ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ, ಇನ್ಫಿ ಉದ್ಯೋಗಿ ಸ್ಮಿತಾ ರಾವ್ ಆತ್ಮಹತ್ಯೆ

By Mahesh
|
Google Oneindia Kannada News

ಬೆಂಗಳೂರು, ನ.28: ಕೆಲಸದ ಒತ್ತಡ, ಮಾನಸಿಕ ಒತ್ತಡಕ್ಕೆ ಯುವ ಪತ್ರಕರ್ತೆ, ಕಾರ್ಪೋರೇಟ್ ಉದ್ಯೋಗಿ ಸ್ಮಿತಾ ರಾವ್(30)ಬಲಿಯಾಗಿದ್ದಾರೆ. ಸ್ಮಿತಾ ಅವರು ಗೆದ್ದಲಹಳ್ಳಿಯ ಸ್ಲೈಂಡರ್ ಅಪಾರ್ಟ್ ಮೆಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಮಿತಾ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಾನಸಿಕ ಒತ್ತಡ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸ್ಮಿತಾ ಅವರು ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ಏನೂ ಸಿಕ್ಕಿಲ್ಲ. ದಾಂಪತ್ಯ ಕಲಹವೂ ಕಾರಣ ಇರಬಹುದು ಎಂದು ಹೆಣ್ಣೂರು ಪೊಲೀಸರು ಹೇಳಿದ್ದಾರೆ.

ಇನ್ಫೋಸಿಸ್ ನಲ್ಲಿ ಉಪ ವ್ಯವಸ್ಥಾಪಕಿ(ವೆಬ್ ವಿಭಾಗ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಮಿತಾ ಅವರು ಇನ್ಫೋಸಿಸ್ ವೆಬ್ ತಾಣವನ್ನು ನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ನಗರ ವಿಭಾಗದ ಸುದ್ದಿ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದರು.

ಏಷ್ಯಯನ್ ಕಾಲೇಜ್ ಆಫ್ ಜರ್ನಲಿಸಂನ ವಿದ್ಯಾರ್ಥಿಯಾಗಿದ್ದ ಸ್ಮಿತಾ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಹಿರಿಯ ಬಾತ್ಮಿದಾರಳಾಗಿ ಕಾರ್ಯ ನಿರ್ವಹಿಸಿದ್ದರು.

English summary
Journalist, writer and corporate employee Smitha Rao(30) committed suicide in her apartment at Geddalahali in Hennur Police Station limits. Smitha rao worked as deputy city editor at Bangalore Mirror and Senior Correspondent at The Times of India. Smitha Rao moved to Infosys in 2010 and was handling online content of Infosys website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X