ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗಾಗಿ ವಿಶೇಷ ಪ್ರೀಮಿಯಂ ಕ್ರೆಡಿಟ್ ಕಾರ್ಡ್

|
Google Oneindia Kannada News

HDFC credit card
ಬೆಂಗಳೂರು, ಡಿ 3: ಮನೆಯ ಎಲ್ಲಾ ಜವಾಬ್ದಾರಿಗಳನ್ನು ಮತ್ತು ಹಣಕಾಸಿನ ಹೊಣೆ ನಿಭಾಯಿಸುವುದು ಹೆಚ್ಚಾಗಿ ಮಹಿಳೆಯರೇ ಎನ್ನುವುದು ಎಲ್ಲರೂ ಒಪ್ಪ ಬೇಕಾದ ಸತ್ಯ. ಹಾಗಿದ್ದರೂ ಬಹಳಷ್ಟು ಮಹಿಳೆಯರ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಈಗ ಈ ಸೌಲಭ್ಯವನ್ನು ನೀಡಲು ಮುಂದಾಗಿದೆ ಖಾಸಾಗಿ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಎಚ್ ಡಿ ಎಫ್ ಸಿ ಬ್ಯಾಂಕ್.

ವರದಿಯ ಪ್ರಕಾರ ದೇಶದ ಶೇ. 40ರಷ್ಟು ಮನೆಯಲ್ಲಿ ಮಹಿಳೆಯರ ಮೇಲೆ ಮನೆ ನಿಭಾಯಿಸುವ ಜವಾಬ್ದಾರಿ ಇರುವುದರಿಂದ ದೇಶದ ಪ್ರತಿಷ್ಟಿತ ಬ್ಯಾಂಕ್ ಎಚ್ ಡಿ ಎಫ್ ಸಿ ಬ್ಯಾಂಕ್ ಈ ಸೌಲಭ್ಯ ನೀಡಲು ಮುಂದಾಗಿದೆ. ಸಾಲಿಟೇರ್ ಪ್ರೀಮಿಯಂ ಮತ್ತು ಸಾಲಿಟೇರ್ ಹೆಸರಿನ ಎರಡು ಮಾದರಿಯ ಕ್ರೆಡಿಟ್ ಕಾರ್ಡ್ ಗಳನ್ನೂ ಬ್ಯಾಂಕ್ ಹೊರ ತಂದಿದೆ.

ಮುಂದಿನ ಎರಡು ವರ್ಷಗಳಲ್ಲಿ ಸುಮಾರು ನಾಲ್ಕು ಮಿಲಿಯನ್ ಕ್ರೆಡಿಟ್ ಕಾರ್ಡ್ ಅನ್ನು ಮಹಿಳೆಯರಿಗೆ ವಿತರಿಸುವ ಟಾರ್ಗೆಟ್ ಹಾಕಿ ಕೊಂಡಿರುವ ಬ್ಯಾಂಕ್, ಈ ಹೊಸ ಕ್ರೆಡಿಟ್ ಕಾರ್ಡ್ ಯಶಸ್ವಿಯಾಗುವ ವಿಶ್ವಾಸ ಹೊಂದಿದೆ.
ಸದ್ಯ ಬ್ಯಾಂಕ್ ಒಟ್ಟಾರೆ ಆರು ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸಾಲಿಟೇರ್ ಪ್ರೀಮಿಯಂ ಐದು ಲಕ್ಷ ಮತ್ತು ಸಾಲಿಟೇರ್ ಕಾರ್ಡ್ ಎರಡು ಲಕ್ಷ ಲಿಮಿಟ್ ಹೊಂದಿರುತ್ತದೆ.

ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ : http://www.hdfcbank.com/personal/Cards/Credit_Cards/Solitaire_Credit_Card/cc_solitaire.htm

English summary
Private Sector Bank HDFC, launched premium credit cards exclusively for women. Bank expects to add 4 million credit cards in the next two years. At present bank has about six million credit card customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X