ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ 3ನೇ ದೂರು: 'ಹೌಸ್ ದಟ್ ಮೈ ಲಾರ್ಡ್?' ಎಂದ ಸಿರಾಜಿನ್ ಬಾಷಾ

By Srinath
|
Google Oneindia Kannada News

bsy-bail-different-rulings-questioned-in-sc
ನವದೆಹಲಿ, ನ.29: ಭೂ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ತಕ್ಕಶಾಸ್ತಿ ಆಗಲೇಬೇಕೆಂದು ನಿರ್ಧರಿಸಿರುವ ವಕೀಲ ಸಿರಾಜಿನ್ ಬಾಷಾ ಅವರು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ (SLP) ಸಲ್ಲಿಸಿದ್ದಾರೆ.

ಮೇಲ್ಮನವಿಯಲ್ಲಿ ಯಡಿಯೂರಪ್ಪ ಪ್ರಭಾವಿ ವ್ಯಕ್ತಿ ಆಗಿದ್ದು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ರದ್ದು ಮಾಡಬೇಕು. ಮಾಜಿ ಮುಖ್ಯಮಂತ್ರಿ ಮೇಲಿನ ಆರೋಪಗಳನ್ನು ಕುರಿತು ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದೆ. ಅಲ್ಲದೆ, ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳು ಹೊಸ ಹೊಸ ಆರೋಪಗಳನ್ನು ಬೆಳಕಿಗೆ ತರುತ್ತಿವೆ. ಈ ಕಾರಣಕ್ಕೆ ಜಾಮೀನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಅದಕ್ಕಿಂತ ಮುಖ್ಯವಾಗಿ, ರಾಜ್ಯ ಹೈಕೋರ್ಟಿನ ಎರಡು ವಿಭಾಗೀಯ ಪೀಠಗಳು ಇದೇ ಪ್ರಕರಣದಲ್ಲಿ ನೀಡಿರುವ ಎರಡು ವಿಭಿನ್ನ ತೀರ್ಪುಗಳ ಬಗ್ಗೆ ಸುಪ್ರೀಂಕೋರ್ಟ್‌ ಗಮನ ಸೆಳೆದಿದ್ದಾರೆ.

ಪ್ರಕರಣದ ಸಂಬಂಧ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಸಲ್ಲಿಸಿದಾಗ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಮೇಲ್ನೋಟಕ್ಕೆ (prima facie) ದೂರುದಾರರು ಆತಂಕ ವ್ಯಕ್ತಪಡಿಸಿರುವಂತೆ ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಲಾಗದು ಎಂದು ಆದೇಶಿಸಿದ್ದರು.

ಆದರೆ ಇದೇ ಪ್ರಕರಣ ನ್ಯಾ. ಬಿ.ವಿ. ಪಿಂಟೋ ಅವರ ಪೀಠದ ಮುಂದೆ ಬಂದಾಗ ಅವರು ಲೋಕಾಯುಕ್ತ ವಿಶೇಷ ಕೋರ್ಟ್ ನಿರ್ಣಯವನ್ನು ಖಂಡಿಸುತ್ತಾ, ಆರೋಪಿ ಯಡಿಯೂರಪ್ಪ ಅವರೇನೂ ಕೊಲೆಗಡುಕರಲ್ಲ, ಸಾಮಾನ್ಯ ಆರೋಪಿ, ಅವರಿಗೆ ಜಾಮೀನು ನೀಡತಕ್ಕದ್ದು ಎಂದಿದ್ದರು.

ಹೀಗೆ ಹೈಕೋರ್ಟಿನ ಎರಡು ಪೀಠಗಳು ವಿಭಿನ್ನ ಆದೇಶ ಹೊರಡಿಸಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಸಿರಾಜಿನ್ ಬಾಷಾ 'ಹೌಸ್ ದಟ್ ಮೈ ಲಾರ್ಡ್?' ಎಂದು ದೆಹಲಿಯಲ್ಲಿ ಸೋಮವಾರ ಕೂಗಿದ್ದಾರೆ. ಜತೆಗೆ ನ್ಯಾ. ಬಿ.ವಿ. ಪಿಂಟೋ ಪೀಠ ಜಾಮೀನು ಮಂಜೂರು ಮಾಡಿರುವುದು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಭಂಗ ತಂದಿದೆ ಎಂದೂ ಅವರು ಅಲವತ್ತುಕೊಂಡಿದ್ದಾರೆ.

English summary
A Special Leave Petition (SLP) was filed in the Supreme Court on Monday, challenging the bail granted by the High Court to former chief minister B S Yeddyurappa in a private complaint. The SLP contends that two different Benches of the High Court of Karnataka had given different judgments in the same case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X