ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಲೆಂಟ್ ಆಗಿ ಶೆಟರ್ ಕೆಳಗೆಳೆದ ವಾಲ್ಮಾರ್ಟ್

By Mahesh
|
Google Oneindia Kannada News

Retail Market Bandh
ನವದೆಹಲಿ, ಡಿ.1: ಸೇವ್ ಮನಿ, ಲಿವ್ ಬೆಟರ್ ಎಂದು ನಿಧಾನವಾಗಿ ಭಾರತದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಡುತ್ತಿರುವ ವಾಲ್ಮರ್ಟ್ ಸಂಸ್ಥೆ ಗುರುವಾರ ಸೈಲೆಂಟ್ ಆಗಿ ತನ್ನ ಮಳಿಗೆ ಶೆಟರ್ ಎಳೆದಿದೆ.

ನವದೆಹಲಿ, ಜೈಪುರದಲ್ಲಿರುವ ವಾಲ್ಮರ್ಟ್ ಮಳಿಗೆ ಗಳು ರೀಟೈಲ್ ಕ್ಷೇತ್ರದ ವರ್ತಕರ ಪ್ರತಿಭಟನೆಯ ಬಿಸಿಗೆ ಹೆದರಿ ತಮ್ಮ ಅಂಗಡಿ ಮಳಿಗೆಯ ಬಾಗಿಲು ಮುಚ್ಚಿದ್ದಾರೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಸುಮಾರು 5 ಕೋಟಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ವರ್ತಕರ ಒಕ್ಕೂಟ ಈ ಭಾರತ್ ಬಂದ್ ನಲ್ಲಿ ಪಾಲ್ಗೊಂಡಿದೆ.

ದೆಹಲಿಯ ಭಾರ್ತಿ ವಾಲ್ಮರ್ಟ್ ಸ್ಟೋರ್ ಹಾಗೂ ಕೇರ್ ಫಾರ್ ಮಳಿಗೆಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.

ಜಂತರ್ ಮಂತರ್ ಬಳಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ವ್ಯಾಪಾರಿಗಳು, ವಾಲ್ಮಾರ್ಟ್, ಕೇರ್ ಫಾರ್ ಹಾಗೂ ಟೆಸ್ಕೋ ಮುಂತಾದ ಸಂಸ್ಥೆಗಳು ದೇಶಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು, ಕೇರಳದಲ್ಲೂ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಗಿದೆ. ಯುಪಿಎ ಸರ್ಕಾರದ ನಿರ್ಧಾರವನ್ನು ಬಿಜೆಪಿ, ಎಐಎಡಿಎಂಕೆ, ಎಡಪಕ್ಷ, ಎಸ್ ಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿರೋಧಿಸಿದೆ. ಗುರುವಾರ ಸಂಜೆಯೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಕೇಂದ್ರ ಸಚಿವ ಆನಂದ್ ಶರ್ಮ ಹೇಳಿದ್ದಾರೆ.

English summary
With as many as 5 crore traders shutting their shop as a mark of protest to the government's move to welcome Foreign Direct Investment in the retail sector. Bharti Walmart and Carrefour stores are closed in Delhi. FKCCI, trade union with support from BJP are holding protest in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X