ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಬಣ್ಣಬಣ್ಣದ ಸಲಿಂಗಕಾಮಿಗಳ ಪ್ರೈಡ್ ಪರೇಡ್

By Prasad
|
Google Oneindia Kannada News

Pride Parade Bangalore (pic : citizen matters)
ಬೆಂಗಳೂರು, ನ. 28 : ಗಂಡು ಹೆಣ್ಣು ಸಲಿಂಗಕಾಮಿಗಳು, ದ್ವಿಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು, ಹಿಜಡಾಗಳು, ಗಂಡು ಹೆಣ್ಣು ಎರಡೂ ಆಗಿರದವರು ಅಥವಾ ಎರಡೂ ಆಗಿರುವವರು ಬೆಂಗಳೂರಿನ ರಸ್ತೆಯ ಮೇಲೆ ಹಾಡಿದರು, ನರ್ತಿಸಿದರು, ಕುಣಿದಾಡಿದರು, ನಲಿದಾಡಿದರು.

ನ.27 ಭಾನುವಾರ ಸಂಜೆ ಮೆಜೆಸ್ಟಿಕ್ಕಿನಿಂದ ಟೌನ್ ಹಾಲ್ ವರೆಗೆ 'ಪ್ರೈಡ್ ಪರೇಡ್' ನಡೆಸಿದರು. ಸಾವಿರಕ್ಕೂ ಹೆಚ್ಚು ನೆರೆದಿದ್ದ, ಬಣ್ಣಬಣ್ಣದ ದಿರಿಸುಗಳನ್ನು ತೊಟ್ಟಿದ್ದ ಜನರಲ್ಲಿ ಹೆಚ್ಚಿನವರು ಟೆಕ್ಕಿಗಳು. ಬೆಂಗಳೂರು ಮಾತ್ರವಲ್ಲ ನೆರೆಯ ರಾಜ್ಯಗಳಿಂದಲೂ ಸುತ್ತಮುತ್ತಲೂ ನೆರೆದಿದ್ದ ಸಹಸ್ರಾರು ಜನರ ಗಮನ ಸೆಳೆದರು.

ಅವರು ಇಷ್ಟೆಲ್ಲ ಮಾಡಿದ್ದು ತಮ್ಮ ಹಕ್ಕುಗಳ ಆಗ್ರಹಕ್ಕಾಗಿ. ಸಮಾಜದಲ್ಲಿ ನಮಗೂ ಒಂದು ಸ್ಥಳ ಕೊಡಿ, ಮಾನ್ಯತೆ ಕೊಡಿ, ಎಲ್ಲರಂತೆ ಸಹಜವಾಗಿ ಬದುಕಲು ಅವಕಾಶ ಮಾಡಿಕೊಡಿ ಎಂದು ಭಿತ್ತಿಚಿತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಡಿದರು. ಬೇಡಿಕೆಗಳಿಗಿಂತ ಎಲ್ಲ ಸಮಾನಮನಸ್ಕರೂ ಒಂದೆಡೆ ಸೇರಿ ನಲಿದಾಡುವ ವಾತಾವರಣವಿತ್ತು.

ಕಚೇರಿಗಳಲ್ಲಿ ತಮ್ಮ ಲೈಂಗಿಕ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಿದ್ದ ಸಾಫ್ಟ್ ವೇರ್ ಜಗತ್ತಿನ ನೂರಾರು ಟೆಕ್ಕಿಗಳು ಅಲ್ಲಿ ಬಂದು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಬೆಂಗಳೂರು, ಚೆನ್ನೈ, ಕೊಯಮತ್ತೂರು, ಮುಂಬೈ, ಪುಣೆಯಿಂದಲೂ ಸಲಿಂಗಕಾಮಿಗಳು ಬಂದು ತಮ್ಮ ಅಸ್ತಿತ್ವಕ್ಕೆ ಮಾನ್ಯತೆ ನೀಡಿ ಎಂದು ಆಗ್ರಹಿಸಿದರು.

English summary
Sexual minorities, hijadas, lesbians, gays, bisexual and transgender, also called as queer or LGBT community had Pride Parade 2011 in Bangalore on Nov 27, Sunday from Majestic to Town hall. Thousands of like minded people, most of them from software industries, participated in this colorful event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X