ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪತ್ರಕರ್ತೆ ಸ್ಮಿತಾ ಸಾವಿನ ಕಾರಣ ಹುಡುಕುತ್ತಾ

By Mahesh
|
Google Oneindia Kannada News

Smitha Rao suicide mystery
ಬೆಂಗಳೂರು, ಡಿ.2: ಇನ್ಫೋಸಿಸ್ ಉದ್ಯೋಗಿ, ಮಾಜಿ ಪತ್ರಕರ್ತೆ, ಸಮಾಜಿಕ ಕಳಕಳಿ ಇದ್ದ ಸ್ಮಿತಾ ರಾವ್(32) ಅತ್ಯಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿದೆ. ಪ್ರಾಥಮಿಕ ವರದಿ ಆಧಾರದ ಮೇಲೆ ಪತಿ ಗೂಗಲ್ ಸಂಸ್ಥೆ ಉದ್ಯೋಗಿ ಟೆಕ್ಕಿ ರೋಹಿತ್ ಅವರ ಮೇಲೆ ಆರೋಪ ಹೊರೆಸಲಾಗಿದೆ.

ರೋಹಿತ್ ಕೂಡಾ ವಿಚಾರಣೆಗೆ ಸ್ಪಂದಿಸುತ್ತಿದ್ದು, ಸ್ಮಿತಾ ಜೊತೆ ದಾಂಪತ್ಯದಲ್ಲಿ ಕಲಹವೇ ಹೆಚ್ಚಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಆದರೆ, ಸಾವಿನಂಚಿನಲ್ಲಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ ಎಂದು ತನಿಖಾಧಿಕಾರಿ ಪ್ರಭಾಕರ್ ಹೇಳಿದ್ದಾರೆ.

ಇನ್ಫೋಸಿಸ್ ಸೇರಿ ಕಾರ್ಪೊರೇಟ್ ಜಗತ್ತಿನ ಉದ್ಯೋಗಿಯಾದ ಸ್ಮಿತಾ ಹಾಗೂ ಟೆಕ್ಕಿ ರೋಹಿತ್ ವಿವಾಹ 2007ರಲ್ಲಿ ಆಗಿತ್ತು. ಸ್ಮಿತಾ ಇನ್ಫೋಸಿಸ್ ಸೇರಿ ಹೆಚ್ಚು ಕಮ್ಮಿ ಒಂದು ವರ್ಷ ಆಗಿದೆ ಎನ್ನಬಹುದು.

ವೆಬ್ ನಿರ್ವಾಹಕಿ ಸ್ಮಿತಾ ಕಳೆದುಕೊಂಡ ಇನ್ಫೋಸಿಸ್ ಆಕೆ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಮಿತಾ ಬರೆದಿರುವ ಡೆತ್ ನೋಟ್ ಈ ಪ್ರಕರಣದಲ್ಲಿ ಪ್ರಮುಖವಾಗಲಿದೆ. ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪತ್ರದಲ್ಲಿ ಏನಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

News reportage, travel writing, book reviews ನಲ್ಲಿ ವಿಶೇಷ ಪರಿಣತಿ ಪಡೆದಿದ್ದ ಸ್ಮಿತಾ ಅವರಿಗೆ ಕಾರ್ಪೋರೇಟ್ ಜಗತ್ತಿಗಿಂತ ಪತ್ರಿಕೋದ್ಯಮದಲ್ಲೇ ಪರಿಣತಿ, ಆಸಕ್ತಿ ಹೆಚ್ಚು ಎನ್ನಲಾಗಿದೆ.

ಇಟಲಿಯ ಮಿಲಾನೋದಲ್ಲಿ ಶೈಕ್ಷಣಿಕ ಫೆಲೋಶಿಪ್ ಪಡೆದಿದ್ದ ಸ್ಮಿತಾ ಮದುವೆ ನಂತರ ದುಡಿದಿದ್ದು ಪತ್ರಿಕಾ ರಂಗದಲ್ಲಿ. ಅದರಲ್ಲೂ ಪ್ರತಿಷ್ಠಿತ ಆಂಗ್ಲ ಪತ್ರಿಕೆಗಳಲ್ಲಿ ಎಂಬುದು ವಿಶೇಷ.

ಆದ್ರೆ, ಸ್ಮಿತಾ ಇನ್ಫೋಸಿಸ್ ಸೇರಲು ಕಾರಣವೇನು? ಇನ್ಫೋಸಿಸ್ ಸೇರಿದ ಸ್ಮಿತಾ ಹಾಗೂ ರೋಹಿತ್ ನಡುವೆ ವೃತ್ತಿ ವಿಷಯದಲ್ಲಿ ಉಂಟಾಗಿದ್ದ ಕಲಹವಾದರೂ ಏನು? ಜನಾಗ್ರಹದಂಥ ಸಾಮಾಜಿಕ ಕಳಕಳಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸ್ಮಿತಾ ಬಗ್ಗೆ ರೋಹಿತ್ ತಳೆದಿದ್ದ ನಿಲುವು ಏನು ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ.

ಸ್ಮಿತಾಳ ಫೇಸ್ ಬುಕ್ ಪುಟದ ತುಂಬಾ RIP, ದುಃಖತಪ್ತ ಸಂದೇಶಗಳೇ ತುಂಬಿದೆ. ಎಲ್ಲಾ ಪ್ರಶ್ನೆಗಳಿಗೂ ಸದ್ಯದಲ್ಲೇ ಹೆಣ್ಣೂರು ಠಾಣೆ ಕಡೆಯಿಂದ ಉತ್ತರ ದೊರೆಯಲಿದೆ ಎಂಬ ನಿರೀಕ್ಷೆಯಿದೆ.

English summary
Smitha Rao Suicide Mystery: Infosys' assistant manager and former woman journalist Smitha Rao who hanged herself to death on Monday(Nov.28). With the mystery regarding her death gaining momentum, there are reports that suggest that she was being harassed by her husband, Techie Rohit. Rohit is working as a software engineer with the popular search engine firm Google.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X