ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಶೇಬಲ್ ಪ್ರಶಸ್ತಿ : ಒಬಾಮಾ ಜೊತೆ ಮೋದಿ ಸ್ಪರ್ಧೆ

By Prasad
|
Google Oneindia Kannada News

Narendra Modi nominated for Mashable Awards 2011
ಟ್ವಿಟ್ಟರ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಭಾರತದ ರಾಜಕಾರಣಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರತಿಷ್ಠಿತ 'ಮಾಶೇಬಲ್ ಪ್ರಶಸ್ತಿ 2011'(The Mashable Awards 2011)ಗೆ ನಾಮನಿರ್ದೇಶನಗೊಂಡಿದ್ದಾರೆ.

ಡಿಜಿಟಲ್ ಸಂಸ್ಕೃತಿ, ಸೋಷಿಯಲ್ ಮೀಡಿಯಾ ಮತ್ತು ತಂತ್ರಜ್ಞಾನ ಸುದ್ದಿಗಳ ಬಿತ್ತರಕ್ಕಾಗಿ ಮುಡಿಪಾಗಿರುವ ಅತಿ ದೊಡ್ಡ ವೆಬ್ ತಾಣವಾಗಿರುವ ಮಾಶೇಬಲ್ 28 ವಿಭಿನ್ನ ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದೆ. 'ಸಾಮಾಜಿಕ ತಾಣದಲ್ಲಿ ಹಿಂಬಾಲಿಸಲೇಬೇಕಾಗಿರುವ ರಾಜಕಾರಣಿ' ವಿಭಾಗದಲ್ಲಿ ಮೋದಿ ನಾಮಿನೇಟ್ ಆಗಿದ್ದಾರೆ.

ನರೇಂದ್ರ ಮೋದಿಯವರು ಭಾರತದಿಂದ ನಾಮನಿರ್ದೇಶನಗೊಂಡಿರುವ ಏಕೈಕ ಭಾರತೀಯ ಮತ್ತು ಅಮೆರಿಕಾದ ಹೊರಗಡೆಯಿರುವ ಏಕೈಕ ಸಾರ್ವಜನಿಕ ವ್ಯಕ್ತಿ. ನರೇಂದ್ರ ಮೋದಿಯವರು ನಾಮನಿರ್ದೇಶನಗೊಂಡ ವಿಭಾಗದಲ್ಲಿಯೇ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಕೂಡ ನಾಮಿನೇಟ್ ಆಗಿರುವುದು ಭಾರತೀಯರಿಗೆ ಭಾರೀ ಹೆಮ್ಮೆಯ ವಿಷಯವಾಗಿದೆ.

ಸಾರ್ವಜನಿಕ ವೋಟಿಂಗ್ ಮುಖಾಂತರ 28 ವಿಭಾಗಗಳಲ್ಲಿ ತಲಾ 7 ಜನರನ್ನು ಅಂತಿಮ ಸುತ್ತಿಗೆ ಮಾಶೇಬಲ್ ಸಂಪಾದಕೀಯ ತಂಡ ಆಯ್ಕೆ ಮಾಡಿದೆ. ನೆಟ್ಟಿಗರು ಟ್ವಿಟ್ಟರ್ ಅಥವಾ ಫೇಸ್ ಬುಕ್ ತಾಣಗಳ ಮುಖಾಂತರ ಡಿ.16ರವರೆಗೆ ತಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡಬಹುದಾಗಿದೆ. ಡಿ.19ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತಿದೆ.

ನರೇಂದ್ರ ಮೋದಿ ಜೊತೆಗಿರುವ ಇತರರೆಂದರೆ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಅಮೆರಿಕಾ ಅಧ್ಯಕ್ಷ ಪದವಿಗೆ ಸ್ಪರ್ಧಿಸಲಿರುವ ರಾನ್ ಪೌಲ್, ಹರ್ಮನ್ ಕೇನ್, ಬಡ್ಡಿ ರೋಮರ್, ಅಮೆರಿಕಾದ ಸ್ವತಂತ್ರ ಸೆನೆಟರ್ ಬರ್ನಿ ಸ್ಯಾಂಡರ್ಸ್ ಮತ್ತು ನ್ಯೂ ಜೆರ್ಸಿ ಮೇಯರ್ ಕೋರಿ ಬೂಕರ್.

English summary
Gujarat chief minister Narendra Modi has been nominated for prestigious The Mashable Awards 2011 in 'Must-follow politician on social media' category. Narendra Modi is the only person to be nominated from India in all the 28 categories. US President Barack Obama too nominated in the same category as Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X