ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಕಗ್ಗೊಲೆ

By * ಇಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Indian hockey decline
ಒಂದೇ ಸಮನೆ ಕ್ರಿಕೆಟ್ ಹುಚ್ಚಿರುವ ಭಾರತದಲ್ಲಿ, ಒಂದು ಕಾಲದಲ್ಲಿ ಎಲ್ಲರಿಗೆ ಪ್ರಿಯವಾಗಿದ್ದ ಹಾಕಿ ಆಟ ಏನಾಗಿದೆ? ಹಾಕಿ ಆಟವನ್ನು ನಡೆಸುವ ಅಸೋಸಿಯೇಷನ್ನು ಸದ್ದಿಲ್ಲದೆ, ನಮ್ಮೆಲ್ಲರಿಗೂ ಗೊತ್ತಿಲ್ಲದೆ, ಹಾಕಿ ಏಳಿಗೆಗೆ ಶ್ರಮ ಪಡುತ್ತಿದೆಯೇ?

ಅಯ್ಯೋ! ಬಿಡ್ತು ಅನ್ನಿ! ಅಂಥಾ ಒಳ್ಳೆ ಕೆಲಸ ಮಾಡೋದಕ್ಕೆ ಅವರು ಕೈಯೇ ಹಾಕಿಲ್ಲ! ಇನ್ನೂ ಮುರಿಯಲು ಮುಂದಾಗಿದ್ದಾರೆ.

ಹಾಕಿ ನಡೆಸುವ ಅಸೋಸಿಯೇಷನ್ ಮಧ್ಯದಲ್ಲಿ ಒಡೆದು, ಇಬ್ಭಾಗವಾಗಿ, ಒಂದು 'ಹಾಕಿ ಇಂಡಿಯಾ', ಮತ್ತೊಂದು, 'ಇಂಡಿಯನ್ ಹಾಕಿ ಫೆಢೆರೇಷನ್' ಎಂದು ಎರಡು ಹೋಳುಗಳಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ!

ಕ್ರೀಡಾ ಸಚಿವ ಅಜಯ್ ಮಾಕನ್ ಇವರಿಬ್ಬರ ಜಗಳವನ್ನು ಪರಿಹರಿಸಿ, ಹಾಕಿಯನ್ನು ಮತ್ತೆ ಏಳಿಗೆಯ ಹಾದಿಯಲ್ಲಿ ತರುತ್ತಾರೆಂಬ ನಂಬಿಕೆ ಇಟ್ಟ ಹಾಕಿ ಆಟಗಾರರಿಗೂ ಮತ್ತು ಅಭಿಮಾನಿಗಳೀಗೆ ನಿರಾಶೆ ಉಂಟು ಮಾಡಿದೆ.

ಅದನ್ನು ಸರಿಮಾಡಲು ಮಾಕನ್ನರು ಕೈಯೇ ಹಾಕಿಲ್ಲ. ಅದನ್ನು ಬಿಟ್ಟು ಬಿಸಿಸಿಐ ಜೊತೆ 'ಆರ್ ಟಿಐ' ವಿಚಾರದಲ್ಲಿ ಯುದ್ಧಕ್ಕೆ ಇಳಿದಿದ್ದಾರೆ!

ಇವರೆಲ್ಲರಿಗೂ ಎರಡೆರಡು ಹಾಕೋಣವೇ ಅಂತ ಅನ್ಸುತ್ತೆ !

ಹಾಕಿಯಲ್ಲಿ ಏನಾಗುತ್ತಿದೆ? ಸ್ವಲ್ಪ ನೋಡೋಣ ಬನ್ನಿ. 'ಹಾಕಿ ಇಂಡಿಯ' ಕ್ರೀಡಾ ಇಲಾಖೆಗೆ ಸೇರಿದ್ದು. ಮಾಕನ್ ಕೆಳಗಿರುವ ಅಸೋಸಿಯೇಷನ್.

