ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಜಿ ಹಗರಣ: ರಾಜಾಗೆ ಬಿಡುಗಡೆಯ ಭಾಗ್ಯ ಮರೀಚಿಕೆ

By Srinath
|
Google Oneindia Kannada News

2g-scam-raja-bail-a-distant-reality
ನವದೆಹಲಿ, ಡಿ.2: 2ಜಿ ಹಗರಣದಲ್ಲಿ ತಾಜಾ ಆಗಿ ಚಂದೋಲಿಯಾ ಜೈಲಿನಿಂದ ಹೊರಬಂದಿದ್ದು, ಹಗರಣದ ಸೂತ್ರಧಾರ ಎ. ರಾಜಾ ಮತ್ತು ಮತ್ತು ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮಾತ್ರ ಇನ್ನೂ ಜೈಲಿನಲ್ಲೇ ಇದ್ದಾರೆ. ಸದ್ಯಕ್ಕೆ ಅವರಿಗೆ ಬಿಡುಗಡೆ ಭಾಗ್ಯ ಮರೀಚಿಕೆಯಾಗಿದೆ. ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಇತರೆ ಎಲ್ಲ 12 ಆರೋಪಿಗಳಿಗೆ ಜಾಮೀನು ದೊರಕಿದೆ.

ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅವರು ಗುರುವಾರ ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯಾ ಅವರಿಗೆ ಜಾಮೀನು ನೀಡುತ್ತಾ ಒಂದು ಖಡಕ್ ಸಂದೇಶವನ್ನೂ ರವಾನಿಸಿದೆ. ಅಂದರೆ, ಯಾವುದೇ ಕಾರಣಕ್ಕೂ ರಾಜಾ ಮತ್ತು ಬೆವೂರಾ ಅವರಿಬ್ಬರು ಸದ್ಯಕ್ಕೆ ಜೈಲಿನಿಂದ ಹೊರಬರೊಲ್ಲ.

ರಾಜಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಚಂದೋಲಿಯಾಗೆ 'ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಇರಲಿಲ್ಲ. ಅಲ್ಲದೆ ಅವರೇ ಖುದ್ದಾಗಿ ಲಂಚ ಪಡೆದಿದ್ದಾರೆ ಎಂಬ ಆರೋಪಗಳು ಇಲ್ಲ' ಎಂದು ನ್ಯಾಯಾಧೀಶ ಸೈನಿ ಹೇಳಿದರು.

'ಸಹ ಆರೋಪಿ ಎ. ರಾಜಾ ದೂರಸಂಪರ್ಕ ಖಾತೆ ಮುಖ್ಯಸ್ಥರಾಗಿದ್ದರು. ಬೆವೂರಾ ಅವರು ಅದರ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದರು. ಇಂತಹ ಸಂದರ್ಭದಲ್ಲಿ ಚಂದೋಲಿಯಾ ಅವರ ಪ್ರಕರಣ ಈ ಇಬ್ಬರೊಂದಿಗೆ ಯಾವುದೇ ರೀತಿಯಲ್ಲೂ ಹೋಲುವುದಿಲ್ಲ' ಎಂದು ಕೋರ್ಟ್ ಹೇಳಿತು. ಅದಕ್ಕೂ ಮುನ್ನ ಸಿಬಿಐ ಪರ ನ್ಯಾಯವಾದಿ ಯುಯು ಲಲಿತ್ ಅವರು ಚಂದೋಲಿಯಾಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.

English summary
Despite opposition from the Central Bureau of Investigation (CBI), a Delhi court on Thursday granted bail to RK Chandolia, the former private secretary of the then telecom minister A Raja, in the 2G spectrum allocation scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X