ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಬ್ಬ ಭ್ರಷ್ಟ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಅತಿಥಿ

By Srinath
|
Google Oneindia Kannada News

bangalore-kengeri-traffic-inspector-in-lokayukta-net
ಬೆಂಗಳೂರು, ನ.27: ಭ್ರಷ್ಟಾಚಾರದ ವಿರುದ್ಧ ಜನ ಎಲ್ಲೆಲ್ಲೂ ಛೀ ಥೂ ಎಂದು ಉಗಿಯುತ್ತಿದ್ದಾರೆ. ಭ್ರಷ್ಟಾಚಾರಿಗಳು ಕಣ್ಣಿಗೆ ಬಿದ್ದರೆ ಸಾಕು ಬಡಿದುಬಿಸಾಕಲು ತಹತಹಿಸುತ್ತಿದ್ದಾರೆ. ಆದರೂ ಮಾನಗೆಟ್ಟ ಈ ಭ್ರಷ್ಟ ಮಂದಿ ಇನ್ನೂ ಕೈಯೊಡುತ್ತಲೇ ಇದ್ದಾರೆ. ಮತ್ತು ಎಂದಿನಂತೆ ಲೋಕಾಯುಕ್ತ ಅಂಥವರನ್ನು ತನ್ನ ಬಲೆಗೆ ಬೀಳಿಸುತ್ತಿದೆ.

ಕೇವಲ ಎರಡು ತಿಂಗಳ ಹಿಂದೆ ಅಮೃತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಎಂಬ ಮಹಾನುಭಾವ ಲೋಕಾಯುಕ್ತ ದಾಳಿಗೆ ಹೆದರಿ ಇಲಾಖೆಯ ವಾಕಿಟಾಕಿಯೊಂದಿಗೆ ಕಳ್ಳನಂತೆ ಪರಾರಿಯಾಗಿದ್ದ. ಅವರ ವಾರಿಗೆಯವರು ಇದರಿಂದ ಕಿಂಚಿತ್ತೂ ಎಚ್ಚೆತ್ತಂತೆ ಕಾಣುತ್ತಿಲ್ಲ.

ಕೆಂಗೇರಿ ಪೊಲೀಸ್ ಠಾಣೆಯ ಟ್ರಾಫಿಕ್ ಇನ್‌ಸ್ಪೆಕ್ಟರ್ ವಾಸುದೇವ ನಾಯಕ್, ವಶಕ್ಕೆ ಪಡೆದಿದ್ದ ಎರಡು ಲಾರಿಗಳನ್ನು ಬಿಡುಗಡೆ ಮಾಡಲು 1.25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ. ಗಮನಾರ್ಹವೆಂದರೆ ಈ ಭ್ರಷ್ಟ ಇನ್‌ಸ್ಪೆಕ್ಟರುಗಳು ಅಡ್ಡಕಸುಬಿಗೆ ನೆರವಾಗಲೆಂದು ತಮ್ಮ ಅತ್ಯಂತ ನಂಬುಗೆಯ ಬಂಟರನ್ನು ಇಟ್ಟುಕೊಂಡಿರುತ್ತಾರೆ. ಹೆಚ್ಚಾಗಿ ತಮ್ಮ ಊರಿನವರೋ ಅಥವಾ ಜಾತಿಬಾಂಧವರೋ ಇಂತಹ ಕಾರ್ಯಾಚರಣೆಗೆ ನೆರವಾಗುತ್ತಾರೆ.

ಕೆಂಗೇರಿ ಠಾಣೆಯ ಇನ್‌ಸ್ಪೆಕ್ಟರ್ ವಿಷಯದಲ್ಲೂ ಇದೇ ಆಗಿದೆ. ತಮ್ಮ ಊರಿನವ ಕಮ್ ಜಾತಿಬಾಂಧವ ಗಣೇಶ್ ನಾಯಕ್ ಎಂಬುವವನು ಮಧ್ಯವರ್ತಿಯಾಗಿ ಪ್ರಕರಣವೊಂದರಲ್ಲಿ ಇನ್‌ಸ್ಪೆಕ್ಟರ್ ವಾಸುದೇವ ನಾಯಕ್ ಪರ 1.25 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆ ಬೀಸಿದೆ. ಆದರೆ ಈ ತಿಮಿಂಗಲ ಬಲೆಗೆ ಬೀಳದೆ ಪರಾರಿಯಾಗಿದೆ. ಅದೂ ಲಂಚದ ಮಾಲು ಸಮೇತ. ಆದರೆ ಅದಷ್ಟೂ ಘಟನಾವಳಿ ವಿಡಿಯೋ ಆಗಿದೆ. ಇನ್ನು ಇನ್‌ಸ್ಪೆಕ್ಟರ್ ವಾಸುದೇವ ನಾಯಕ್ ಅಂತೂ ಲೋಕಾಯುಕ್ತ ಬಲೆಯಲ್ಲಿ ಸಿಕ್ಕಿ ವಿಲವಿಲ ಒದ್ಲಾಡುತ್ತಿದ್ದಾರೆ.

English summary
The Kengeri traffic police inspector was trapped by the Lokayukta police on Saturday, while he was taking a bribe of Rs 1.5 lakh from a Tamil Nadu-based trucker in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X