ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 6, 2012ರಂದು ಕಾಮೆಡ್-ಕೆ ಪ್ರವೇಶ ಪರೀಕ್ಷೆ

By Prasad
|
Google Oneindia Kannada News

Comed-K entrance exam on May 6
ಬೆಂಗಳೂರು, ನ. 29 : ಕರ್ನಾಟಕದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಪೂರ್ವ ಕೋರ್ಸ್‌ಗಳಿಗಾಗಿ ಮೇ 6ರಂದು ಕಾಮೆಡ್-ಕೆ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜು ಸಂಸ್ಥೆ ಈ ದಿನಾಂಕವನ್ನು ಪ್ರಕಟಿಸಿದೆ.

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಮ್.ಸಿ.ಐ) ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕೆಂಬ ಪ್ರಯತ್ನದಲ್ಲಿತ್ತು. ಆದರೆ, ಇದರ ವಿರುದ್ಧ ಕಾಮೆಡ್-ಕೆ ಕೋರ್ಟಿನ ಮೆಟ್ಟಿಲೇರಿತ್ತು. ಎಮ್.ಸಿ.ಐ ಹೊರಡಿಸಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ನವೆಂಬರ್ 21ರಂದು ಮಧ್ಯಂತರ ತಡೆ ನೀಡಿತು.

ಮಾರ್ಚ್ 10, 2012ರಿಂದ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿಗಳು ಲಭ್ಯವಾಗಲಿವೆ. ಈ ಪರೀಕ್ಷೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಕಾಮೆಡ್-ಕೆ ಅಂತರ್ಜಾಲ ತಾಣದಲ್ಲಿ ಫೆಬ್ರವರಿ 15, 2012ರ ನಂತರ ನಿರೀಕ್ಷಿಸಬಹುದು ಎಂದು ಕಾಮೆಡ್-ಕೆ ಚೇರ್ಮನ್ ಎಂ.ಆರ್. ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜು ಮತ್ತು ಕರ್ನಾಟಕದ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಅಸೋಸಿಯೇಷನ್ ಅಧೀನದಲ್ಲಿ ಬರುವ ಕಾಲೇಜುಗಳ ಸೀಟುಗಳಿಗಾಗಿ ಪರೀಕ್ಷೆಗಳು ನಡೆಯಲಿವೆ.

English summary
Entrance tests for Engineering and Medical undergraduate courses by Comed-K will be held on May 6, 2012. This was announced by Karnataka Private Medical and Dental Colleges Association after getting stay order by Karnataka High Court against notification by Medical Council of India for single entrance exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X