ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಉದ್ಯೋಗಿ ಸ್ಮಿತಾ ಬಲಿಗೆ ಗಂಡನೇ ಕಾರಣ?

By Mahesh
|
Google Oneindia Kannada News

Journalist, Infosys employee Smitha Rao suicide mystery
ಬೆಂಗಳೂರು, ನ.29: ಬೆಂಗಳೂರಿಗೆ ಆತ್ಮಹತ್ಯಾ ನಗರಿ ಎಂಬ ಟ್ಯಾಗ್ ಸ್ಥಿರವಾಗುತ್ತಿದ್ದಂತೆ ಯುವಕ, ಯುವತಿಯರ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಮವಾರ ಮೃತಪಟ್ಟ ಇನ್ಫೋಸಿಸ್ ಉದ್ಯೋಗಿ ಸ್ಮಿತಾ ರಾವ್ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ಎದ್ದಿದೆ.

ಸ್ಮಿತಾರಾವ್ ಸಾವಿಗೆ ಕಾರಣ ಎಂಬ ಆರೋಪದ ಮೇಲೆ ಪತಿ ರೋಹಿತ್ ಅನಂತಕೃಷ್ಣರನ್ನು ಹೆಣ್ಣೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಗೂಗಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರೋಹಿತ್ ಮೇಲೆ ಸ್ಮಿತಾ ರಾವ್ ತಾಯಿ ಪದ್ಮಜಾರಾವ್ ನೇರವಾಗಿ ಆರೋಪ ಹೊರೆಸಿದ್ದಾರೆ. 2007ರಲ್ಲಿ ವಿವಾಹವಾಗಿದ್ದ ಈ ಜೋಡಿಯ ಕೌಟುಂಬಿಕ ಕಲಹ ಮುಗಿಲು ಮುಟ್ಟಿತ್ತು. ನನ್ನ ಮಗಳನ್ನು ಮಾನಸಿಕವಾಗಿ ಹಿಂಸಿಸುವುದು ಅಳಿಯ ರೋಹಿತ್ ಗೆ ದಿನ ನಿತ್ಯದ ಕಾಯಕವಾಗಿತ್ತು ಎಂದು ಪದ್ಮಜಾರಾವ್ ಪೊಲೀಸರಿಗೆ ದೂರಿತ್ತಿದ್ದಾರೆ.

ಕೊನೆ ಕ್ಷಣದಲ್ಲಿ ಪತ್ನಿ ಸ್ಮಿತಾರನ್ನು ಬದುಕಿಸಿಕೊಳ್ಳಲು ಯತ್ನಿಸಿ ವಿಫಲರಾದ ರೋಹಿತ್ ಮೇಲೆ ಐಪಿಸಿ ಸೆಕ್ಷನ್ 304 ಬಿ ಹಾಗೂ 498A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಮಿತಾ ರಾವ್ ಮರಣೋತ್ತರ ಪರೀಕ್ಷೆ ವರದಿ ಮಂಗಳವಾರ ಸಂಜೆ ವೇಳೆಗೆ ಸಿಗುವ ಸಾಧ್ಯತೆಯಿದೆ.

ಸುಳಿವು ನೀಡದ ಪೊಲೀಸರು:
ಮಂತ್ರಿ ಸ್ಪ್ಲೆಂಡರ್ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಸಾಯುವುದಕ್ಕೂ ಮುನ್ನ ಸ್ಮಿತಾ ತಮ್ಮ ಪತಿ ರೋಹಿತ್ ಗೆ ಕೊನೆ ಬಾರಿಗೆ ಕಾಲ್ ಮಾಡಿದ ವಿಷ್ಯವನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ. ಸ್ಮಿತಾ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಬಗ್ಗೆ ಯಾವುದೇ ಸುಳಿವು ಸೂಚನೆ ನೀಡಲು ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾಕರ್ ನಿರಾಕರಿಸಿದ್ದಾರೆ.

English summary
Infosys' assistant manager and former woman journalist Smitha Rao who hanged herself to death on Monday(Nov.28). With the mystery regarding her death gaining momentum, there are reports that suggest that she was being harassed by her husband, Rohit. Rohit is working as a software engineer with the popular search engine firm Google.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X