ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿಗೆ ಯಡಿಯೂರಪ್ಪ ಗಿಫ್ಟ್ ಕೊಟ್ಟಿದ್ದು ಏಕೆ?

By Mahesh
|
Google Oneindia Kannada News

BS Yeddyurappa
ಬೆಂಗಳೂರು, ನ.29: ಯಡಿಯೂರಪ್ಪ ಅವರನ್ನು ಸದಾ ಜರೆಯುತ್ತಾ, ನಾಲಾಯಕ್ ಸಿಎಂ ಎನ್ನುತ್ತಿದ್ದ ಡಿಕೆ ಶಿವಕುಮಾರ್ ಅವರು ತುಟಿಗೆ ಪ್ಲಾಸ್ಟರ್ ಹಚ್ಚಿಕೊಂಡು ಸುಮ್ಮನಾಗಿದ್ದು ಏಕೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ತಿಳಿಯದೇ ಹೋಗಿತ್ತು.

ಎರಡು ಬಾರಿ ರಾಜ್ಯಪಾಲರು ಸರ್ಕಾರ ಪತನಕ್ಕೆ ನಾಂದಿ ಹಾಡಿದ್ದಾಗ, ಕೇಂದ್ರ ಒಪ್ಪಿಗೆ ನೀಡದಂತೆ ತಡೆಯುವಲ್ಲಿ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬ ಗುಮಾನಿ ಹಿರಿಯ ಕಾಂಗ್ರೆಸ್ಸಿಗರಿಗೆ ಬಂದಿತ್ತು.

ಡಿಕೆಶಿಗೆ ಯಡ್ಡಿ ಗಿಫ್ಟ್ : ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಸಿಕ್ಕ ಫೇವರ್ ಹೀಗಿದೆ: 5.11 ಎಕರೆ ವಿಸ್ತೀರ್ಣದ ಭೂಮಿಯನ್ನು ಡಿಕೆ ಶಿವಕುಮಾರ್ ಖರೀದಿಸಿದ್ದರು. 1984ರಲ್ಲಿ ಬೆನ್ನಿಗಾನಹಳ್ಳಿಯಲ್ಲಿ ಲೇಔಟ್ ನಿರ್ಮಾಣಕ್ಕೆ ಮೀಸಲಾಗಿದ್ದ ಜಾಗವನ್ನು 2003ರಲ್ಲಿ ನೋಟಿಫೈ ಮಾಡಿ ಸರ್ಕಾರ ಸ್ವಾದೀನಪಡಿಸಿಕೊಂಡಿತ್ತು.

ಆದರೆ, 2010 ರಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ 4.2 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಯಿತು. ಇದಕ್ಕೆ ರಸ್ತೆ ನಿರ್ಮಾಣದ ನೆಪ ನೀಡಲಾಯಿತು.ಆಗ ಬಿಡಿಎಗೆ ಸ್ವಾದೀನಕ್ಕೆ ಎಂದು ಉಳಿದಿದ್ದು 20 ಗುಂಟೆ ಮಾತ್ರ

'20 ವರ್ಷ ಹಿಂದಿಯೇ ಭೂ ಡಿನೋಟಿಫಿಕೇಷನ್ ಆಗಿದೆ ಹಾಗೂ ಮುಖ್ಯ ಕಾರ್ಯದರ್ಶಿ ಬಿಕೆ ದಾಸ್ ಅವರು ಜಮೀನು ಪರಿಶೀಲಿಸಿದ್ದಾರೆ' ಎಂದು ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದು ಸುಳ್ಳು ಎಂಬುದು ಬಿಕೆ ದಾಸ್ ಪ್ರತಿಕ್ರಿಯೆಯಿಂದ ಸಾಬೀತಾಗಿದೆ.

ಈ ಇಡೀ ಪ್ರಕರಣವನ್ನು ಬೆಳಕಿಗೆ ತಂದವರು ಜೆಡಿಎಸ್ ಮುಖಂಡ ಎಂಸಿ ನಾಣಯ್ಯ. ಕರ್ನಾಟಕ ಭೂ ಸಂರಕ್ಷಣಾ ಕಾಯ್ದೆಯನ್ನು ಬಲಿ ಹಾಕಿ, ಆರ್ ಅಶೋಕ್ ಬಳಸಿದ ತಂತ್ರದಂತೆ ಡಿಕೆ ಶಿವಕುಮಾರ್ ಕೂಡಾ ಯಡಿಯೂರಪ್ಪ ಅವರಿಂದ ಫೇವರ್ ಪಡೆದಿದ್ದಾರೆ ಎನ್ನುತ್ತಾರೆ ನಾಣಯ್ಯ.

ಯಡಿಯೂರಪ್ಪ, ಡಿಕೆಶಿಗೆ ನಾಣಯ್ಯ ಎಸೆದಿರುವ ಸವಾಲುಗಳೇನು..?

English summary
Congress leader DK Shivakumar is allegedly granted land by BS Yeddyurappa through land denotification.Yeddyurappa did this to save his government from opposition attack. Former Karnataka chief secretary BK Das has denied inspecting the controversial land purchased by DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X