ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ನಿಜಕ್ಕೂ ಲಕ್ ತಿರುಗಿದೆ ಕಂಡ್ರಿ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ನ.28: ಭೂ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತವರ ಇಬ್ಬರು ಪುತ್ರರು ಹಾಗೂ ಅಳಿಯ ನಿರಾಳರಾಗಿದ್ದಾರೆ.

ಸಿರಾಜಿನ್ ಬಾಷಾ ದಾಖಲಿಸಿದ್ದ ಐದು ಖಾಸಗಿ ದೂರುಗಳ ಪೈಕಿ ನಾಲ್ಕರಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಸೋಹನ್ ಕುಮಾರ್‌ಗೆ ಜಾಮೀನು ನೀಡಿದ್ದ ಹೈಕೋರ್ಟ್, ಐದನೆ ದೂರಿನಲ್ಲೂ ಅವರಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ನಿರೀಕ್ಷಣಾ ಜಾಮೀನು ಕೋರಿದ್ದ ಯಡಿಯೂರಪ್ಪ ಅವರ ವಕೀಲರ ಮನವಿಯನ್ನು ನ್ಯಾ.ಎಚ್. ಬಿಲ್ಲಪ್ಪ ಪುರಸ್ಕರಿಸಿದ್ದಾರೆ. ತಲಾ 2ಲಕ್ಷ ರೂ. ಮೊತ್ತದ ಬಾಂಡ್, ಇಬ್ಬರು ಭದ್ರತಾ ಜಾಮೀನು ನೀಡಬೇಕು. ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ, ಬೆದರಿಕೆ ಒಡ್ಡುವಂತಿಲ್ಲ. ಕೋರ್ಟ್ ಅನುಮತಿಯಿಲ್ಲದೆ ದೇಶಬಿಟ್ಟು ಹೋಗುವಂತಿಲ್ಲ. ಸಾಕ್ಷಾಧಾರಗಳನ್ನು ನಾಶಪಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಜಾಮೀನು ನೀಡಿದ್ದು ಏಕೆ?: ಆರೋಪಿಗೆ ಯಾವುದೇ ಕ್ರಿಮಿನಲ್ ಇತಿಹಾಸ ಇಲ್ಲ. ಜೊತೆಗೆ ಯಾವುದೇ ಗಂಭೀರ ಆರೋಪ ಕೂಡಾ ಇಲ್ಲ ಹಾಗಾಗಿ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಸಿರಾಜಿನ್ ಬಾಷಾ ಅವರು ಸುಪ್ರೀಂಕೋರ್ಟ್ ಗೆ ಮೊರೆ ಹೊಕ್ಕಿದ್ದು ವಿಚಾರಣೆ ನಡೆಯಬೇಕಿದೆ.

English summary
In further relief to former chief minister BS Yeddyurappa, the Karnataka High Court on Monday(Nov.28) granted anticipatory bail to him and his family members in a corruption case. Justice H Billappa directed them to furnish Rs 2 lakh bond and two sureties each for a like sum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X