ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಶಿಶು ಲೈಂಗಿಕತೆ: ವ್ಯಕ್ತಿಯ ಬಂಧನ

By Srinath
|
Google Oneindia Kannada News

man-views-child-pornography-on-us-flight-held
ಬೋಸ್ಟನ್, ನ.28: ಸಾಲ್ಟ್ ಲೇಕ್ ನಗರದಿದ ಬರುತ್ತಿದ್ದ ವಿಮಾನದಲ್ಲಿ ಶಿಶು ಲೈಂಗಿಕತೆ ವೀಕ್ಷಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 47 ವರ್ಷದ ಗ್ರಾಂಟ್ ಸ್ಮಿತ್ ಶನಿವಾರ ಮಧ್ಯಾಹ್ನ ಪ್ರಥಮ ದರ್ಜೆ ಶ್ರೇಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸ್ಮಿತ್ ಅನುಮಾನಾಸ್ಪದವಾಗಿ (ಒಮ್ಮೆ ಪಕ್ಕದ ಚಿತ್ರ ನೋಡಿ) ತನ್ನ ಲ್ಯಾಪ್‌ಟಾಪ್‌ ವೀಕ್ಷಿಸುತ್ತಿದ್ದ. ಆ ಸಮಯದಲ್ಲಿ ಪಕ್ಕದ ಸೀಟಿನಲ್ಲಿದ್ದ ಸಹ ಪ್ರಯಾಣಿಕ ಅಚಾನಕ್ಕಾಗಿ ಸ್ಮಿತ್ ಲ್ಯಾಪ್‌ಟಾಪ್‌ ಕಡೆ ಕಣ್ಣರಳಿಸಿದಾಗ ಅಶ್ಲೀಲ ಚಿತ್ರಗಳು ಕಣ್ಣಿಗೆ ಬಿದ್ದಿವೆ. ತಕ್ಷಣ ಆ ಸಹ ಪ್ರಯಾಣಿಕರು ವಿಮಾಣದಲ್ಲಿದ್ದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಬೋಸ್ಟನ್ ಲೊಗಾಣ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸದರಿ ವಿಮಾನ ಬಂದಿಳಿಯುತ್ತಿದ್ದಂತೆ ಪೊಲೀಸರು ಸ್ಮಿತ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದರು. ಶಿಶು ಲೈಂಗಿಕತೆಯನ್ನು ಹೊಂದಿದ್ದರ ಜತೆಗೆ ಇನ್ನೂ ಕೆಲವು ಆರೋಪಗಳಡಿ ಸ್ಮಿತ್ ನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

English summary
Police say 47-year-old Grant Smith who was viewing child pornography on a domestic airline flight from Salt Lake City to Boston has been arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X