• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡೇ ಹತ್ಯೆ: ಪತ್ರಕರ್ತೆ ಜಿಗ್ನಾಗಿದೆ ಬಾಲಿವುಡ್ ನಟನ ಲಿಂಕ್

By Mahesh
|

ಮುಂಬೈ, ನ.28: ಮಿಡ್ ಡೇ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪತ್ರಕರ್ತೆ ಜಿಗ್ನಾಗೂ ಜನಪ್ರಿಯ ಬಾಲಿವುಡ್ ನಟನೊಬ್ಬನಿಗೂ ನಿಕಟ ಸಂಪರ್ಕ ಇದೆ ಎಂಬ ವಿಷಯ ಹೊರ ಬಿದ್ದಿದೆ.

ಜೆಡೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗ್ನಾ ವೋರಾ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದ್ದು, ವಿಚಾರಣೆಗಾಗಿ ಪೊಲೀಸರ ವಶಕ್ಕೆ ಸಿಕ್ಕ ನಂತರ ಇನ್ನಷ್ಟು ಸ್ಫೋಟಕ ಮಾಹಿತಿ ಹೊರ ಬೀಳುವ ನಿರೀಕ್ಷೆಯಿದೆ.

ಏಷ್ಯಯನ್ ಏಜ್ ಇಂಗ್ಲೀಷ್ ದಿನಪತ್ರಿಕೆಯಲ್ಲಿ ನ್ಯೂಸ್ ಬ್ಯೂರೋ ಚೀಫ್ ಆಗಿರುವ ಜಿಗ್ನಾ ವೋರಾ ಅವರು ಬಾಲಿವುಡ್ ನ ಖ್ಯಾತ ನಟನಿಗೆ ಬಾತ್ಮಿದಾರಳಾಗಿ ಕೆಲಸ ನಿರ್ವಹಿಸಿದ್ದಾಳೆ. ಕ್ರಿಮಿನಲ್ ಕೇಸ್ ಮೊಕದ್ದಮೆ ಎದುರಿಸುತ್ತಿರುವ ನಟನಿಗೆ ಜಿಗ್ನಾ ಏನೇನೂ ಮಾಹಿತಿ ಒದಗಿಸಿದ್ದಾಳೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಡೇಂಜರಸ್ ವೋರಾ : ಆಕೆ ಮೇಲೆ ಮೊದಲೇ ಗುಮಾನಿ ಇತ್ತು. ಜೆಡೇ ಹತ್ಯೆಗೂ ಮುನ್ನವೇ ಆಕೆಯ ಮೊಬೈಲ್ ಅನ್ನು ನಾವು ಟ್ರಾಪ್ ಮಾಡಲಾಗಿತ್ತು. ಇದರಿಂದ ಆಕೆಗೂ ಭೂಗತ ಜಗತ್ತಿಗೂ ಇರುವ ಸಂಪರ್ಕ ಮತ್ತು ನಟನೊಡನೆ ಇರುವ ಲಿಂಕ್ ಕೂಡಾ ಸ್ಪಷ್ಟವಾಗಿ ತಿಳಿದು ಬಂದಿತು ಎಂದು ಕ್ರೈಂ ಬ್ರ್ಯಾಂಚ್ ಪೊಲೀಸರು ಹೇಳುತ್ತಾರೆ.

ಇತ್ತೀಚೆಗೆ ನಟನೊಂದಿಗೆ ಗುಜರಾತಿ ಭಾಷೆಯಲ್ಲಿ ವೋರಾ ಮಾತನಾಡಿದ್ದಳು. ನಟ ಜೊತೆ ಕ್ರೈಂ ನಲ್ಲಿ ಭಾಗವಹಿಸಿದ್ದ ಸಹಚರನ ಜೈಲುವಾಸದ ಬಗ್ಗೆ ಚರ್ಚಿಸಿದ್ದಳು ಎಂದಿರುವ ಪೊಲೀಸರು ನಟನ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಮಿಡ್ ಡೇ ಹಿರಿಯ ಪತ್ರಕರ್ತ ಜೆಡೇ ಹತ್ಯೆ ಬಳಿಕ ಪೊಲೀಸರಿಗೂ ಕೂಡಾ ಸರಿಯಾದ ಸುಳಿವು ಸಿಕ್ಕಿರಲಿಲ್ಲ.ಛೋಟಾ ರಾಜನ್ ಗ್ಯಾಂಗ್ ನ ಏಳು ಮಂದಿ ಬಂಧಿಸಿ ಸುಮ್ಮನಾಗಿದ್ದರು. ಆದರೆ, ಜಿಗ್ನಾ ಬಂಧನ ನಂತರ ಹೊಸ ಹೊಸ ವಿಷಯಗಳು ಹೊರಬೀಳುತ್ತಿದೆ.

English summary
The Mumbai based journalist Jigna Vora has been accused of giving out the details of the bike number and other details of Jyotirmoy Dey to Mumbai underworld. Latest news is that Jigna has connection with famous Bollywood Actor says Mumbai police sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more