ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಿಚಿತರ ಪ್ರವೇಶ: ಶಬರಿಮಲೆ ಭದ್ರೆತೆಗೆ ಆತಂಕ

|
Google Oneindia Kannada News

Lord Ayyappa
ತಿರುವನಂತಪುರಂ, ನ 30: ತಮಿಳುನಾಡು ಮತ್ತು ಆಂಧ್ರಪ್ರದೇಶ ಮೊದಲಾದ ಕಡೆಯಿಂದ ಬಂದ ನೂರಾರು ಮಂದಿ ಸ್ಪಷ್ಟ ಗುರುತಿನ ಪತ್ರವಿಲ್ಲದೆ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಕಳವಳಕಾರಿ ಅಂಶ ಬಯಲಾಗಿದೆ. ಅತಿಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿರುವ ಶ್ರೀ ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಗುರುತಿನ ಚೀಟಿಯಿಲ್ಲದೆ ನೂರಾರು ಸಂಖ್ಯೆಯಲ್ಲಿ ಅಪರಿಚಿತ ವ್ಯಕ್ತಿಗಳು ತುಂಬಿ ಹೋಗಿದ್ದಾರೆ.

ದೇವಾಸ್ಥಾನದ ವಿಜಿಲೆನ್ಸ್ ವಿಭಾಗ ನಡೆಸಿದ ತನಿಖೆಯಲ್ಲಿ ಈ ಮೇಲಿನ ಅಂಶ ಬಹಿರಂಗ ಗೊಂಡಿದ್ದು, ಸುಮಾರು 250 ಮಂದಿ ಪೋಲೀಸ್ ಕ್ಲಿಯೇರನ್ಸ್ ಪತ್ರವನ್ನೇ ನಕಲಿ ಮಾಡಿ ದೇವಾಲಯದ ಆವರಣಕ್ಕೆ ಆಗಮಿಸಿದ್ದಾರೆ. ಇದರಲ್ಲಿ ಬಹಳಷ್ಟು ಮಂದಿ ಕ್ಷೇತ್ರದ ಸನ್ನಿಧಾನ ಮತ್ತು ಇತರ ಕಡೆ ಕೆಲಸ ಕೂಡಾ ನಿರ್ವಹಿಸುತ್ತಿದ್ದಾರೆಂದು ವರದಿಯಾಗಿದೆ.

ಶಬರಿಮಲೆಗೆ ವಿವಿಧ ಕೆಲಸಗಳಿಗೆ ಬರುವವರಲ್ಲಿ ಯಾರಾದರೂ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆಯೇ ಅಥವಾ ಶಿಕ್ಷೆ ಅನುಭವಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯ ಪಡಿಸುವ ಪೋಲೀಸ್ ಕ್ಲಿಯೇರನ್ಸ್ ಪತ್ರವನ್ನೇ ನಕಲಿ ಮಾಡಿರುವ ಬಗ್ಗೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಗೃಹ ಖಾತೆಗೆ ಪತ್ರ ಬರೆಯಲಾಗಿದೆ ಎಂದು ಮಂಡಳಿ ಹೇಳಿಕೆ ನೀಡಿದೆ.

ಗುರುತಿನಪತ್ರ ಇಲ್ಲದವರನ್ನು ವಿಜಿಲೆನ್ಸ್ ಕಂಡು ಹಿಡಿದಿದ್ದರೂ ಇಂಥವರನ್ನು ಶಬರಿಮಲೆಯಿಂದ ಹೊರ ಕಳುಹಿಸುವುದಕ್ಕೆ ಅಥವಾ ಕ್ರಮ ತೆಗೆದು ಕೊಳ್ಳಲು ಕೇರಳ ಪೊಲೀಸರು ಇದುವರೆಗೆ ಮುಂದಾಗದೆ ಇರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.

English summary
With the mountain temple of Sabarimala having to face many terror threats recently, a fresh alert has been sounded by intelligence agencies warning of a security scare in the hill shrine of Sabarimala. With the pilgrimage entering the temple premises without valid ID proof or Police clearance certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X