ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.1ರಂದು FDI ವಿರೋಧಿಸಿ ಮಾರುಕಟ್ಟೆ ಬಂದ್

By Mahesh
|
Google Oneindia Kannada News

ಮದುರೈ, ನ.29: ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚಿಲ್ಲರೆ ಮಾರುಕಟ್ಟೆ ಒಕ್ಕೂಟ ಅಭಿನಂದಿಸಿದೆ. ಇದರ ಜೊತೆಗೆ ಡಿ.1ರಂದು ಕರೆ ನೀಡಿದ್ದ ರೀಟೈಲ್ ಕ್ಷೇತ್ರದ ಬಂದ್ ಅನ್ನು ಹಿಂಪಡೆದಿದೆ.

ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿ ಮಾಡಿ ಚರ್ಚಿಲು ಮುಂದಾಗಿರುವ Tamil Nadu Chamber of Commerce and Industry(TNCCI) ಒಕ್ಕೂಟ, ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ಯುಪಿಎ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಬಂದ್ ಅನಿವಾರ್ಯ ಎಂದು ಒಕ್ಕೂಟದ ಅಧ್ಯಕ್ಷ ರತ್ನವೇಲು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲೂ ಎಫ್ ಡಿಐ ಬಿಸಿ ನಿಧಾನವಾಗಿ ತಟ್ಟುತ್ತಿದ್ದು, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ರೀಟೈಲ್ ಕ್ಷೇತ್ರವನ್ನು ಡಿ.1ರಂದು ಬಂದ್ ಮಾಡಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಿದ್ಧತೆ ನಡೆಸಿದೆ. ಬಳ್ಳಾರಿ ಉಪ ಚುನಾವಣೆಯಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸರ್ಕಾರಕ್ಕೆ ವ್ಯಾಪಾರಿಗಳ ಕೂಗು ಇನ್ನೂ ಕೇಳಿಸಿಲ್ಲ.

ರೀಟೆಲ್ ಕ್ಷೇತ್ರದಲ್ಲಿ ಎಫ್ ಡಿಐ ಹೂಡಿಕೆ ಬಗ್ಗೆ ನಡೆದ ಸರ್ವಪಕ್ಷಗಳ ಸಭೆ ಮತ್ತೊಮ್ಮೆ ವಿಫಲವಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ವಾದಕ್ಕೆ ಬಿಎಸ್ಪಿ, ಜೆಡಿಯು, ಎಸ್ ಪಿ, ಟಿಆರ್ ಎಸ್, ಡಿಎಂಸಿ, ಬಿಜೆಪಿ, ಎಐಎಡಿಎಂಕೆ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.

English summary
The Tamil Nadu Chamber of Commerce and Industry(TNCCI) surprisingly has withdrew their call on decision to observe a statewide bandh and fast on December 1. But TNCCI welcomed chief minister Jayalalithaa's opposition to FDI in multi-brand retail trade and will observe bandh if UPA cabinet didn't take any action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X