was sent by Neil Papworth over the Vodafone GSM network in the United Kingdom on Dec 1992 wishing Richard Jarvis Merry Christmas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more