ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಜೀಪಿನಲ್ಲಿ ಬಾರ್ ಗರ್ಲ್: ಪೇದೆ ಸಸ್ಪೆಂಡ್

By Srinath
|
Google Oneindia Kannada News

cop-caught-with-bar-girl-police-jeep
ಮುಂಬೈ, ಡಿ. 2: ಪೇದೆಯೊಬ್ಬ ಪೊಲೀಸ್ ಜೀಪಿನಲ್ಲೇ ಒಬ್ಬ ಬಾರ್ ಡ್ಯಾನ್ಸರ್ ಅನ್ನು ಕೂಡಿಸಿಕೊಂಡು ಓಡಾಡುತ್ತಿರುವುದು ಕಣ್ಣಿಗೆ ಬಿದ್ದು ಮೇಲಧಿಕಾರಿ ಆ ಪೇದೆಯನ್ನು ಸಸ್ಪೆಂಡ್ ಮಾಡಿದ್ದಾರೆ.

ಇಲ್ಲಿನ ಸೇನಾಭವನದ ಎದುರು ಎಲ್ ಜಿ ಕಾರ್ನರಿನಲ್ಲಿ ಗುರುವಾರ ಬೆಳಗಿನ ಜಾವ 2 ಗಂಟೆಯಲ್ಲಿ ಎಸ್. ಎಂ. ಮೋರೆ ಎಂಬ ಪೊಲೀಸ್ ಪೇದೆ ಶ್ವೇತಬಣ್ಣದ ಪೊಲೀಸ್ ಜೀಪಿನಲ್ಲಿ ಕುಳಿತಿರುವುದು ಡಿಸಿಪಿ ಕಿಶೋರ್ ಜಾಧವ್ ಅವರ ಕಣ್ಣಿಗೆ ಬಿದ್ದಿದೆ. 'ತಾನು ಜೀಪಿನ ಬಳಿ ಸಾಗುತ್ತಿದ್ದಂತೆ ಮೋರೆ ಓಡಿಹೋಗಿದ್ದಾನೆ. ಆದರೆ ಜೀಪಿನಲ್ಲಿ 57 ವರ್ಷದ ಉದ್ಯಮಿ ಮತ್ತು 27 ವರ್ಷದ ಬಾರ್ ಗರ್ಲ್ ಇದ್ದರು' ಎಂದು ಜಾಧವ್ ತಿಳಿಸಿದ್ದಾರೆ.

ಮೋರೆ ತನ್ನ ಮೇಲಧಿಕಾರಿಯನ್ನು ಅವರ ಮನೆ ಬಳಿ ಬಿಟ್ಟು ವಾಪಸಾಗುವಾಗ ರೂಢಿಯಂತೆ ಉದ್ಯಮಿ ಮತ್ತು ಬಾರ್ ಗರ್ಲ್ ಅನ್ನು ಜೀಪಿಗೆ ಹತ್ತಿಸಿಕೊಂಡಿದ್ದಾನೆ. ಜೀಪನ್ನು ಕಾನೂನುಬಾಹಿರ ಚಟುವಟಿಕೆಗೆ ಬಳಸಿದ ಆರೋಪದ ಮೇಲೆ ಮೋರೆಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಮಧ್ಯೆ, ಉದ್ಯಮಿ ಮತ್ತು ಬಾರ್ ಗರ್ಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
A deputy commissioner closed in on a police jeep only to find that a constable was with a bar girl inside the jeep with a businessman. The incident occurred on Wednesday night when DCP Kishore Jadhav was on night duty and found a parked white police jeep standing at the corner of LG Road around 2 am near Sena Bhavan in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X