ಇಂಡಿಯನ್ ಹಾಕಿ ಫೆಡೆರೇಷನ್ ಮತ್ತು 'ನಿಂಬಸ್ ಸ್ಪೋರ್ಟ್ಸ್' ಸೇರಿ ಇದೇ ತಿಂಗಳಲ್ಲಿ ಭಾರತದಲ್ಲಿ ಶುರುವಾಗುವ ವರ್ಲ್ಡ್ ಸೀರಿಸ್ ಟೂರ್ನಿಮೆಂಟ್‌ಗೆ ಸಿದ್ಧತೆ ನಡೆಸಿದ್ದಾರೆ!

ಭಾರತದಲ್ಲಿ ಒಂಬತ್ತು ಜಾಗಗಳಲ್ಲಿ ನಡೆಯುವ - ಮುಂಬೈ, ಬೆಂಗಳೂರು, ಜಲಂಧರ್, ಪುಣೆ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಎಂಟು ಟೀಮಿರುವ ಈ 'ವರ್ಲ್ಡ್ ಕಪ್ 'ಗೆ ಸೋಜಿಗ ಸಂಗತಿಯೇನಂದರೆ, ಭಾರತದ ಹಾಕಿ ಪ್ಲೇಯರ್ ಯಾರೂ ಇದರಲ್ಲಿ ಆಡುವ ಹಾಗಿಲ್ಲ!

ಭಾರತದಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ನಡೆದಾಗ, ಸಚಿನ್, ಧೋಣಿ, ಜಹೀರ್ ಖಾನ್, ಯುವರಾಜ್ ಭಾರತದ ಟೀಮಿನಲ್ಲಿ ಇಲ್ದಿದ್ರೆ ಹೇಗಿರುತ್ತೆ? ಪ್ರೇಕ್ಷಕರು ಅಂತಹ ಮ್ಯಾಚ್ಗಳು ಆಡುವುದಕ್ಕೆ ಬಿಡುವರೇ?

'ಭಾರತದ ಯಾವ ಪ್ಲೇಯರ್‍ನೂ ಇದರಲ್ಲಿ ಪಾಲು ಗೊಳ್ಳಬಾರದು' ಎಂದು ಹಾಕಿ ಇಂಡಿಯಾದ ಕಾರ್ಯದರ್ಶಿ ನರೇಂದ್ರ ಬಾತ್ರ , ಪ್ಲೇಯರ್ಸ್ ಗಳಿಗೆ 'ವಾರ್ನ್' ಮಾಡಿದ್ದಾರೆ! ಇದರಲ್ಲಿ ಆಡಿದರೆ ಮುಂದೆ ಎಂದೂ ಭಾರತಕ್ಕೆ ಆಡುವ ಹಾಗಿಲ್ಲ ಅಂತ ಎಚ್ಚರಿಸಿದ್ದಾರೆ, ಬಾತ್ರ!

ದೇವರೇ ಕಾಪಾಡಬೇಕು, ನಮ್ಮ ದೇಶದ ಹಾಕಿಯನ್ನು.

ಒಂದು ಕಾಲದಲ್ಲಿ ನಾವು ಸತತ 30 ವರ್ಷದ ಮೇಲೆ ಒಲಿಂಪಿಕ್ಸ್ ಚಾಂಪಿಯನ್ಸ್ ಆದ ಮೇಲೆ ಈಗ ಒಬ್ಬರಿಗೊಬ್ಬರು ಗುದ್ದಾಡುತ್ತ ಹಾಕಿಯನ್ನು ಅಧೋಗತಿಗೆ ಇಳಿಸಿದ್ದೇವೆ!

ಆಜಯ ಮಾಕನ್ರು ಈ 'ಡಾಗ್ ಫೈಟ'ನ್ನು ಯಾಕೆ ಪರಿಹಾರ ಮಾಡುತ್ತಿಲ್ಲ ?

English summary
Indian Hockey is declining just because of Hockey federation and sport ministry. Minister Ajay Makan has no idea to uplift national sport of India. Instead of solving the problem in Hockey India and Indian Hockey Federation the minister is worried about giant BCCI earning report from Citizen Journalist ER Ramachandran
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X