ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮನಾಭಸ್ವಾಮಿಗೆ 'ಅನಂತ' ಭದ್ರತಾ ವ್ಯವಸ್ಥೆ

By Srinath
|
Google Oneindia Kannada News

padmanabha-temple-full-security-in-place
ತಿರುವನಂತಪುರ, ಡಿ. 2: ಗುಪ್ತವಾಗಿ ಅಡಗಿಸಿಟ್ಟುಕೊಂಡಿದ್ದ ಅಗಾಧ ಸಂಪತ್ತು ದಿಢೀರನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಇದೀಗ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ಸ್‌ಪೆಕ್ಟರ್ ಮಟ್ಟದ ಪೊಲೀಸ್ ಅಧಿಕಾರಿಗಳು ದೇವಸ್ಥಾನದ ರೀತಿರಿವಾಜಿನಂತೆ ಧಾರ್ಮಿಕವಾಗಿ ಬಟ್ಟೆ ಧರಿಸಿ, ದೇವಸ್ಥಾನದ ಒಳಾಂಗಣದಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ. (ಪಕ್ಕದ ಚಿತ್ರ ನೋಡಿ)

ಕ್ಷೇತ್ರದ ನೆಲಮಾಳಿಗೆಯ ಆರು ರಹಸ್ಯ ಕೊಠಡಿಗಳ ಪೈಕಿ ಐದರಲ್ಲಿ ಜಗತ್ತು ನಿಬ್ಬೆರಗಾಗುವಷ್ಟು ಸಂಪತ್ತು ಪತ್ತೆಯಾದ ಬಳಿಕ ಸಂಪತ್ತಿನ ಕಾವಲಿನ ಸಮಸ್ಯೆ ತಲೆದೋರಿದೆ. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಮಾಡಿರುವ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಉದ್ಘಾಟಿಸಿದ್ದಾರೆ.

ಕ್ಷೇತ್ರಕ್ಕೆ ಲೋಪ ರಹಿತ ಭದ್ರತೆಯನ್ನು ಒದಗಿಸುವ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿರುವ ಭರವಸೆಯನ್ನು ರಾಜ್ಯ ಹಂತ ಹಂತವಾಗಿ ಕಾರ್ಯಗತಗೊಳಿಸುತ್ತಿದೆ ಎಂದು ಚಾಂಡಿ ಈ ಸಂದರ್ಭದಲ್ಲಿ ಹೇಳಿದರು. ದೇವಸ್ಥಾನದ ಸುತ್ತ 24 ಗಂಟೆಯೂ ಕಣ್ಗಾವಲು ಇಡುವ ಸಲುವಾಗಿ ಬಹು ಹಂತದ ಸಿಸಿಟಿವಿ ಅಳವಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಆಯಕಟ್ಟಿನ ಜಾಗದಲ್ಲಿ 58 ಸಿಸಿಟಿವಿಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ವೈಜ್ಞಾನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿರುವ ಸರಕಾರಿ ಸ್ವಾಮ್ಯದ ಕೆಲ್ಟ್ರಾನ್‌ ಸಂಸ್ಥೆ ಪೊಲೀಸರಿಗೆ ಅದನ್ನು ನಿಭಾಯಿಸುವ ತರಬೇತಿ ನೀಡುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರದ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುವಾಂಕೂರು ರಾಜಮನೆತನದ ಉತ್ರಾಡಂ ತಿರುನಾಳ್‌ ಮಾರ್ತಾಂಡ ವರ್ಮ, ಡಿಜಿಪಿ ಜೇಕಬ್‌ ಪುನ್ನೋಸ್‌ ಮತ್ತಿತರರು ಉಪಸ್ಥಿತರಿದ್ದರು.

English summary
Security has been tightened at Sree Padmanabhaswamy temple in Karela which shot into fame after discovery of prciesless treasures running into hundreds of crores of rupees in its secret cellars and underground chambers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X