ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಗ್ನಿ' ಪರೀಕ್ಷೆಯಲ್ಲಿ ಗೆದ್ದ ಗೂಗಲ್ ಕ್ರೋಮ್

By Prasad
|
Google Oneindia Kannada News

Chrome wins war over Firefox
ಬೋಸ್ಟನ್, ಡಿ. 2 : 'ಅಗ್ನಿ' ಪರೀಕ್ಷೆಯಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಕೊನೆಗೂ ಜಯಶಾಲಿಯಾಗಿದೆ. ಸಾಕಷ್ಟು ಜನಪ್ರಿಯತೆ ಗಳಿಸುತ್ತಿರುವ ಗೂಗಲ್ ನ ಕ್ರೋಮ್ ಬ್ರೌಸರ್ ಮೊಟ್ಟಮೊದಲ ಬಾರಿಗೆ ಮೋಜಿಲ್ಲಾ ಫೈರ್‌ಫಾಕ್ಸ್ ಬ್ರೌಸರನ್ನು ಹಿಂದಿಕ್ಕಿದೆ.

ವೆಬ್‌ಸೈಟ್ ವಿಶ್ಲೇಷಣಾ ಸಂಸ್ಥೆ ಸ್ಟಾಟ್ ಕೌಂಟರ್ ಪ್ರಕಾರ, ನವೆಂಬರ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗೂಗಲ್ ಕ್ರೋಮ್ ಶೇ.25.69 ಪಾಲು ಹೊಂದಿದ್ದರೆ, ಫೈರ್‌ಫಾಕ್ಸ್ ಪಾಲು ಶೇ.25.23. ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಈಗಲೂ ಅಗ್ರಸ್ಥಾನ ಕಾಪಾಡಿಕೊಂಡಿದ್ದು, ಅದರ ಪಾಲು ಶೇ.40.63ರಷ್ಟಿದೆ.

ಗ್ರಾಫ್ ನಲ್ಲಿ ಮೇಲಕ್ಕೇರುತ್ತಿರುವ ಗೂಗಲ್ ಕ್ರೋಮ್ ಬ್ರೌಸರ್ ಮುಂದಿನ ದಿನಗಳಲ್ಲಿ ಮೈಕ್ರೋಸಾಫ್ಟ್ ಐಇ ಬ್ರೌಸರ್‌ಗೆ ಟಕ್ಕರ್ ನೀಡಲಿದೆ ಎಂದು ಸ್ಟಾಟ್ ಕೌಂಟರ್ ಸಿಇಓ ಆಓಧನ್ ಕಲ್ಲನ್ ಅಭಿಪ್ರಾಯಪಟ್ಟಿದ್ದಾರೆ. ಬ್ರೌಸರ್ ಬಳಕೆಯನ್ನು ಮಾತ್ರ ಆಧಾರವಾಗಿಟ್ಟು ಈ ಅಂಕಿಅಂಶಗಳಿಗೆ ಬರಲಾಗಿದೆ.

English summary
Google Chrome browser has passed fire test and surpassed Mozilla Firefox browser in market share in the month of November 2011. Microsoft IE browser still in the leading position. Stats by StatCounter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X