ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ರವಾನೆ, ಚೀನಾ ಹಿಂದಿಕ್ಕಿದ ಭಾರತ : ವಿಶ್ವಬ್ಯಾಂಕ್

By Mahesh
|
Google Oneindia Kannada News

India tops remittances list:WB
ವಾಷಿಂಗ್ಟನ್, ಡಿ.1: ಸತತ ನಾಲ್ಕನೇ ವರ್ಷವೂ ಹಣರವಾನೆ(remittances) ದಾಖಲಾತಿ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಅಗ್ರಸ್ಥಾನಕ್ಕೇರಿದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ.

2011ನೆ ಸಾಲಿನಲ್ಲಿ ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಒಟ್ಟು 35,100ಕೋಟಿ ಡಾಲರ್ ವಿದೇಶಿ ಹಣವನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳುತ್ತಿದೆ.

ವಿದೇಶದಲ್ಲಿ ನೆಲೆಯೂರಿರುವ ಎನ್ನಾರೈಗಳು, ಉದ್ಯಮಿಗಳ ಮೂಲಕ 5,800 ಕೋಟಿ ಡಾಲರ್ ಮೊತ್ತವನ್ನು ಭಾರತವು ಸ್ವೀಕರಿಸುವ ನಿರೀಕ್ಷೆಯಿದೆ. ಚೀನಾದಲ್ಲಿ 57,00 ಕೋಟಿ ವಿದೇಶಿ ಹಣ ರವಾನೆಯಾಗಲಿದೆ. ಮೆಕ್ಸಿಕೋ 2,400ಕೋಟಿ ಡಾಲರ್ ಹಾಗೂ ಫಿಲಿಫೈನ್ಸ್ 2,300 ಕೋಟಿ ಡಾಲರ್ ಮೊತ್ತದ ಹಣವನ್ನು ಸ್ವೀಕರಿಸಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ಜಗತ್ತಿನಾದ್ಯಂತ ವಿವಿಧ ದೇಶಗಳು ಸ್ವೀಕರಿಸಿದ ವಿದೇಶಿ ಹಣದ ಮೊತ್ತವು 40,600 ಕೋಟಿ ಡಾಲರನ್ನು ತಲುಪಲಿದೆ ಎಂದು ವಿಶ್ವಬ್ಯಾಂಕ್‌ನ ಪರಿಷ್ಕೃತ ವರದಿ ಹೇಳಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯ, ವಿಯೆಟ್ನಾಂ, ಈಜಿಪ್ಟ್ ಹಾಗೂ ಲೆಬನಾನ್ ಅತ್ಯಧಿಕ ಮೊತ್ತದ ವಿದೇಶಿ ಹಣವನ್ನು ಸ್ವೀಕರಿಸಲಿರುವ ಇತರ ರಾಷ್ಟ್ರಗಳಾಗಿವೆ.

2008ರ ಆರ್ಥಿಕ ಹಿಂಜರಿತ ಹಾಗೂ ಯುರೋಪ್ ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗಾವಕಾಶಗಳ ಪ್ರಮಾಣ ಕುಸಿತಗೊಂಡಿದೆ. ಆದರೆ, ಕೆಲವು ಅಧಿಕ ಆದಾಯ ಇರುವ ದೇಶಗಳ ವಿದೇಶಿ ಹಣ ರವಾನೆ ಪ್ರಮಾಣವು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುವಂಎ ಮಾಡುವ ನಿರೀಕ್ಷೆಯಿದೆ.

English summary
India has narrowly edged out China and tops World Bank’s recipient of official recorded remittances list. World Bank’s Migration and Development released details containing estimates for 2011 remittances, India is expected to receive $58 billion this year, followed by $57 billion flowing to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X