ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ, ಯಡ್ಡಿ ಗುಪ್ತ ಮೈತ್ರಿ ಹೊರಗೆಳೆದಿದ್ದು ಎಂಸಿ ನಾಣಯ್ಯ

By Mahesh
|
Google Oneindia Kannada News

DK Shivakumar
ಬೆಂಗಳೂರು, ನ.29: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಯಡಿಯೂರಪ್ಪ ಅವರು ಡಿನೋಟಿಫಿಕೇಷನ್ ಮೂಲಕ ನೀಡಿದ ಗಿಫ್ಟ್ ಇದುವರೆಗೂ ಕಂಡ ಭೂ ಹಗರಣಗಳಲ್ಲೇ ಅತಿ ದೊಡ್ಡದು ಎಂದು ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ಈ ವಂಚನೆಯಲ್ಲಿ ಜಮೀನಿನ ವಿಸ್ತೀರ್ಣ, ಭೂ ಮೌಲ್ಯಕ್ಕಿಂತ ಒಂದು ಸರ್ಕಾರ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದ ಆರೋಪವಿದೆ. ರಾಜ್ಯ ಭೂ ಪರಭಾರೆ ಕಾಯ್ದೆ ಉಲ್ಲಂಘನೆಯಾಗಿದೆ.

* ಭೂಮಿ ಖರೀದಿ ಸಂದರ್ಭದಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಕಾನೂನಿನ ಅರಿವಿರಲಿಲ್ಲವೇ?
* 1991ರಲ್ಲಿ ಜಮೀನು ಡಿನೋಟಿಫಿಕೇಷನ್ ಆಗಿತ್ತು ಎಂದಾದರೆ, ಅದನ್ನು ಸರ್ಕಾರದ ರಾಜ್ಯಪತ್ರ(ಗೆಜೆಟ್)ದಲ್ಲಿ ಅದನ್ನು ಪ್ರಕಟಿಸಿದ್ದು ಏಕೆ?
* ಗೆಜೆಟ್ ನಲ್ಲಿ ನಮೂದಿಸಲ್ಪಟ್ಟಿರುವ ಜಮೀನನ್ನು ಯಡಿಯೂರಪ್ಪ ಸರ್ಕಾರ ಡಿನೋಟಿಫೈ ಮಾಡಿದ್ದು ಏಕೆ? 20 ವರ್ಷ ಮುಂಚಿತವಾಗಿ ಡಿನೋಟಿಫೈಆಗಿತ್ತು ಎಂಬುದು ಅಲ್ಲಿಗೆ ಸುಳ್ಳು ಎಂದು ಸಾಬೀತಾಗುತ್ತದೆ ಅಲ್ಲವೇ?
* ಬಿಕೆ ಶ್ರೀನಿವಾಸ್ ಅವರಿಂದ ಜಮೀನು ಪಡೆದಿರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಮೇ 2010ರ ಗೆಜೆಟ್ ನಲ್ಲಿ ಬಿಕೆ ಶ್ರೀನಿವಾಸ್ ಅವರೇ ಸ್ವತ್ತಿನ ಮಾಲೀಕರು ಎಂದು ಹೇಳಲಾಗಿದೆ ಏಕೆ?
ಎಂಬ ಪ್ರಶ್ನೆಗಳನ್ನು ಎಸೆದಿರುವ ನಾಣಯ್ಯ ಅವರು ಡಿನೋಟಿಫಿಕೇಷನ್ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸುತ್ತಾರೆ.

ಸುಪ್ರೀಂಕೋರ್ಟ್ ಏನು ಹೇಳುತ್ತದೆ?:

The Supreme Court, in Y N Garg versus State of Rajasthan (1996 (1) SCC 284) and in Sneh
Prabha versus State of UP (1996 (7) 325), had held:

"Alienation made by the erstwhile owner of the land after publication of the notification under Section 4(1), does not bind either the State Government or the beneficiary for whose benefit the land was acquired. The purchaser does not acquire any valid title. Even the colour of title claimed by the purchaser was void."

English summary
JDS Leader MC Nannaih alleges Congress leader DK Shivakumar is allegedly granted land by BS Yeddyurappa through land denotification is the biggest fraud and Land scam.Yeddyurappa did this to save his government from opposition attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X